ಕತಾರ್ ವಿಶ್ವಕಪ್‌ನ ಎ ಗುಂಪಿನಲ್ಲಿ ನೆದರ್ಲೆಂಡ್ಸ್ ಮತ್ತು ಈಕ್ವೆಡಾರ್ ಡ್ರಾದಲ್ಲಿ ಕೊನೆಗೊಂಡಿವೆ. ಶುಕ್ರವಾರ (ನವೆಂಬರ್ 25) ನಡೆದ ಪಂದ್ಯದಲ್ಲಿ ಎರಡೂ ತಂಡಗಳು ತಲಾ ಒಂದು ಗೋಲು ಗಳಿಸಿದವು. ಈ ಪಂದ್ಯದಿಂದ ಇಬ್ಬರೂ ತಲಾ ಒಂದೊಂದು ಅಂಕ ಪಡೆದರು. ಈ ಮೂಲಕ ನೆದರ್ಲೆಂಡ್ಸ್ ಮತ್ತು ಈಕ್ವೆಡಾರ್ ತಲಾ ನಾಲ್ಕು ಅಂಕಗಳೊಂದಿಗೆ ಮೊದಲನೇ ಎರಡು ಸ್ಥಾನಗಳನ್ನು ಅಲಂಕರಿಸಿದ್ದಾವೆ.
ಸೆನೆಗಲ್ ಮೂರು ಅಂಕಗಳೊಂದಿಗೆ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಮೂವರಿಗೂ ಮುಂದಿನ ಸುತ್ತು ತಲುಪುವ ಅವಕಾಶವಿದೆ. ಈ ಪಂದ್ಯದ ಡ್ರಾ ನಂತರ ಆತಿಥೇಯ ಕತಾರ್ ಪಂದ್ಯಾವಳಿಯಿಂದ ಹೊರಬಿದ್ದಿದೆ.
ನೆದರ್ಲೆಂಡ್ಸ್ ವಿರುದ್ಧ ಈಕ್ವೆಡಾರ್ ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು 1-1 ರಿಂದ ಡ್ರಾ ಮಾಡಿಕೊಂಡಿತು. ಈ ಡ್ರಾ ನಂತರ, ಈಕ್ವೆಡಾರ್ ಮತ್ತು ನೆದರ್ಲ್ಯಾಂಡ್ಸ್ ಎರಡು ಪಂದ್ಯಗಳಲ್ಲಿ ತಲಾ ನಾಲ್ಕು ಅಂಕಗಳನ್ನು ಹೊಂದಿವೆ. ಎರಡೂ ತಂಡಗಳು ಎ ಗುಂಪಿನಲ್ಲಿ ಅಗ್ರ ಎರಡು ಸ್ಥಾನಗಳಲ್ಲಿವೆ. ಸೆನೆಗಲ್ ಎರಡು ಪಂದ್ಯಗಳಿಂದ ಮೂರು ಅಂಕಗಳನ್ನು ಹೊಂದಿದೆ. ಅದೇ ಸಮಯದಲ್ಲಿ, ಎರಡು ಪಂದ್ಯಗಳಲ್ಲಿ ಕತಾರ್ ಖಾತೆಯನ್ನು ತೆರೆಯಲಾಗಿಲ್ಲ.
ಇನ್ನು, ಈಕ್ವೆಡಾರ್ ಸೆನೆಗಲ್ ಹಾಗೂ ಕತಾರ್ ನೆದರ್ಲೆಂಡ್ ತಂಡವನ್ನು ಎದುರಿಸಲಿದೆ. ಈಕ್ವೆಡಾರ್ ಕೂಡ ಸೆನೆಗಲ್ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ಐದು ಅಂಕಗಳೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ ತಲುಪಲಿದೆ. ನೆದರ್‌ಲ್ಯಾಂಡ್‌ನಲ್ಲೂ ಇದೇ ಲೆಕ್ಕಾಚಾರವಿದೆ. ಕತಾರ್ ವಿರುದ್ಧ ಕನಿಷ್ಠ ಡ್ರಾ ಮಾಡಿಕೊಂಡರೆ ಮುಂದೆ ಹೋಗುತ್ತಾರೆ. ಸೆನೆಗಲ್ ತಂಡ ಮುಂದಿನ ಪಂದ್ಯ ಗೆಲ್ಲಲೇ ಬೇಕಾದ ಸ್ಥಿತಿಗೆ ಸಿಲುಕಿಕೊಂಡಿದೆ.
ಓದಿ:Qatar VS Senegal: ಸೆನೆಗಲ್ ವಿರುದ್ಧ ಕತಾರ್ ಸೋಲು.. ಪಂದ್ಯಾವಳಿಯಿಂದ ಹೊರಬಿದ್ದಿದೆ ಆತಿಥೇಯ ರಾಷ್ಟ್ರ