ಕರ್ನಾಟಕ

karnataka

ETV Bharat / sports

ತವರು ತಂಡಕ್ಕೆ ಶತ್ರುವಾದ ಬ್ರೀಲ್​ ಎಂಬೊಲೊ.. ಸ್ವಿಟ್ಜರ್​ಲ್ಯಾಂಡ್​ಗೆ ಕ್ಯಾಮರೂನ್​ ವಿರುದ್ಧ 1-0 ಗೆಲುವು - ಕ್ಯಾಮರೂನ್​ ಮುಂದೆ ಸ್ವಿಟ್ಜರ್​ಲ್ಯಾಂಡ್​ ಶೈನ್

ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ನಲ್ಲಿ ಕೆನಡಾ, ಬೆಲ್ಜಿಯಂ ಎದುರು ಸೋಲು ಕಂಡಿದೆ. ಇನ್ನೊಂದೆಡೆ ಕ್ಯಾಮರೂನ್​ ವಿರುದ್ಧ ಸ್ವಿಟ್ಜರ್​ಲ್ಯಾಂಡ್​ ಕೂಡ ಪರಾಜಯಗೊಂಡಿದೆ.

fifa-world-cup-matches
ಸ್ವಿಟ್ಜರ್​ಲ್ಯಾಂಡ್​ಗೆ ಕ್ಯಾಮರೂನ್​ ವಿರುದ್ಧ 1-0 ಗೆಲುವು

By

Published : Nov 24, 2022, 9:00 PM IST

Updated : Nov 24, 2022, 9:43 PM IST

ಕತಾರ್​:ಫಿಫಾ ವಿಶ್ವಕಪ್​ನಲ್ಲಿಂದು ನಡೆದ ಪಂದ್ಯಗಳಲ್ಲಿ ಕೆನಡಾ ವಿರುದ್ಧ ಬೆಲ್ಜಿಯಂ ಮತ್ತು ಕ್ಯಾಮರೂನ್​ ವಿರುದ್ಧ ಸ್ವಿಟ್ಜರ್​ಲ್ಯಾಂಡ್​​ 1-0 ಅಂತರದಿಂದ ಗೆಲುವು ಸಾಧಿಸಿವೆ. ಇಂದು ನಡೆದ 2 ಪಂದ್ಯಗಳಲ್ಲಿ ಸ್ಪಷ್ಟ ಫಲಿತಾಂಶ ಹೊರಬಿದ್ದಿದೆ.

ಅಲ್​ರಯ್ಯಾನ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೆಲ್ಜಿಯಂ ಮತ್ತು ಕೆನಡಾ ತಂಡಗಳು ಸೆಣಸಾಡಿದವು. ಮೊದಲಾರ್ಧದಲ್ಲಿ ಉಭಯ ತಂಡಗಳು ಬಿಗುವಿನ ಆಟವಾಡಿ ಯಾವುದೇ ಗೋಲು ಬಿಟ್ಟುಕೊಡಲಿಲ್ಲ. ಚೆಂಡನ್ನು ಹಿಡಿತಕ್ಕೆ ಪಡೆಯಲು ಕೆನಡಾ ಮತ್ತು ಬೆಲ್ಜಿಯಂ ತಂಡದ ಆಟಗಾರರು ಶತಪ್ರಯತ್ನ ನಡೆಸಿದರು.

ಬಳಿಕ ದ್ವಿತೀಯಾರ್ಧದಲ್ಲಿ ಬೆಲ್ಜಿಯಂ ಚುರುಕಿನ ಆಟವಾಡಿತು. ವಿಶ್ವಕಪ್​ನಲ್ಲಿ ಎರಡನೇ ಸ್ಥಾನಿಯಾಗಿ ಗುರುತಿಸಿಕೊಂಡ ಕೆನಡಾಗೆ ಬೆಲ್ಜಿಯಂನ ಥಿಬೌಟ್ ಕೋರ್ಟೊಯಿಸ್ ಆಘಾತ ನೀಡಿದರು. ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸುವ ಮೂಲಕ 1-0 ಅಂತರ ಸಾಧಿಸಿದರು.

ಬಳಿಕ ಉತ್ತರ ಅಮೆರಿಕ ದೇಶ ಎಷ್ಟೇ ಪ್ರಯತ್ನ ಮಾಡಿದರು. ಬೆಲ್ಜಿಯಂ ಕೋಟೆಯನ್ನು ಭೇದಿಸಲಾಗದೇ, 30 ವರ್ಷಗಳ ಬಳಿಕ ಮತ್ತೆ ವಿಶ್ವಕಪ್​ನಲ್ಲಿ ಮಿಂಚುವ ಅವಕಾಶ ಕಿತ್ತುಕೊಂಡಿತು.

ಕ್ಯಾಮರೂನ್​ ಮುಂದೆ ಸ್ವಿಟ್ಜರ್​ಲ್ಯಾಂಡ್​ ಶೈನ್​:ಅಲ್​ವಾಕ್ರಾದಲ್ಲಿ ನಡೆದ ದಿನದ 2 ನೇ ಪಂದ್ಯದಲ್ಲಿ ಕ್ಯಾಮರೂನ್​ ವಿರುದ್ಧ ಸ್ವಿಟ್ಜರ್​ಲ್ಯಾಂಡ್​ ಗೆದ್ದು ಬೀಗಿತು. ಬ್ರೀಲ್​ ಎಂಬೊಲೊ ಗಳಿಸಿದ ಗೋಲಿನಿಂದ ವಿಶ್ವಕಪ್‌ನಲ್ಲಿ ಕ್ಯಾಮರೂನ್ 1-0 ಗೋಲಿಂದ ಸ್ವಿಟ್ಜರ್ಲೆಂಡ್‌ಗೆ ಶರಣಾಯಿತು. ಬ್ರೀಲ್​ ಎಂಬೊಲೊ ಕ್ಯಾಮರೂನ್​ನಲ್ಲಿ ಜನಿಸಿದ್ದು, ತವರು ತಂಡದ ವಿರುದ್ಧವೇ ಗೋಲು ಗಳಿಸಿ ಸೋಲಿಸಿದರು.

ಓದಿ:ಬೆಲ್ಜಿಯಂಗೆ ಮಣಿದ ಕೆನಡಾ; ಕೋಸ್ಟರಿಕಾ ವಿರುದ್ಧ ಸ್ಪೇನ್‌ಗೆ ಪ್ರಚಂಡ ಗೆಲುವು!

Last Updated : Nov 24, 2022, 9:43 PM IST

ABOUT THE AUTHOR

...view details