ಹೈದರಾಬಾದ್:ಅತ್ಯಂತ ಜನಪ್ರಿಯವಾದ ರೇಸಿಂಗ್ ಕ್ರೀಡೆ ಫಾರ್ಮುಲಾ-ಇ ವಿಶ್ವ ಚಾಂಪಿಯನ್‌ಶಿಪ್ ಇಂದು ನಡೆಯಲಿದೆ. ಹುಸೇನ್ಸಾಗರದ ಎನ್‌ಟಿಆರ್ ರಸ್ತೆ ಮಾರ್ಗದಲ್ಲಿ ಇ-ಕಾರ್ ರೇಸ್ ನಡೆಯಲಿದೆ. ವಿಶೇಷ ಅಂದ್ರೆ ಭಾರತದಲ್ಲಿ ನಡೆಯುತ್ತಿರುವ ಮೊದಲ ಫಾರ್ಮುಲಾ ಒನ್ ರೇಸ್ ಇದಾಗಿದೆ. ಫಾರ್ಮುಲಾ-ಇ ಚಾಂಪಿಯನ್‌ಶಿಪ್ ಹಿನ್ನೆಲೆಯಲ್ಲಿ 5 ದಿನಗಳಿಂದ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ನಿನ್ನೆ ಮಧ್ಯಾಹ್ನದಿಂದ ಸಂಜೆಯವರೆಗೆ ಚಾಲಕರು ಕಾರ್ ರೇಸ್ ಅಭ್ಯಾಸ ನಡೆಸಿದರು. ಇಂದಿನ ಸ್ಪರ್ಧೆಯನ್ನು ವೀಕ್ಷಿಸಲು ಕ್ರಿಕೆಟ್, ಸಿನಿಮಾ ತಾರೆಯರು ಹಾಗೂ ದೇಶ, ವಿದೇಶಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸ್ಪರ್ಧೆಯ ಪ್ರದೇಶವನ್ನು ಪ್ರವೇಶಿಸಲು ಪಾಸ್ ಅಥವಾ ಟಿಕೆಟ್ ಕಡ್ಡಾಯವಾಗಿದೆ. ಅಂತಾರಾಷ್ಟ್ರೀಯ ಸ್ಪರ್ಧೆಯಾದ ಕಾರಣ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಪ್ರೇಕ್ಷಕರನ್ನು ಗ್ಯಾಲರಿಗಳಿಗೆ ಅನುಮತಿಸುವ ಮೊದಲು ಬಿಗಿ ತಪಾಸಣೆ ನಡೆಸಲಾಗುತ್ತದೆ.
ಪ್ರೇಕ್ಷಕರಿಗೆ ಮೊಬೈಲ್ ನಿಷೇಧ:ರೇಸ್ಗೆ ವೀಕ್ಷಿಸಲು ಆಗಮಿಸುವ ವೀಕ್ಷಕರು ಮೊಬೈಲ್ ತರುವಂತಿಲ್ಲ. ಶನಿವಾರ ಬೆಳಗ್ಗೆ 8 ಗಂಟೆಗೆ ಪೂರ್ವ ಅಭ್ಯಾಸ ನಡೆಸಲಿದ್ದಾರೆ. ನಂತರ ಚಾಲಕರು ಮುಖ್ಯ ರೇಸ್‌ಗಾಗಿ ಅಖಾಡ ಪ್ರವೇಶಿಸಲಿದ್ದಾರೆ. ಈ ರೇಸ್ ಒಂದೂವರೆ ಗಂಟೆಗಳ ಕಾಲ ನಡೆಯಲಿದೆ. ಈ ರೇಸ್ ಮೂಲಕ ಹೈದರಾಬಾದ್‌ನಲ್ಲಿ ಭಾರತೀಯ ಮೋಟಾರ್ ಕ್ರೀಡೆಯಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಲಿದೆ. ಫಾರ್ಮುಲಾ ಒನ್ ನಂತರ ಹೈದರಾಬಾದ್ ಅತ್ಯಂತ ಜನಪ್ರಿಯ ಫಾರ್ಮುಲಾ-ಇ ವಿಶ್ವ ಚಾಂಪಿಯನ್‌ಶಿಪ್ ಅನ್ನು ಆಯೋಜಿಸುತ್ತಿದೆ. ದೇಶದಲ್ಲಿಯೇ ಮೊದಲ ಫಾರ್ಮುಲಾ ಒನ್ ರೇಸ್ ಇದಾಗಿದೆ.
22 ರೇಸರ್‌ಗಳು ಭಾಗಿ:11 ಪ್ರಮುಖ ಆಟೋಮೊಬೈಲ್ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. 22 ರೇಸರ್‌ಗಳು ಸ್ಪರ್ಧಿಸಲಿದ್ದಾರೆ. ಭದ್ರತೆಗಾಗಿ ಎನ್‌ಟಿಆರ್ ರಸ್ತೆ ಸರ್ಕ್ಯೂಟ್‌ನ ಎರಡೂ ಬದಿಗಳಲ್ಲಿ ದೊಡ್ಡ ಪ್ರಮಾಣದ ಬ್ಯಾರಿಕೇಡ್‌ಗಳು ಮತ್ತು ಪ್ರೇಕ್ಷಕರ ಗ್ಯಾಲರಿಗಳನ್ನು ಸ್ಥಾಪಿಸಲಾಗಿದೆ.