ಕರ್ನಾಟಕ

karnataka

ETV Bharat / sports

ಫಿಫಾ ಫುಟ್ಬಾಲ್​ ವಿಶ್ವಕಪ್​ ಅದ್ಧೂರಿ ಉದ್ಘಾಟನೆ.. ಕೊರಿಯನ್​ ಗಾಯನಕ್ಕೆ ತಲೆ ಬಾಗಿದ ಪ್ರೇಕ್ಷಕರು - ಈಟಿವಿ ಭಾರತ​ ಕರ್ನಾಟಕ

ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಕಲಾವಿದರು ಗಾಯನ ಮತ್ತು ನೃತ್ಯ ಪ್ರದರ್ಶನದ ಮೂಲಕ ಫುಟ್ಬಾಲ್​ ಜಾತ್ರೆ ಅದ್ಧೂರಿಯಾಗಿ ಆರಂಭವಾಗಿದೆ. ದಕ್ಷಿಣ ಕೊರಿಯಾದ ಬಿಟಿಎಸ್ ಬ್ಯಾಂಡ್ ಪ್ರಮುಖ ಆಕರ್ಷಣೆಯಾಗಿದ್ದು, ಗಾಯಕ ಜಂಗ್‌ಕುಕ್ ಹಾಡಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಕುಣಿದು ತಲೆಬಾಗಿದರು.

Etv Bharat
Etv Bharatfifa-world-cup

By

Published : Nov 20, 2022, 10:49 PM IST

ಕತಾರ್: 22 ನೇ ಫಿಫಾ ವಿಶ್ವಕಪ್ 2022 ಮನರಂಜನಾ ಕಾರ್ಯಕ್ರಮದ ಮೂಲಕ ಉದ್ಘಾಟಿನೆಗೊಂಡಿದೆ. ದಕ್ಷಿಣ ಕೊರಿಯಾದ ಬಿಟಿಎಸ್ ಬ್ಯಾಂಡ್ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಲ್ಲೊಂದಾಗಿತ್ತು. ಬಿಟಿಎಸ್ ಬ್ಯಾಂಡ್​ನ ಜಂಗ್‌ಕುಕ್‌ನ ಜೊತೆಗೆ ಸ್ಥಳೀಯ ಕಲಾವಿದರ ತಂಡಗಳೂ ಮನರಂಜನಾ ಕಾರ್ಯಕ್ರಮದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಭಾರತದಿಂದ ಬಾಲಿವುಡ್ ನಟಿ ನೋರಾ ಫತೇಹಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮಧ್ಯಪ್ರದೇಶದ ಪಾನ್ ಅಂಗಡಿ ಮಾಲೀಕನ ಮಗಳಾದ ಶೆಫಾಲಿ ಚೌರಾಸಿ ಗಾಯನ ಹಾಡಿದ್ದಾರೆ. ಶೆಫಾಲಿಯನ್ನು ಹೊರತುಪಡಿಸಿ, ಭಾರತದಿಂದ 60-70 ಸದಸ್ಯರ ತಂಡವು ಗ್ರಾವಿಟಾಸ್ ಮ್ಯಾನೇಜ್‌ಮೆಂಟ್​ನ ಆಹ್ವಾನದ ಮೇರೆಗೆ ವಿಶ್ವಕಪ್​ನಲ್ಲಿ ಪಾಲ್ಗೊಂಡಿದ್ದಾರೆ.

ಫೀಫಾ ಫುಟ್ಬಾಲ್​ ವಿಶ್ವಕಪ್

ಭಾರತದಿಂದ, ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ಫಿಫಾ ವಿಶ್ವಕಪ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲು ದೋಹಾದ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂಚಿತವಾಗಿ ಆಗಮಿಸಿದ್ದರು. ಕತಾರ್ ರಾಜ್ಯದ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರ ಆಹ್ವಾನದ ಮೇರೆಗೆ ಧಂಖರ್ ಅವರು ಎರಡು ದಿನಗಳ ಕತಾರ್ ಭೇಟಿಯಲ್ಲಿದ್ದಾರೆ. ಕತಾರ್ ರಾಜ್ಯಕ್ಕೆ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಮತ್ತು ಕತಾರ್‌ನ ಕಡೆಯಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪರಾಷ್ಟ್ರಪತಿಯನ್ನು ಬರಮಾಡಿಕೊಂಡರು.

ಭಾರತ ತಂಡವು ವಿಶ್ವಕಪ್‌ಗೆ ಅರ್ಹತೆ ಪಡೆದಿಲ್ಲವಾದರೂ ಫುಟ್ಬಾಲ್​ ತಾರೆಯರ ಆಟ ನೋಡಲು ದೇಶಿಗರು ಉತ್ಸುಕರಾಗಿದ್ದಾರೆ. ಇಂದಿನಿಂದ ಡಿಸೆಂಬರ್ 18 ರವರೆಗೆ ಕತಾರ್‌ನಲ್ಲಿ ಫಿಫಾ ವಿಶ್ವಕಪ್ ನಡೆಯಲಿದ್ದು, ಇದರಲ್ಲಿ 32 ದೇಶಗಳ ತಂಡಗಳು ಭಾಗವಹಿಸಲಿವೆ. ತಂಡಗಳನ್ನು ಎಂಟು ಗುಂಪುಗಳಾಗಿ ವಿಂಗಡಿಸಲಾಗಿದೆ. ವಿಶ್ವಕಪ್‌ನಲ್ಲಿ 64 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಇಂದು ರಾತ್ರಿ 9:30ಕ್ಕೆ ಕತಾರ್ ಮತ್ತು ಈಕ್ವೆಡಾರ್ ನಡುವೆ ನಡೆಯಲಿದೆ. ಫಿಫಾ ವಿಶ್ವಕಪ್ 1930 ರಲ್ಲಿ ಉರುಗ್ವೆಯಲ್ಲಿ ಪ್ರಾರಂಭವಾಯಿತು ಮತ್ತು ಆತಿಥೇಯರೇ ಚಾಂಪಿಯನ್ ಆದರು. ವಿಶ್ವಯುದ್ಧದ ಕಾರಣ 1942 ಮತ್ತು 1946 ರಲ್ಲಿ ವಿಶ್ವಕಪ್ ಅನ್ನು ಆಯೋಜನೆಗೊಂಡಿರಲಿಲ್ಲ.

ಇದನ್ನೂ ಓದಿ :FIFA World Cup : ನಾಳೆಯಿಂದ ಕಾಲ್ಚೆಂಡಿನ ವಿಶ್ವಕಪ್

ABOUT THE AUTHOR

...view details