ಕಾಸರಗೋಡು (ಕೇರಳ):ಇಡೀ ವಿಶ್ವವೇ ಫಿಫಾ ವಿಶ್ವಕಪ್ ಜಪ ಮಾಡುತ್ತಿದ್ದರೆ, ಇಲ್ಲೊಂದು ಕೇರಳದ ಕುಟುಂಬ ಕತಾರ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಮೇಲಿನ ತಮ್ಮ ಪ್ರೀತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಕೇರಳದ ಸಜಿಲಾಲ್ ಕುಟುಂಬಕ್ಕೆ ಅರ್ಜೆಂಟೀನಾ ಫುಟ್ಬಾಲ್ ತಂಡದ ಮೇಲೆ ಅತೀವ ಅಭಿಮಾನ. ಫುಟ್ಬಾಲ್ ವಿಶ್ವಕಪ್ನಲ್ಲಿ ಅರ್ಜೆಂಟೀನಾ ತಂಡಕ್ಕೆ ತಮ್ಮ ಬೆಂಬಲ ಸೂಚಿಸಲು ಸುಜಿಲಾಲ್ ಅವರ ಪತ್ನಿ ಮತ್ತು ಇಬ್ಬರು ಪುತ್ರರು ನೀಲಿ ಪಟ್ಟಿಯ ಬಿಳಿ ಟಿ - ಶರ್ಟ್‌ಗಳನ್ನು ಧರಿಸಿದ್ದು ಮಾತ್ರವಲ್ಲದೇ, ಅರ್ಜೆಂಟೀನಾ ಮೇಲಿನ ಕ್ರೇಜ್ನಿಂದ ತಮ್ಮ ಕಾರಿಗೂ ನೀಲಿ ಮತ್ತು ಬಿಳಿ ಬಣ್ಣವನ್ನು ಬಳಿದಿದ್ದಾರೆ.