ವಿಂಬಲ್ಡನ್: ಇಂದು ಬಿಡುಗಡೆಯಾದ ಎಟಿಪಿ ಶ್ರೇಯಾಂಕದಿಂದ (ಪುರುಷರ ಸಿಂಗಲ್ಸ್) ರೋಜರ್ ಫೆಡರರ್ ಅವರು 25 ವರ್ಷಗಳ ನಂತರ ಮೊದಲ ಬಾರಿಗೆ ಹೊರಬಿದ್ದಿದ್ದಾರೆ ಮತ್ತು ಏಳನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದ ನೊವಾಕ್ ಜೊಕೊವಿಕ್ ನಾಲ್ಕು ಸ್ಥಾನಗಳನ್ನು ಕಳೆದುಕೊಂಡು ಏಳನೇ ಸ್ಥಾನಕ್ಕೆ ತಲುಪಿದ್ದಾರೆ. ಇನ್ನು ವಿಂಬಲ್ಡನ್ ರನ್ನರ್ ಅಪ್ ನಿಕ್ ಕಿರ್ಗಿಯೋಸ್ ಈ ಶ್ರೇಯಾಂಕದಲ್ಲಿ 40ನೇ ಸ್ಥಾನದಿಂದ 45ನೇ ಸ್ಥಾನಕ್ಕೆ ಕುಸಿದಿದ್ದಾರೆ.
ರಷ್ಯಾ ಮತ್ತು ಬೆಲಾರಸ್‌ನ ಆಟಗಾರರ ಮೇಲಿನ ನಿಷೇಧದಿಂದಾಗಿ ವಿಂಬಲ್ಡನ್‌ನಲ್ಲಿ ಆಟಗಾರರಿಗೆ ಶ್ರೇಯಾಂಕದ ಅಂಕಗಳನ್ನು ನೀಡದಿರಲು ATP ಮತ್ತು WTA ನಿರ್ಧರಿಸಲಾಗಿತ್ತು. ಇನ್ನು ಜೊಕೊವಿಕ್ ಮತ್ತು ಕಿರ್ಗಿಯೊಸ್ ಅವರ ಪ್ರಭಾವಶಾಲಿ ಪ್ರದರ್ಶನಗಳ ಹೊರತಾಗಿಯೂ ಶ್ರೇಯಾಂಕವನ್ನು ಸುಧಾರಿಸಲು ಸಾಧ್ಯವಾಗಿಲ್ಲ.
ಫೆಡರರ್ ಸೆಪ್ಟೆಂಬರ್ 1997 ರಲ್ಲಿ 16 ನೇ ವಯಸ್ಸಿನಲ್ಲಿ ಚೊಚ್ಚಲ ಬಾರಿಗೆ ಪ್ರವೇಶ ಮಾಡಿದ ನಂತರ ಪ್ರತಿ ವಾರ ಸಿಂಗಲ್ಸ್ ಶ್ರೇಯಾಂಕಕ್ಕೆ ಪ್ರವೇಶಿಸಲು ಯಶಸ್ವಿಯಾಗಿದ್ದರು. ಶ್ರೇಯಾಂಕದಲ್ಲಿ 803 ನೇ ಸ್ಥಾನದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ನಂತರ ಅವರು ಅಗ್ರಸ್ಥಾನಕ್ಕೆ ಏರಿದ್ದರು. ಶ್ರೇಯಾಂಕದಲ್ಲಿ ಸುದೀರ್ಘ ಕಾಲದ ಅವರ ದಾಖಲೆಯನ್ನು ಜೊಕೊವಿಕ್ ಈಗ ಮುರಿದಿದ್ದಾರೆ.
ವಿಂಬಲ್ಡನ್ ಪ್ರಾರಂಭವಾಗುವ ಮೊದಲು ಫೆಡರರ್ 97 ನೇ ಸ್ಥಾನದಲ್ಲಿದ್ದರು. ಆದರೆ, ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಪಂದ್ಯಾವಳಿ ಮುಗಿದ ನಂತರ ಒಂದೇ ಒಂದು ಶ್ರೇಯಾಂಕವನ್ನು ಸಹ ಅವರು ಹೊಂದಿರಲಿಲ್ಲ.