ಕ್ಯಾಲಿಫೋರ್ನಿಯಾ:ಬೀಚ್ಗೆ ಈಜಲು ತೆರಳಿದ್ದ ವೇಳೆ ಅಪಾಯದಲ್ಲಿ ಸಿಲುಕಿದ್ದ ಮಗನನ್ನು ಕಾಪಾಡಲು ಹೋದ WWE ಸೂಪರ್ ಸ್ಟಾರ್ ಶಾಡ್ ಗ್ಯಾಸ್ಪಾರ್ಡ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
39 ವರ್ಷದ ವಯಸ್ಸಿನ ಗ್ಯಾಸ್ಪಾರ್ಡ್ ಕ್ಯಾಲಿಫೋರ್ನಿಯಾದ ವೆನಿಸ್ ಬೀಚ್ಗೆ ತಮ್ಮ ಮಗನೊಂದಿಗೆ ಈಜಲು ತೆರಳಿದ್ದ ಸಂದರ್ಭದಲ್ಲಿ ಕಾಣೆಯಾಗಿದ್ದರು. ಇದೀಗ ಮೂರು ದಿನಗಳ ನಂತರ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಲೈಫ್ಗಾರ್ಡ್ಸ್ ಗ್ಯಾಸ್ಪರ್ಡ್ ಅವರ ಮಗನನ್ನು ಕಾಪಾಡುವಲ್ಲಿ ಯಶಸ್ವಿಯಾದರೂ, ಗ್ಯಾಸ್ಪರ್ಡ್ ಅವರನ್ನು ಹುಡುಕುವಲ್ಲಿ ವಿಫಲರಾಗಿದ್ದರು. ಇದೀಗ ಅವರ ನಿಧನದ ಸುದ್ದಿ ಖಚಿತವಾಗಿದ್ದು, ಅವರ ಸಾವಿಗೆ ರೆಸ್ಲಿಂಗ್ ಕುಟುಂಬ ಸಂತಾಪ ಸೂಚಿಸಿದೆ.
ಗ್ಯಾಸ್ಪಾರ್ಡ್, ಡಬ್ಲ್ಯೂಡಬ್ಲ್ಯೂಇನಲ್ಲಿ ಜೆಟಿಜಿ ಜೊತೆ ಜನಪ್ರಿಯರಾಗಿದ್ದರು. ಇಬ್ಬರ ಜೋಡಿ 2009ರಲ್ಲಿ ಡಬ್ಲ್ಯೂಡಬ್ಲ್ಯೂಇ ಟ್ಯಾಗ್ ಟೀಮ್ ಪ್ರಶಸ್ತಿ ಸಮ್ಮರ್ ಸ್ಲ್ಯಾಮ್ನಲ್ಲೂ ಪಾಲ್ಗೊಂಡಿತ್ತು.
ಡಬ್ಲ್ಯೂಡಬ್ಲ್ಯೂಇ ಲೆಜೆಂಡ್ಗಳಾದ ಗೋಲ್ಡ್ಬೆರ್ಗ್ , ತ್ರಿಪಲ್ ಹೆಚ್, ಕ್ರಿಸ್ ಜರಿಕೊ, ದಿ ರಾಕ್ ಸೇರಿದಂತೆ ಹಲವು ಸೂಪರ್ ಸ್ಟಾರ್ಗಳು ಸಂತಾಪ ಸೂಚಿಸಿದ್ದಾರೆ.