ಸಿಡ್ನಿ (ಆಸ್ಟ್ರೇಲಿಯಾ): ಭಾನುವಾರ ಇಲ್ಲಿ ನಡೆದ ಫಿಫಾ ಮಹಿಳಾ ವರ್ಲ್ಡ್ ಕಪ್ನಲ್ಲಿ ನಾರ್ವೇ 6 ಗೋಲುಗಳನ್ನು ಗಳಿಸುವ ಮೂಲಕ ಫಿಲಿಪ್ಪೀನ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ಗಳಿಸಿದೆ. ಈ ಮೂಲಕ ನಾರ್ವೇ ಮುಂದಿನ ಹಂತದ ರೌಂಡ್ 16 ಸುತ್ತು ಪ್ರವೇಶಿಸಿದೆ. ನ್ಯೂಜಿಲೆಂಡ್ ಮತ್ತು ಸ್ವಿಟ್ಜರ್ಲೆಂಡ್ ನಡುವೆ ನಡೆದ ಪಂದ್ಯ ಡ್ರಾ ಆಗಿದ್ದರಿಂದ ನ್ಯೂಜಿಲೆಂಡ್ ಗುಂಪು ಹಂತದ ಪಂದ್ಯದಲ್ಲೇ ಹೊರಬಿತ್ತು.
ಜರ್ಮನಿಗೆ ಶಾಕ್: ಕೊಲಂಬಿಯಾ ಮತ್ತು ಜರ್ಮನಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಜರ್ಮನಿ ಸೋಲು ಅನುಭವಿಸಿತು. ಈ ಮೂಲಕ ಎರಡು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಜರ್ಮನಿಗೆ ಕೊಲಂಬಿಯಾ ಆಘಾತ ನೀಡಿತು. ತಲಾ ಒಂದೊಂದು ಗೋಲು ಗಳಿಸಿದ್ದ ಜರ್ಮನಿ ಮತ್ತು ಕೊಲಂಬಿಯಾ ಕೊನೆಯ ಹಂತದಲ್ಲಿ ಅಲೆಕ್ಸಾಂಡ್ರ ಪೋಪ್ ಅವರ ಪೆನಾಲ್ಟಿ ಶೂಟೌಟ್ನೊಂದಿಗೆ ಕೊಲಂಬಿಯಾ ಗೆಲುವಿನ ನಗೆ ಬೀರಿತು. ಈ ಮೂಲಕ 20 ವರ್ಷಗಳ ನಂತರ ಗುಂಪು ಪಂದ್ಯದಲ್ಲಿ ಜರ್ಮನಿ ಸೋಲುಂಡಿತು. ಇದಕ್ಕೂ ಮೊದಲು ವೆನೇಗಾಸ್ ಅವರು ಕೊಲಂಬಿಯಾ ಪರ ಗೋಲ್ ಗಳಿಸಿದ್ದರು. ಕೊಲಂಬಿಯಾ ರೌಂಡ್ 16 ಸುತ್ತಿನ ಪಂದ್ಯಗಳಿಗೆ ಅರ್ಹತೆ ಪಡೆಯಿತು. ಪಂದ್ಯ ಸೋತರೂ ಜರ್ಮನಿ ರೌಂಡ್ 16ಗೆ ಅರ್ಹತೆ ಪಡೆದಿದೆ.
ಕೊಲಂಬಿಯಾ ಆರು ಅಂಕಗಳೊಂದಿಗೆ ಹೆಚ್ ಗುಂಪಿನ ತಂಡಗಳಲ್ಲಿ ಅಗ್ರಸ್ಥಾನದಲ್ಲಿದೆ. ರೌಂಡ್ 16 ಪಂದ್ಯಕ್ಕೆ ಅರ್ಹತೆ ಸಿಕ್ಕರೂ ನಾಕೌಟ್ ಪಂದ್ಯಕ್ಕೆ ಅರ್ಹತೆ ಪಡೆದಿಲ್ಲ. ಜರ್ಮನಿ ಮತ್ತು ಮೊರಾಕ್ಕೋ ತಲಾ 3 ಅಂಕಗಳೊಂದಿಗೆ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಇದಕ್ಕೂ ಮೊದಲು ಮೊರಾಕ್ಕೋ ಸೌತ್ ಕೊರಿಯಾವನ್ನು 1-0 ಅಂಕಗಳಿಂದ ಮಣಿಸಿತ್ತು. ಈ ಮೂಲಕ ಮೊರಾಕ್ಕೋ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾಟದಲ್ಲಿ ಗೆಲುವು ಸಾಧಿಸಿದೆ. ಎರಡು ಸತತ ಸೋಲಿನ ನಂತರವೂ ಸೌತ್ ಕೊರಿಯಾ ಪಂದ್ಯಾಟದಿಂದ ಹೊರಬಿದ್ದಿಲ್ಲ.