ದೋಹಾ(ಕತಾರ್):ಅರಬ್ಬರ ನಾಡಿನಲ್ಲಿ ಫ್ರಾನ್ಸ್ ಸೋಲಿಸಿ ಅರ್ಜೆಂಟೀನಾ ಫಿಫಾ ವಿಶ್ವಕಪ್ ಕಪ್ ಕಿರೀಟ ಮುಡಿಗೇರಿಸಿಕೊಂಡಿದೆ. ಈ ವೇಳೆ ಗೋಲ್ಡನ್ ಬಾಲ್ ಪ್ರಶಸ್ತಿ ಪಡೆದ ಅರ್ಜೆಂಟೀನಾ ನಾಯಕ ಲಿಯೊನೆಲ್ ಮೆಸ್ಸಿ, ತಾವು ರಾಷ್ಟ್ರೀಯ ತಂಡದಿಂದ ಸದ್ಯ ನಿವೃತ್ತಿ ಹೊಂದುವುದಿಲ್ಲ ಎಂದು ಹೇಳಿದ್ದಾರೆ.
35 ವರ್ಷದ ಮೆಸ್ಸಿಗೆ ಇದೇ ಕೊನೆಯ ವಿಶ್ವಕಪ್ ಎಂದು ಹೇಳಲಾಗಿತ್ತು. ಈ ವಿಶ್ವಕಪ್ ನಂತರ ಅರ್ಜೆಂಟೀನಾ ರಾಷ್ಟ್ರೀಯ ತಂಡದಿಂದ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. 2026ರಲ್ಲಿ ನಾಲ್ಕು ದೇಶಗಳಲ್ಲಿ ಆಯೋಜನೆಗೊಳ್ಳಲಿರುವ ಕಾಲ್ಚೆಂಡಿನ ಆಟಕ್ಕೆ ಆಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿತ್ತು.
ಆದರೆ ಫೈನಲ್ ಬಳಿಕ ಮೆಸ್ಸಿ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದು, 'ಇಲ್ಲ, ನಾನು ಅರ್ಜೆಂಟೀನಾ ರಾಷ್ಟ್ರೀಯ ತಂಡದಿಂದ ನಿವೃತ್ತಿ ಹೊಂದುವುದಿಲ್ಲ. ನಾನು ಚಾಂಪಿಯನ್ ಆಗಿ ಆಡುವುದನ್ನು ಮುಂದುವರೆಸಲು ಬಯಸುತ್ತೇನೆ' ಎಂದಿದ್ದಾರೆ.