ಅಲ್ ಜನೌಬ್ (ಕತಾರ್):ಹಾಲಿ ಚಾಂಪಿಯನ್, ಬಲಾಢ್ಯ ಫ್ರಾನ್ಸ್ ತಂಡವು ಫಿಫಾ ವಿಶ್ವಕಪ್ 2022ರ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ 4-1 ಗೋಲುಗಳಿಂದ ಗೆದ್ದು ಪ್ರತಿಷ್ಟಿತ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಪಂದ್ಯದ ಮೊದಲ 9ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಪರ ಕ್ರೇಗ್ ಗುಡ್ವಿನ್ ಮೊದಲ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಆಕ್ರಮಣಕಾರಿ ಆಟಕ್ಕಿಳಿದ ಫ್ರಾನ್ಸ್ 27ನೇ ನಿಮಿಷದಲ್ಲಿ ಆಡ್ರಿಯನ್ ರಾಬಿಯೊಟ್ ಗೋಲು ಹೊಡೆದು ಎದುರಾಳಿ ತಂಡಕ್ಕೆ ಶಾಕ್ ಕೊಟ್ಟರು. 32ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಆಲಿವರ್ ಗಿರೌಡ್ ಫ್ರಾನ್ಸ್ಗೆ ಮತ್ತಷ್ಟು ಮುನ್ನಡೆ ಕೊಟ್ಟರು.
ಈ ಮುನ್ನಡೆ ಆಸ್ಟ್ರೇಲಿಯಾ ಮೇಲೆ ಫ್ರಾನ್ಸ್ ಹಿಡಿತ ಸಾಧಿಸಲು ನೆರವಾಯಿತು. ಕೈಲಿಯನ್ ಎಂಬಪ್ಪೆ 68 ನೇ ನಿಮಿಷದಲ್ಲಿ ಹೊಡೆದ ಗೋಲು ಹಾಲಿ ಚಾಂಪಿಯನ್ನರಿಗೆ 3-1 ಮೇಲುಗೈ ನೀಡಿತು. ಗಿರೌಡ್ ಅವರು 71ನೇ ನಿಮಿಷದಲ್ಲಿ ತಮ್ಮ ಎರಡನೇ ಗೋಲು ದಾಖಲಿಸಿದಾಗ ಪಂದ್ಯ ಸಂಪೂರ್ಣ ಫ್ರಾನ್ಸ್ ಬಿಗಿಹಿಡಿತಕ್ಕೆ ಬಂದಿತ್ತು. ಈ ಮೂಲಕ ಫಿಫಾ ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ ಗಿರೌಡ್ 51 ಗೋಲುಗಳೊಂದಿಗೆ ದೇರ್ರಿ ಹೆನ್ರಿ ದಾಖಲೆ ಸರಿಗಟ್ಟಿದರು. ಆಸ್ಟ್ರೇಲಿಯಾ ಪರ ಕ್ರೇಗ್ ಗುಡ್ವಿನ್ ಏಕೈಕ ಗೋಲು ದಾಖಲಿಸಿದರು.