ಕರ್ನಾಟಕ

karnataka

ETV Bharat / sports

ಬ್ರೆಜಿಲ್​ ಮಣಿಸಿ ಸೆಮೀಸ್​ಗೇರಿದ ಕ್ರೊವೇಷಿಯಾ.. ಶೂಟೌಟ್​ನಲ್ಲಿ 4-2 ಗೋಲುಗಳಿಂದ ಜಯ

ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಹಲವು ಅಚ್ಚರಿಯ ಫಲಿತಾಶಂಗಳನ್ನು ನೀಡಿದೆ. ಮೊದಲ ಕ್ವಾರ್ಟರ್​ ಫೈನಲ್​ನಲ್ಲಿ ಪೆನಾಲ್ಟಿ ಶೂಟೌಟ್​ನಲ್ಲಿ ಬ್ರೆಜಿಲ್​ಗೆ ಗೇಟ್​ ಪಾಸ್​ ನೀಡಿದ ಕ್ರೊವೇಷಿಯಾ ಸೆಮೀಸ್​ಗೆ ಲಗ್ಗೆ ಇಟ್ಟಿತು. ಬ್ರೆಜಿಲ್​ 4 ನೇ ಸಲ ಕ್ವಾರ್ಟರ್​ ಸೋಲು ಕಂಡಿತು.

fifa-world-cup-croatia-beat-brazil-in-qfs
ಬ್ರೆಜಿಲ್​ ಮಣಿಸಿ ಸೆಮೀಸ್​ಗೇರಿದ ಕ್ರೊವೇಷಿಯಾ

By

Published : Dec 10, 2022, 6:44 AM IST

Updated : Dec 10, 2022, 7:02 AM IST

ಅಲ್​ರಯ್ಯನ್​(ಕತಾರ್​)​:ತಂಡವಾಗಿ ಆಡಿದರೆ ಬಲಿಷ್ಠ ಪಡೆಯಾದರೂ ಅದಕ್ಕೆ ಮಣ್ಣುಮುಕ್ಕಿಸಬಹುದು ಎಂಬುದನ್ನು ಕ್ರೊವೇಷಿಯಾ ಸಾಬೀತು ಮಾಡಿದೆ. ಶುಕ್ರವಾರ ರಾತ್ರಿ ನಡೆದ ಪ್ರಿ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ 4 ವಿಶ್ವಕಪ್​ ವಿಜೇತ ಬ್ರೆಜಿಲ್​ ವಿರುದ್ಧ ಪೆನಾಲ್ಟಿ ಶೂಟೌಟ್​ನಲ್ಲಿ ಕ್ರೊವೇಷಿಯಾ 4-2 ಗೆಲುವು ಸಾಧಿಸಿ ಸೆಮಿಫೈನಲ್​ ತಲುಪಿತು. ದಾಖಲೆಯ 5ನೇ ವಿಶ್ವಕಪ್​ ಮೇಲೆ ಕಣ್ಣಿಟ್ಟಿದ್ದ ಬಲಾಢ್ಯ ಬ್ರೆಜಿಲ್​ ಕಣ್ಣೀರಿನೊಂದಿಗೆ ಅಭಿಯಾನ ಅಂತ್ಯಗೊಳಿಸಿತು.

ನಿಗದಿತ 90 ನಿಮಿಷದಲ್ಲಿ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗದಿದ್ದಾಗ 30 ನಿಮಿಷಗಳ ಹೆಚ್ಚುವರಿ ಆಟ ಆಡಿಸಲಾಯಿತು. ಸ್ಟಾರ್​ ಪ್ಲೇಯರ್​ ನೇಯ್ಮರ್​ ಜೂನಿಯರ್​ ಕಾಳ್ಚಳಕ ತೋರಿಸಿ 105 ನೇ ನಿಮಿಷದಲ್ಲಿ ಗೋಲು ಬಾರಿಸಿ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿದರು. ಇನ್ನೇನು ಬ್ರೆಜಿಲ್​ ಸೆಮೀಸ್​ ತಲುಪಿತು ಎಂಬುವಷ್ಟರಲ್ಲಿ ಕ್ರೊವೇಷಿಯಾದ ಬ್ರುನೊ ಪೆಟ್ಕೊವಿಚ್​ 116 ನಿಮಿಷದಲ್ಲಿ ಗೋಲು ಗಳಿಸಿ ಆಘಾತ ನೀಡಿದರು. ಹೆಚ್ಚುವರಿ ಸಮಯದಲ್ಲಿ 1-1 ಗೋಲುಗಳಿಂದ ಪಂದ್ಯ ಅಂತ್ಯವಾಯಿತು.

ಶೂಟೌಟ್​ ಆದ ಬ್ರೆಜಿಲ್​:ಹೆಚ್ಚುವರಿ ಸಮಯದಲ್ಲೂ ಪಂದ್ಯ ಫಲಿತಾಂಶ ಕಾಣದ ಹಿನ್ನೆಲೆ ಪೆನಾಲ್ಟಿ ಶೂಟೌಟ್​ ಮೊರೆ ಹೋಗಲಾಯಿತು. ಡೊಮಿನಿಕ್​ ಲಿವಕೊವಿಚ್​ ಎಂಬ ಕ್ರೊವೇಷಿಯಾದ ಭದ್ರಗೋಡೆ ಬ್ರೆಜಿಲ್​ ಆಟಗಾರರ ಕೌಶಲ್ಯವನ್ನು ಮೆಟ್ಟಿ ನಿಂತರು. ಮೊದಲ ಪೆನಾಲ್ಟಿ ಶೂಟ್​ ಅನ್ನು ವಿಫಲಗೊಳಿಸಿದ ಡೊಮಿನಿಕ್​ ಕ್ರೊಷೇಷಿಯಾ ಪಡೆಯಲ್ಲಿ ಸಂತಸ ತಂದರು. ಬಳಿಕ ಇನ್ನೊಂದು ಗೋಲು ತಡೆದು 4-2 ಅಂತರದಲ್ಲಿ ತಂಡವನ್ನು ಗೆಲ್ಲಿಸಿದರು.

4 ಬಾರಿ ಪೆನಾಲ್ಟಿ ಶೂಟೌಟ್​ ಗೆದ್ದ ಕ್ರೊವೇಷಿಯಾ:ಪೆನಾಲ್ಟಿ ಶೂಟೌಟ್​ನಲ್ಲಿ ಕ್ರೊವೇಷಿಯಾ ಸೋಲರಿಯದೇ ಮುನ್ನುಗ್ಗುತ್ತಿದೆ. ಈ ಬಾರಿಯ ಫಿಫಾ ವಿಶ್ವಕಪ್​ನಲ್ಲಿ 2 ಬಾರಿ ಶೂಟೌಟ್​ ಗೆದ್ದರೆ, ಒಟ್ಟಾರೆ 4 ನೇ ಬಾರಿ ಜಯ ಸಾಧಿಸಿದೆ. ಪ್ರಿ ಕ್ವಾರ್ಟರ್​ ಫೈನಲ್​ನಲ್ಲಿ ಜಪಾನ್​ ವಿರುದ್ಧ 3-1 ರಲ್ಲಿ ಗೆಲುವು ಸಾಧಿಸಿದ್ದರೆ, 2018 ರಲ್ಲಿ ಡೆನ್ಮಾರ್ಕ್​ ವಿರುದ್ಧ ಪ್ರಿ ಕ್ವಾರ್ಟರ್​ನಲ್ಲೇ 3-2, ರಷ್ಯಾ ವಿರುದ್ಧ 4-3 ರಲ್ಲಿ ಗೆಲುವು ಸಾಧಿಸಿದ ದಾಖಲೆ ಬರೆದಿತ್ತು.

ಸೋಲಿನಲ್ಲೂ ದಾಖಲೆ ಬರೆದ ನೇಯ್ಮರ್​:ಬ್ರೆಜಿಲ್​ ತಂಡದ ಸ್ಟಾರ್​ ಫುಟ್ಬಾಲಿಗ ನೇಯ್ಮರ್​ ಜೂನಿಯರ್​ ಸೋಲಿನಲ್ಲೂ ತಂಡದ ಪರವಾಗಿ ದಾಖಲೆ ಬರೆದರು. ಬ್ರೆಜಿಲ್​ ಪರ ಅತಿಹೆಚ್ಚು ಗೋಲು ಗಳಿಸಿದ ಆಟಗಾರರಲ್ಲಿ ನೇಯ್ಮರ್​ ಜಂಟಿ ಅಗ್ರಸ್ಥಾನಕ್ಕೇರಿದರು. ಈ ಹಿಂದೆ ಫುಟ್ಬಾಲ್​ ದಿಗ್ಗಜ ಪೀಲೆ 77 ಗೋಲುಗಳ ದಾಖಲೆಯನ್ನು ನೇಯ್ಮರ್ ಸರಿಗಟ್ಟಿದರು.

ಓದಿ:ಫಿಫಾ ವಿಶ್ವಕಪ್​ ಕ್ವಾರ್ಟರ್‌ ಫೈನಲ್: ತಂಡಗಳ ಜೆರ್ಸಿಗೆ ಹೆಚ್ಚುತ್ತಿರೋ ಬೇಡಿಕೆ

Last Updated : Dec 10, 2022, 7:02 AM IST

ABOUT THE AUTHOR

...view details