ನವದೆಹಲಿ: ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ನಾಲ್ವರು ಭಾರತೀಯ ಬಾಕ್ಸರ್ಗಳು ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿದ್ದಾರೆ.
ಇದೇ ಮೊದಲ ಬಾರಿಗೆ ಪುರುಷ ಮತ್ತು ಮಹಿಳೆಯರ ಜೂನಿಯರ್ ಮತ್ತು ಯೂತ್ ಬಾಕ್ಸರ್ಗಳಿಗೆ ಒಂದೇ ಟೂರ್ನಮೆಂಟ್ ನಡೆಸಲಾಗುತ್ತಿದೆ. ಸೋಮವಾರ ಯೂತ್ ಬಾಕ್ಸರ್ಗಳಲ್ಲಿ 7 ಮಂದಿ ಕ್ವಾರ್ಟರ್ ಫೈನಲ್ನಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ 4 ಮಂದಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಸಫಲರಾಗಿದ್ದಾರೆ.
ಜಯದೀಪ್ ರಾವತ್(71ಕೆಜಿ) ಯುಎಇನ ಮೊಹಮ್ಮದ್ ಇಸ್ಸಾ ವಿರುದ್ಧ ಜಯ ಸಾಧಿಸಿದರೆ, ವನ್ಷಾಜ್(63.5ಕೆಜಿ) ವಿಭಾಗದಲ್ಲಿ ತಜಕಿಸ್ತಾನದ ಮಖ್ಕಮೊವ್ ದಾವೋದ್ ವಿರುದ್ಧ, ದಕ್ಷ ಸಿಂಗ್(67ಕೆಜಿ) ಕಿರ್ಗಿಸ್ತಾನದ ಎಲ್ಡರ್ ತುರ್ದುಬೇವ್ ವಿರುದ್ಧ 4-1ರಲ್ಲಿ ಜಯ ಸಾಧಿಸಿದರು.
ಸುರೇಶ್ ವಿಶ್ವನಾಥ್(48 ಕೆಜಿ) ಕೂಡ ಕಿರ್ಗಿಸ್ತಾನದ ಅಮಂತೂರ್ ಜೊಲ್ಬೊರೊಸ್ ವಿರುದ್ಧ 5-0ಯಲ್ಲಿ ಗೆಲುವು ಸಾಧಿಸಿದರು. ಆದರೆ, ವಿಕ್ಟರ್ ಸಾಯ್ಕೋಮ್ ಸಿಂಗ್(54), ವಿಜಯ್ ಸಿಂಗ್(57) ಹಾಗೂ ರಬೀಂದ್ರ ಸಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಂಡರು.
ಕೋವಿಡ್ 19 ಕಾರಣ ಕೆಲವು ರಾಷ್ಟ್ರಗಳು ಈ ಟೂರ್ನಮೆಂಟ್ನಲ್ಲಿ ಭಾಗವಹಿಸಿಲ್ಲ, ಇನ್ನೂ ಕೆಲವು ರಾಷ್ಟ್ರಗಳು ಕಡಿಮೆ ಸ್ಪರ್ಧಿಗಳನ್ನು ಕಳುಹಿಸಿವೆ. ಭಾರತಕ್ಕೆ 25ಕ್ಕೆ ಹೆಚ್ಚು ಪದಕಗಳನ್ನು ಖಚಿತಪಡಿಸಿಕೊಂಡಿದೆ. ಈ ಸ್ಪರ್ಧೆಯಲ್ಲಿ ವಯಸ್ಸಿನ ಆಧಾರಿತ ಗುಂಪಿನಲ್ಲಿ ಚಿನ್ನ ಗೆಲ್ಲುವ ಸ್ಪರ್ಧಿ 6000 ಅಮೆರಿಕನ್ ಡಾಲರ್, ಬೆಳ್ಳಿ ಪದಕ ಗೆದ್ದವರಿಗೆ 3000 ಮತ್ತು ಕಂಚು ಗೆದ್ದವರಿಗೆ 1,500 ಡಾಲರ್ ಬಹುಮಾನ್ ನೀಡಲಾಗುತ್ತದೆ.
ಜೂನಿಯರ್ ಚಾಂಪಿಯನ್ ವಿಭಾಗದಲ್ಲಿ ಚಿನ್ನಕ್ಕೆ 4000 , ಬೆಳ್ಳಿಗೆ 2000 ಮತ್ತು ಕಂಚಿಗೆ 1000 ಡಾಲರ್ ಬಹುಮಾನ ನೀಡಲಾಗುತ್ತದೆ.