ಕರ್ನಾಟಕ

karnataka

ETV Bharat / sports

Qatar VS Senegal: ಸೆನೆಗಲ್ ವಿರುದ್ಧ ಕತಾರ್ ಸೋಲು.. ಪಂದ್ಯಾವಳಿಯಿಂದ ಹೊರಬಿದ್ದಿದೆ  ಆತಿಥೇಯ ರಾಷ್ಟ್ರ - ಈಟಿವಿ ಭಾರತ ಕನ್ನಡ

ಫಿಫಾ ವಿಶ್ವಕಪ್ 2022 ರ ಇಂದಿನ ಎರಡನೇ ಪಂದ್ಯದಲ್ಲಿ ಸೆನೆಗಲ್ ಕತಾರ್ ಅನ್ನು 3-1 ಗೋಲುಗಳಿಂದ ಸೋಲಿಸಿದೆ. ಈ ಮೂಲಕ ಕತಾರ್​ ವಿಶ್ವಕಪ್​ನಿಂದ ಹೊರ ಬಿದ್ದಿದೆ.

Qatar VS Senegal
ಸೆನೆಗಲ್ ವಿರುದ್ಧ ಕತಾರ್ ಸೋಲು

By

Published : Nov 25, 2022, 10:54 PM IST

ದೋಹಾ:ಇಂದಿನ ಫಿಫಾ ವಿಶ್ವಕಪ್‌ನಎರಡನೇ ಪಂದ್ಯದಲ್ಲಿ ಆತಿಥೇಯ ಕತಾರ್​ ಸೆನೆಗಲ್ ಎದರಿಸಿತು. ಸೆನಗಲ್​- ಕತಾರ್​ ವಿರುದ್ಧ 3-1 ಗೋಲ್​ಗಳಿಂದ ಜಯ ಸಾಧಿಸಿತು. ಈ ಸೋಲಿನೊಂದಿಗೆ ಆತಿಥೇಯ ಕತಾರ್ ಟೂರ್ನಿಯಿಂದ ಹೊರಬಿದ್ದಿದೆ.

ಸೆನೆಗಲ್ ಪರ ಬೌಲೆ ದಿಯಾ 41ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದರು. ಎರಡನೇ ಗೋಲು 48ನೇ ನಿಮಿಷದಲ್ಲಿ ಫಮಾರಾ ದಿಧಿಯು ಹಾಗೂ 84ನೇ ನಿಮಿಷದಲ್ಲಿ ಬಾಂಬಾ ಡಿಯೆಂಗ್ ಮೂರನೇ ಗೋಲು ದಾಖಲಿಸಿದರು. ಕತಾರ್ ಪರ ಮೊಹಮ್ಮದ್ ಮುಂಟಾರಿ ಏಕೈಕ ಗೋಲು ದಾಖಲಿಸಿದರು.

ಕತಾರ್​ ಪರ ಒಂದು ಗೋಲ್​ ದಾಖಲಿಸಿದ ಮೊಹಮ್ಮದ್ ಮುಂಟಾರಿ:ಕತಾರ್ ಪಂದ್ಯದ ಮೊದಲ ಗೋಲು 78ನೇ ನಿಮಿಷದಲ್ಲಿ ಗಳಿಸಿತು. ಕತಾರ್​ ಪರವಾಗಿ ಮೊಹಮ್ಮದ್ ಮುಂಟಾರಿ ಅದ್ಭುತ ಗೋಲು ದಾಖಲಿಸಿದರು. ಕತಾರ್​ ಟೂರ್ನಿಯಲ್ಲಿ ಉಳಿಯಬೇಕಾಗಿತ್ತು. ಆದರೆ ರಕ್ಷಣಾತ್ಮಕತೆಯ ಕೊರತೆಯಿಂದ ಮೂರು ಗೋಲ್​ ನೀಡಿ ಸೋಲನುಭವಿಸಿ ನಿರಾಶೆ ಅನುಭವಿಸಿತು.

ಇದನ್ನೂ ಓದಿ:Wales vs Iran FIFA: ಗಾಯದ ಸಮಯದಲ್ಲಿ ಗೋಲು​ ಗಳಿಸಿ ಗೆದ್ದ ಇರಾನ್.. ವೇಲ್ಸ್ ಗೋಲ್‌ಕೀಪರ್​​​​ಗೆ ರೆಡ್ ಕಾರ್ಡ್

ABOUT THE AUTHOR

...view details