ಕರ್ನಾಟಕ

karnataka

ETV Bharat / sports

ವಿಶ್ವಕಪ್​ ಗೆಲುವಿಗಾಗಿ ಸಾಕಷ್ಟು ಎದುರು ನೋಡುತ್ತಿದ್ದೆ: ಅರ್ಜೆಂಟೀನಾ ತಂಡದ ನಾಯಕ ಮೆಸ್ಸಿ - ಅರ್ಜೆಂಟೀನಾ

ನಾನು ವಿಶ್ವಕಪ್​ ಗೆಲುವಿಗಾಗಿ ಸಾಕಷ್ಟು ಎದುರು ನೋಡುತ್ತಿದ್ದೆ ಎಂದು ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಹೇಳಿದ್ದಾರೆ.

fifa-world-cup-2022-argentina-captain-lionel-messi-reacts-to-world-cup-victory
ವಿಶ್ವಕಪ್​ ಗೆಲುವಿಗಾಗಿ ಸಾಕಷ್ಟು ಎದುರು ನೋಡುತ್ತಿದ್ದೆ: ಅರ್ಜೆಂಟೀನಾ ತಂಡದ ನಾಯಕ ಮೆಸ್ಸಿ

By

Published : Dec 20, 2022, 5:37 PM IST

ನವದೆಹಲಿ: ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಫ್ರಾನ್ಸ್​ ವಿರುದ್ಧ​ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಗೆದ್ದು ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಟೂರ್ನಿಯಲ್ಲಿ ಗೋಲ್ಡನ್​ ಬಾಲ್ ಪ್ರಶಸ್ತಿ ವಿಜೇತ, ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಪ್ರತಿಕ್ರಿಯಿಸಿದ್ದು, ವಿಶ್ವಕಪ್​ ಬಗ್ಗೆ ಎಷ್ಟು ಬಾರಿ ಕನಸು ಕಂಡಿದ್ದೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಅರ್ಜೆಂಟೀನಾ ತಂಡ 1978 ಮತ್ತು 1986ರಲ್ಲಿ ಫುಟ್ಬಾಲ್​ ವಿಶ್ವಕಪ್​ ಗೆದ್ದಿತ್ತು. ಇದಾದ 36 ವರ್ಷಗಳ ಬಳಿಕ ಮೂರನೇ ಬಾರಿಗೆ ವಿಶ್ವಕಪ್ ಟ್ರೋಫಿಗೆ ಅರ್ಜೆಂಟೀನಾ ಮುತ್ತಿಕ್ಕಿದೆ. ಈ ಮೂಲಕ ಲೆಜೆಂಡ್​ ಆಟಗಾರ ಮೆಸ್ಸಿ ವಿಶ್ವಕಪ್​ ಗೆಲ್ಲುವ ಕನಸು ಸಹ ನನಸಾಗಿದೆ.

ಇದನ್ನೂ ಓದಿ:ರೆಕಾರ್ಡ್​ಗಳ ರಾಜ.. ವಿಶ್ವಕಪ್​ನ ಫೈನಲ್​ನಲ್ಲೂ ಮೆಸ್ಸಿ ದಾಖಲೆಗಳ ಸುರಿಮಳೆ

ನಾನು ವಿಶ್ವಕಪ್​ ಗೆಲುವಿಗಾಗಿ ಸಾಕಷ್ಟು ಎದುರು ನೋಡುತ್ತಿದ್ದೆ. ಅದು ಇಲ್ಲಿಯವರೆಗೆ ಸಾಧ್ಯವಾಗಿರಲಿಲ್ಲ. ಆದರೆ, ಈಗ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಯಾವಾಗಲೂ ಬೆಂಬಲಿಸಿದ ನನ್ನ ಕುಟುಂಬ ಹಾಗೂ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅರ್ಜೆಂಟೀನಾದ ಜನರು ಒಟ್ಟಾಗಿ ಹೋರಾಡಿದಾಗ ಏನನ್ನಾದರೂ ಸಾಧಿಸಬಹುದು ಎಂದು ನಾವು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ ಎಂದು ಮೆಸ್ಸಿ ಹೇಳಿದ್ದಾರೆ.

ರೋಚಕ ಹಣಾಹಣಿಯಿಂದ ಕೂಡಿದ್ದ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್​ ಮತ್ತು ಅರ್ಜೆಂಟೀನಾ 3-3 ಗೋಲುಗಳ ಸಮಬಲ ಹೋರಾಟ ಕಂಡಿತ್ತು. ಇದಾದ ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ಗೆಲುವು ಸಾಧಿಸಿತ್ತು.

ಇದನ್ನೂ ಓದಿ:ಚಾಂಪಿಯನ್​ ಆಟ ಮುಂದುವರೆಸುತ್ತೇನೆ, ನಿವೃತ್ತಿ ಪಡೆಯುವುದಿಲ್ಲ : ಲಿಯೊನೆಲ್‌ ಮೆಸ್ಸಿ

ABOUT THE AUTHOR

...view details