ಅಲ್ವಾಕ್ರಾ(ಕತಾರ್):ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಸೋತು ನಾಕೌಟ್ ಹಂತದಿಂದ ಹೊರಬೀಳುವ ಭೀತಿಯಲ್ಲಿದ್ದ ಆಸ್ಟ್ರೇಲಿಯಾ ಇಂದು ನಡೆದ ಟ್ಯುನೀಷಿಯಾ ವಿರುದ್ಧದ ಪಂದ್ಯದಲ್ಲಿ ಏಕೈಕ ಗೋಲಿನಿಂದ ಗೆಲುವು ಸಾಧಿಸಿ ಗ್ರೂಪ್ ಡಿ ಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿತು.
ಅಲ್ವಾಕ್ರಾ ಮೈದಾನದಲ್ಲಿ ಟ್ಯುನೀಷಿಯಾ ವಿರುದ್ದ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 1 -0 ಗೋಲುಗಳಿಂದ ಗೆಲುವು ಸಾಧಿಸಿತು. ಆಸೀಸ್ನ ಮಿಚೆಲ್ ಡ್ಯೂಕ್ ಮೊದಲಾರ್ಧದಲ್ಲಿ ಹೆಡರ್ ಶಾಟ್ ಮೂಲಕ ಗೋಲು ಬಾರಿಸಿದರು. ಇದು ಆಸೀಸ್ಗೆ ಜೀವದಾನ ನೀಡಿತು. ಟ್ಯುನೀಷಿಯಾಗೆ ಯಾವುದೇ ಹಂತದಲ್ಲಿ ಗೋಲು ಗಳಿಸಲು ಅವಕಾಶ ಮಾಡಿಕೊಡದೇ ಗೋಲು ಉಳಿಸಿಕೊಂಡು ಜಯದ ನಗೆ ಬೀರಿತು.