ನವದೆಹಲಿ: ಬಾಕ್ಸಿಂಗ್ ಟೂರ್ನಮೆಂಟ್ಗಾಗಿ ಒಂದು ತಿಂಗಳ ಕಾಲ ಇಸ್ತಾಂಬೂಲ್ ಪ್ರವಾಸ ಕೈಗೊಂಡಿದ್ದ ಮೂವರು ಬಾಕ್ಸರ್ಗಳು ಸೇರಿದಂತೆ ಭಾರತ ಬಾಕ್ಸಿಂಗ್ ತಂಡದ ಐವರು ಸದಸ್ಯರಿಗೆ ಕೋವಿಡ್ 19 ದೃಢಪಟ್ಟಿದೆ.
ಬಾಸ್ಫರಸ್ ಬಾಕ್ಸಿಂಗ್ ಟೂರ್ನಮೆಂಟ್ಗೆ ಭಾರತ ತಂಡದ ತಿಂಗಳ ಹಿಂದೆ ಪ್ರವಾಸ ಕೈಗೊಂಡಿತ್ತು. ಇದೀಗ ಟೂರ್ನಿ ಮುಗಿದಿದ್ದು, ತವರಿಗೆ ಮರಳಲು ಮುನ್ನ ನಡೆಸಿದ ಕೋವಿಡ್ 19 ಪರೀಕ್ಷೆಯಲ್ಲಿ ಐವರಿಗೆ ಪಾಸಿಟಿವ್ ಬಂದಿದೆ.
ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಗೌರವ್ ಸೋಲಂಕಿ(57ಕೆಜಿ), ಬ್ರಿಜೇಶ್ ಯಾದವ್(81ಕೆಜಿ) ಮತ್ತು ದುರ್ಯೋಧನ ನೇಗಿ (69ಕೆಜಿ) ಕೋವಿಡ್ 19 ಪಾಸಿಟಿವ್ ದೃಢಪಟ್ಟಿರುವ ಬಾಕ್ಸರ್ಗಳಾಗಿದ್ದಾರೆ. ಟೀಮ್ ಕೋಚ್ ಧರ್ಮೇಂದರ್ ಯಾದವ್ ಮತ್ತು ವಿಡಿಯೋ ವಿಶ್ಲೇಷಕ ಮತ್ತು ಫಿಸಿಯೋಥೆರೆಫಿಸ್ಟ್ಗೂ ಕೂಡ ಕೋವಿಡ್ 19 ಪಾಸಿಟಿವ್ ವರದಿ ಪಡೆದಿದ್ದಾರೆ.