ಹೈದರಾಬಾದ್: ಕಾಲ್ಚೆಂಡಿನ ವಿಶ್ವಕಪ್ ನಾಳೆಯಿಂದ ಆರಂಭವಾಗಲಿದೆ. ಇದಕ್ಕಾಗಿ ಆತಿಥೇಯ ರಾಷ್ಟ್ರ ಕತಾರ್‌ನಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಫೀಫಾ ವಿಶ್ವಕಪ್ ಕತಾರ್‌ನಲ್ಲಿ 20 ನವೆಂಬರ್ 2022 ರಿಂದ 18 ಡಿಸೆಂಬರ್ 2022 ರವರೆಗೆ ನಡೆಯಲಿದೆ.
ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವಿನ ಪಂದ್ಯದ ಮೂಲಕ ಫುಟ್‌ಬಾಲ್‌ನ ವಿಶ್ವಕಪ್ ಪ್ರಾರಂಭವಾಗಲಿದೆ. ಅರಬ್ ರಾಷ್ಟ್ರದಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ನಡೆಯುತ್ತಿದ್ದು, 32 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊಗೆ ಇದು ಕೊಲೆಯ ಕಾಲ್ಚೆಂಡಿನ ವಿಶ್ವಕಪ್ ಆಗಿರಲಿದೆ.
ಉದ್ಘಾಟನಾ ಸಮಾರಂಭದ ವಿಶೇಷ ಅಥಿತಿ ಯಾರು? :ನಾಳೆಫಿಫಾ ವರ್ಲ್ಡ್ 2022 ರ ಉದ್ಘಾಟನಾ ಸಮಾರಂಭವು ಸಹ ನಡೆಯಲಿದ್ದು, ಎಲ್ಲರೂ ಕಾಯುತ್ತಿದ್ದಾರೆ. ನೋರಾ ಫತೇಹಿ ಕೂಡ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡುವ ಸಾಧ್ಯತೆ ಇದೆ.
2022 ರ ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕಾಗಿ ಫೀಫಾ ಇನ್ನೂ ಸಂಪೂರ್ಣ ಪ್ರದರ್ಶನಕಾರರ ಪಟ್ಟಿಯನ್ನು ಪ್ರಕಟಿಸಿಲ್ಲ. ದಕ್ಷಿಣ ಕೊರಿಯಾದ ರಾಕ್ ಬ್ಯಾಂಡ್ನ ಏಳು ಸದಸ್ಯರಲ್ಲಿ ಒಬ್ಬರಾದ ಜಂಗ್‌ಕುಕ್ ಅವರು ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ, ಅದು ದೃಢೀಕರಿಸಲ್ಪಟ್ಟಿದೆ.
ಮ್ಯೂಸಿಕಲ್ ಗ್ರೂಪ್ ಬ್ಲ್ಯಾಕ್ ಐಡ್ ಪೀಸ್, ರಾಬಿ ವಿಲಿಯಮ್ಸ್ ಮತ್ತು ಭಾರತೀಯ ನಟಿ ನೋರಾ ಫತೇಹಿ ಕೂಡ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ನವೆಂಬರ್ 20 ರಂದು ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವಿನ ಆರಂಭಿಕ ಪಂದ್ಯದ ಮೊದಲು ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಉದ್ಘಾಟನಾ ಸಮಾರಂಭ ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಈ ವರೆಗೆ ಪ್ರಶಸ್ತಿ ಗೆದ್ದ ತಂಡಗಳು :ಫಿಫಾ ಫುಟ್ಬಾಲ್ ವಿಶ್ವಕಪ್ ಇದುವರೆಗೂ 21 ಆವೃತ್ತಿಗಳಿಗೆ ಸಾಕ್ಷಿಯಾಗಿದೆ. 79 ತಂಡಗಳು ಕಪ್ಗಾಗಿ ಸೆಣಸಿದರೂ ಚಾಂಪಿಯನ್ ಆಗಿದ್ದು ಮಾತ್ರ 8 ತಂಡಗಳು. 5 ಬಾರಿ ಪ್ರಶಸ್ತಿ ಮುಡಿಗೇರಿಸಿ ಕೊಂಡಿರುವ ಬ್ರೆಜಿಲ್ ಆರನೇ ಕಪ್ಗಾಗಿ ಕಣ್ಣಿಟ್ಟಿದೆ. ಜರ್ಮನಿ ಹಾಗೂ ಇಟಲಿ ತಲಾ 4 ಬಾರಿ, ಅರ್ಜೆಂಟೀನಾ, ಫ್ರಾನ್ಸ್, ಉರುಗ್ವೆ ತಲಾ 2 ಬಾರಿ, ಇಂಗ್ಲೆಂಡ್ ಮತ್ತು ಸ್ಪೇನ್ ತಲಾ ಒಂದು ಬಾರಿ ಪ್ರಶಸ್ತಿಗೆದ್ದಿವೆ.
ಕಪ್ನ ವಿಶೇಷತೆ ಏನು? :ಫುಟ್ಬಾಲ್ ವಿಶ್ವಕಪ್ನ ಟ್ರೋಫಿಯು 36 ಸೆಂ.ಮೀ ಉದ್ದ ಇದ್ದು, 18 ಕ್ಯಾರೆಟ್ ಚಿನ್ನದಿಂದ ತಯಾರಾಗಿದೆ. ಇದರ ತೂಕ 6.17 ಕೆ.ಜಿ. ಫೈನಲ್ನಲ್ಲಿ ಗೆದ್ದ ತಂಡಕ್ಕೆ ಸಂಭ್ರಮಾಚರಣೆಗೆ ಮಾತ್ರ ಈ ಕಪ್ ನೀಡಲಾಗುತ್ತದೆ. ಆ ಬಳಿಕ ಗೆದ್ದ ತಂಡಕ್ಕೆ ಮೂಲ ಕಪ್ ಹೋಲುವ ಚಿನ್ನದ ಕೋಟಿಂಗ್ ಇರುವ ಟ್ರೋಫಿ ನೀಡಲಾಗುತ್ತದೆ.
ಇದನ್ನೂ ಓದಿ :ಏಷ್ಯನ್ ಕಪ್ ಟೇಬಲ್ ಟೆನಿಸ್ ಟೂರ್ನಿ: ಭಾರತದ ಮನಿಕಾ ಬಾತ್ರ ಸೆಮಿಫೈನಲ್ನಲ್ಲಿ ಔಟ್