ದೋಹಾ(ಕತಾರ್):ವಿಶ್ವಶ್ರೇಷ್ಠ ಫುಟ್ಬಾಲಿಗ ಕ್ರಿಶ್ಚಿಯಾನೊ ರೊನಾಲ್ಡೊ ಬದಲಿಗೆ ಕಣಕ್ಕಿಳಿದ ಸ್ಟ್ರೈಕರ್ ಗೊನ್ಕಾಲೊ ರಾಮೋಸ್ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪೋರ್ಚುಗಲ್ ತಂಡ ಸ್ವಿಜರ್ಲ್ಯಾಂಡ್ ವಿರುದ್ಧ 6-1 ಗೋಲುಗಳ ಭರ್ಜರಿ ಜಯ ಸಾಧಿಸಿ, ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆಯಿತು. ಇನ್ನೊಂದೆಡೆ ಸ್ಪೇನ್ ತಂಡವನ್ನು 'ಶೂಟೌಟ್' ಮಾಡಿದ ಮೊರಾಕ್ಕೊ 3-0 ಅಂತರದಲ್ಲಿ ಗೆದ್ದು 16 ಘಟ್ಟಕ್ಕೆ ಎಂಟ್ರಿ ನೀಡಿತು. ಕ್ವಾರ್ಟರ್ನಲ್ಲಿ ಉಭಯ ತಂಡಗಳು ಸೆಣಸಾಡಲಿವೆ.
ಮಂಗಳವಾರ ತಡರಾತ್ರಿ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ತಂಡ ಸ್ವಿಜರ್ಲ್ಯಾಂಡ್ ವಿರುದ್ಧ ಏಕಮೇವ ಗೆಲುವು ಗೆಲುವು ಸಾಧಿಸಿತು. ಗೊನ್ಕಾಲೊ ರಾಮೋಸ್ 17, 51 ಮತ್ತು 67 ನೇ ನಿಮಿಷದಲ್ಲಿ ಮೂರು ಗೋಲುಗಳನ್ನು ಗಳಿಸಿದರು. ಮತ್ತೊಬ್ಬ ಫಾರ್ವರ್ಡ್ ಆಟಗಾರ ಪೆಪೆ (33ನೇ ನಿಮಿಷ), ರಾಫೆಲ್ ಗೆರೆರೊ (55ನೇ ನಿಮಿಷ), ರಾಫೆಲ್ ಲಿಯೊ(73 ನೇ ನಿಮಿಷ) ಗೋಲು ಗಳಿಸಿದರು.
ವಿಶ್ವಶ್ರೇಷ್ಠ ತಂಡವನ್ನು ಎದುರಿಸಲಾಗದೇ ಸ್ವಿಜರ್ಲ್ಯಾಂಡ್ ಬಸವಳಿಯಿತು. 58ನೇ ನಿಮಿಷದಲ್ಲಿ ಮ್ಯಾನುಯೆಲ್ ಅಕಾಂಜಿ ಒಂದು ಗೋಲು ಗಳಿಸಿ ತಂಡಕ್ಕೆ ಚೈತನ್ಯ ನೀಡಿದರು. ಪೋರ್ಚುಗಲ್ ಕೋಚ್ ಫರ್ನಾಂಡೋ ಸ್ಯಾಂಟೋಸ್ರ ತಂತ್ರ ತಂಡ ಗೆಲುವು ಸಾಧಿಸಲು ಸಾಧ್ಯವಾಯಿತು. ರೊನಾಲ್ಡೊ ಪಂದ್ಯದಲ್ಲಿ ಆಡಿದ್ದಕ್ಕಿಂತಲೂ ಹೊರಗುಳಿದ ಸಮಯವೇ ಹೆಚ್ಚಾಗಿತ್ತು.
ಪಂದ್ಯದ ಬಳಿಕ ಮಾತನಾಡಿದ ಕೋಚ್ ಫರ್ನಾಂಡೋ ಸ್ಯಾಂಟೋಸ್, ರೊನಾಲ್ಡೊ ಬಗ್ಗೆ ವಿಶೇಷ ಗೌರವವಿದೆ. ಅವರನ್ನು ಪಂದ್ಯದಲ್ಲಿ ಹೊರಗಿಡುವುದು ನಮ್ಮ ಉದ್ದೇಶವಾಗಿರಲಿಲ್ಲ. ತಂಡದ ಗೆಲುವು ಮುಖ್ಯವಾಗಿತ್ತು. ರೊನಾಲ್ಡೊ ಜೊತೆ ತಂಡ ಮತ್ತು ಸಂಸ್ಥೆ ಉತ್ತಮ ಸಂಬಂಧ ಹೊಂದಿದೆ ಎಂದು ಹೇಳಿಕೆ ನೀಡಿದರು.