ಕರ್ನಾಟಕ

karnataka

ETV Bharat / sports

ಪೋಲೆಂಡ್​ ಮಣಿಸಿ ಪ್ರೀ ಕ್ವಾರ್ಟರ್​ಗೆ ಲಗ್ಗೆ ಹಾಕಿದ ಮೆಸ್ಸಿ ಬಳಗ

ಫಿಫಾ ವಿಶ್ವಕಪ್: ಪೋಲೆಂಡ್​ ವಿರುದ್ದ ಅರ್ಜೆಂಟೀನಾ 2-0 ಗೋಲುಗಳಿಂದ ಗೆಲುವು ಪಡೆಯಿತು.

Argentina advance to the pre-quarter after winning against Poland
ಪೋಲೆಂಡ್​ ಎದುರು ಗೆದ್ದ ಅರ್ಜೆಂಟೀನಾ ಪ್ರೀ ಕ್ವಾರ್ಟರ್​ಗೆ ಲಗ್ಗೆ

By

Published : Dec 2, 2022, 9:49 AM IST

ದೋಹಾ (ಕತಾರ್):ಫಿಫಾ ವಿಶ್ವಕಪ್​ 2022ರ ಟೂರ್ನಿಯಲ್ಲಿ ಪೋಲೆಂಡ್​ ಮಣಿಸಿದ ಅರ್ಜೆಂಟೀನಾ ಪ್ರೀ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು. ಪಂದ್ಯದ ದ್ವಿತೀಯಾರ್ಧದಲ್ಲಿ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಮತ್ತು 67ನೇ ನಿಮಿಷದಲ್ಲಿ ಜೂಲಿಯನ್ ಅಲ್ವಾರೆಜ್ ಹೊಡೆದ ಗೋಲುಗಳಿಂದ ಪೋಲೆಂಡ್​ ವಿರುದ್ದ 2-0 ಅಂತರದಲ್ಲಿ ಅರ್ಜೆಂಟೀನಾ ಗೆಲುವು ತನ್ನದಾಗಿಸಿಕೊಂಡಿದೆ.

ವಿಶ್ವಕಪ್​ ಗೆಲ್ಲುವ ಫೇವರಿಟ್‌ ತಂಡವೆಂದೇ ಹೇಳಲಾಗಿದ್ದ ಮೆಸ್ಸಿ ಪಡೆಗೆ ಸೌದಿ ಅರೇಬಿಯಾ ಮೊದಲ ಪಂದ್ಯದಲ್ಲಿ 2-1 ಗೋಲುಗಳಿಂದ ಆಘಾತಕಾರಿ ಸೋಲು ನೀಡಿತ್ತು. ಹೀಗಾಗಿ, ಉಳಿದ ಪಂದ್ಯವನ್ನೆಲ್ಲ ಗೆಲ್ಲಲೇಬೇಕಾದ ಒತ್ತಡದಲ್ಲಿದ ಅರ್ಜೆಂಟೀನಾ ಸಿಲುಕಿತ್ತು. ನಿರೀಕ್ಷೆಗೆ ತಕ್ಕಂತೆ ಉಳಿದ 2 ಪಂದ್ಯಗಳನ್ನು ಗೆದ್ದಿರುವ ಮೆಸ್ಸಿ ಟೀಂ ಪ್ರೀ ಕ್ವಾರ್ಟರ್​ ಪ್ರವೇಶಿಸಿದೆ.

ಇದನ್ನೂ ಓದಿ:ಫಿಫಾ ವಿಶ್ವಕಪ್‌: ಪಂದ್ಯ ಗೆದ್ದರೂ ಟೂರ್ನಿಯಿಂದ ಹೊರಬಿದ್ದ ಜರ್ಮನಿ

ABOUT THE AUTHOR

...view details