ಕರ್ನಾಟಕ

karnataka

ETV Bharat / sports

ಇಂದಿನಿಂದ ಏಷ್ಯನ್ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್: ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿ - women basketball championship

ಫಿಬಾ ಏಷ್ಯನ್ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಸೇರಿದಂತೆ 16 ದೇಶಗಳ ತಂಡಗಳು ಭಾಗವಹಿಸಲಿವೆ.

asian women basketball championship
ಏಷ್ಯನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್

By

Published : Sep 5, 2022, 7:03 AM IST

Updated : Sep 5, 2022, 7:34 AM IST

ಬೆಂಗಳೂರು: 18 ವರ್ಷದೊಳಗಿನ ಮಹಿಳಾ ಫಿಬಾ ಏಷ್ಯನ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ಇಂದಿನಿಂದ ಸೆಪ್ಟೆಂಬರ್ 11ರ ವರೆಗೆ ನಡೆಯಲಿದೆ. ಆತಿಥೇಯ ಭಾರತ ತಂಡವೂ ಒಳಗೊಂಡಂತೆ ಒಟ್ಟು 16 ತಂಡಗಳು ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ. ನಗರದ ಕಂಠೀರವ (ಎ ಗುಂಪು) ಮತ್ತು ಕೋರಮಂಗಲ ಒಳಾಂಗಣ ಕ್ರೀಡಾಂಗಣಗಳಲ್ಲಿ (ಬಿ ಗುಂಪು) ಪಂದ್ಯಗಳು ನಡೆಯಲಿವೆ.

16 ದೇಶಗಳ 192 ಕ್ರೀಡಾಪಟುಗಳು, 96 ತಾಂತ್ರಿಕ ಸಿಬ್ಬಂದಿ ಟೂರ್ನಿಯಲ್ಲಿ ಪಾಲ್ಗೊಳ್ಳುವರು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿಂದು ಭಾರತ ತಂಡ ತನ್ನ ಎ ಗುಂಪಿನ ಆರಂಭಿಕ ಪಂದ್ಯದಲ್ಲಿ ಕಳೆದ ಆವೃತ್ತಿಯ ಕಂಚಿನ ಪದಕ ವಿಜೇತ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಕೊರಿಯಾ, ನ್ಯೂಜಿಲೆಂಡ್ ಎ ಗುಂಪಿನ ಇನ್ನೆರಡು ಬಲಿಷ್ಠ ತಂಡಗಳು.

ಸತ್ಯಾ ಕೃಷ್ಣಮೂರ್ತಿ ಭಾರತ ತಂಡದ ನಾಯಕಿ:ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡವನ್ನು ತಮಿಳುನಾಡಿನ ಸತ್ಯಾ ಕೃಷ್ಣಮೂರ್ತಿ ಮುನ್ನಡೆಸಲಿದ್ದಾರೆ. ತಂಡದಲ್ಲಿ ಕರ್ನಾಟಕದ ನಿಹಾರಿಕಾ ರೆಡ್ಡಿ ಮತ್ತು ಮೇಖಲಾ ಗೌಡ ಇದ್ದಾರೆ.

ಭಾರತ ತಂಡ ಹೀಗಿದೆ:ಸತ್ಯಾ ಕೃಷ್ಣಮೂರ್ತಿ (ನಾಯಕಿ), ನಿಕಿತಾ ಅಮುದನ್, ದೀಪ್ತಿ ರಾಜಾ, ಹರಿಮಾ ಸುಂದರಿ, ನಿಹಾರಿಕಾ ರೆಡ್ಡಿ, ಮೇಖಲಾ ಗೌಡ, ಕರಣ್ವೀರ್ ಕೌರ್, ಮನ್‌ಮೀತ್ ಕೌರ್, ಯಶ್ನೀತ್ ಕೌರ್, ಕೀರ್ತಿ ದೇಪ್ಲಿ, ಐರಿನಾ ಎಲ್ಲಾ ಜಾನ್, ಭೂಮಿಕಾ ಸಿಂಗ್, ಅರ್ಣಿಕಾ ಪಾಟೀಲ್ (ಮುಖ್ಯ ಕೋಚ್), ಅನಿತಾ ಪೌಲ್ ದುರೈ (ಕೋಚ್), ಪಿ.ಎಸ್.ಜರಿನ್ (ಮ್ಯಾನೇಜರ್) ಹಾಗು ಅಹಾನಾ ಪುರಾಣಿಕ್ (ಫಿಸಿಯೊ).

ಇದನ್ನೂ ಓದಿ:ಭಾರತ- ಪಾಕಿಸ್ತಾನ ಮಧ್ಯೆ ಇಂದು ಮತ್ತೊಂದು ಸೂಪರ್ ಸಂಡೇ ಮ್ಯಾಚ್​

Last Updated : Sep 5, 2022, 7:34 AM IST

ABOUT THE AUTHOR

...view details