ಕರ್ನಾಟಕ

karnataka

ETV Bharat / sports

ಫೆಡರೇಷನ್ ಕಪ್ ಅಥ್ಲೆಟಿಕ್ಸ್‌: ಜ್ಯೋತಿ ಯರ್ರಾಜಿಗೆ 2 ಚಿನ್ನ

ರಾಂಚಿಯಲ್ಲಿ ನಡೆದ 26ನೇ ರಾಷ್ಟ್ರೀಯ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಂಧ್ರ ಪ್ರದೇಶದ ಜ್ಯೋತಿ ಯರ್ರಾಜಿ 100 ಮೀ ಹರ್ಡಲ್ಸ್‌ ಹಾಗೂ 200 ಮೀಟರ್ ಓಟದಲ್ಲಿ 2 ಚಿನ್ನದ ಪದಕ ಗೆದ್ದರು.

Jyothi Yarraji
ಜ್ಯೋತಿ ಯರ್ರಾಜಿ

By

Published : May 19, 2023, 9:04 AM IST

ರಾಂಚಿ (ಜಾರ್ಖಂಡ್): 26ನೇ ರಾಷ್ಟ್ರೀಯ ಫೆಡರೇಷನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮುಕ್ತಾಯದ ದಿನದಂದು (ಗುರುವಾರ) 200 ಮೀ ಓಟದಲ್ಲಿ ಆಂಧ್ರ ಪ್ರದೇಶದ ಅಥ್ಲೀಟ್ ಜ್ಯೋತಿ ಯರ್ರಾಜಿ (23) ಚಿನ್ನದ ಪದಕ ಪಡೆದಿದ್ದಾರೆ. ಇದಕ್ಕೂ ಮೊದಲು ಬುಧವಾರ 100 ಮೀಟರ್ ಹರ್ಡಲ್ಸ್‌ ಅನ್ನು ದಾಖಲೆಯ 12.89 ಸೆಕೆಂಡುಗಳಲ್ಲಿ ಪೂರೈಸಿ ಚಿನ್ನದ ಸಾಧನೆ ತೋರಿದ್ದರು.

ಒಂದು ದಿನದ ನಂತರ, ಜ್ಯೋತಿ ಗುರುವಾರ ಅರ್ಚನಾ ಸುಸೀಂದ್ರನ್ ಸೇರಿದಂತೆ ದೇಶದ ಅಗ್ರ 200 ಮೀಟರ್ ಮಹಿಳಾ ಅಥ್ಲೀಟ್‌ಗಳನ್ನು ಹಿಂದಿಕ್ಕಿ 2ನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ತಮಿಳುನಾಡಿನ ಅರ್ಚನಾ 23.61 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ಜುಲೈ 12 ರಿಂದ 16ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತಾ ಅಂಕವಾದ 23.50 ಸೆಕೆಂಡ್‌ಗಳಿಗಿಂತ ಜ್ಯೋತಿ 23.42 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಸಾಧನೆ ಮಾಡಿದ್ದಾರೆ.

ರೋಹಿತ್ ಯಾದವ್​ಗೆ ಚಿನ್ನ: ಅಂತಾರಾಷ್ಟ್ರೀಯ ಜಾವೆಲಿನ್ ಎಸೆತಗಾರ ರೋಹಿತ್ ಯಾದವ್ 83.40 ಮೀ ಎಸೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ಮನು ಡಿ.ಪಿ 82.95 ಮೀಟರ್ ಎಸೆದು ಬೆಳ್ಳಿ ಪದಕ ಪಡೆದರು. ಇದಕ್ಕೂ ಮೊದಲು ಉತ್ತರ ಪ್ರದೇಶದ ಓಟಗಾರ ಗುಲ್ವೀರ್ ಸಿಂಗ್ ಪುರುಷರ 5,000 ಮೀಟರ್​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಗುಲ್ವೀರ್ ಸಿಂಗ್ 13:54.41 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಏಷ್ಯಾದ ಅರ್ಹತಾ ಸುತ್ತಿನ ಸಮಯವನ್ನು 14 ನಿಮಿಷಗಳಷ್ಟು ಸುಲಭವಾಗಿಸಿದರು. ರಾಜ್ಯದ ಅಭಿಷೇಕ್ ಪಾಲ್ 13:56.32 ಸೆಕೆಂಡುಗಳಲ್ಲಿ ಬೆಳ್ಳಿ ಗೆದ್ದರೆ, ಮಧ್ಯಪ್ರದೇಶದ ಹರ್ಮನ್ ಜೋತ್ ಸಿಂಗ್ 13:57.02 ಸೆಕೆಂಡುಗಳಲ್ಲಿ 3ನೇ ಸ್ಥಾನ ಪಡೆದರು.

ಅಂತಿಮ ಫಲಿತಾಂಶ:

ಪುರುಷರು:

  • 200 ಮೀ:ಆಮ್ಲನ್ ಬೊರ್ಗೊಹೈನ್ (ಅಸ್ಸಾಂ) 20.83 ಸೆಕೆಂಡ್, ಅನಿಮೇಶ್ ಕುಜೂರ್ (ಛತ್ತೀಸ್‌ಗಢ) 20.94 ಸೆಕೆಂಡ್, ಕಪಿಲ್ (ಹರಿಯಾಣ) 21.44 ಸೆಕೆಂಡ್.
  • 5000 ಮೀ (ಏಷ್ಯನ್ ಅರ್ಹತಾ ಸಮಯ 14 ನಿಮಿಷಗಳು): ಗುಲ್ವೀರ್ ಸಿಂಗ್ (ಯುಪಿ) 13:54.41 ಸೆಕೆಂಡ್‌ಗಳು, ಅಭಿಷೇಕ್ ಪಾಲ್ (ಯುಪಿ) 13:56.32 ಸೆಕೆಂಡುಗಳು, ಹರ್ಮನ್ ಜೋತ್ ಸಿಂಗ್ (ಎಂಪಿ) 13:57.02 ಸೆಕೆಂಡುಗಳು.
  • ಜಾವೆಲಿನ್ ಥ್ರೋ(ಏಷ್ಯನ್ ಚಾಂಪಿಯನ್‌ಶಿಪ್ ಅರ್ಹತಾ ಅಂಕ 78.23 ಮೀ): ರೋಹಿತ್ ಯಾದವ್ (ಯುಪಿ) 83.40 ಮೀ, ಮನು ಡಿಪಿ (ಕರ್ನಾಟಕ) 82.95 ಮೀ, ಸಚಿನ್ ಯಾದವ್ (ಯುಪಿ) 80.27 ಮೀ.

ಮಹಿಳೆಯರು:

  • 200 ಮೀ(ಏಷ್ಯನ್ ಚಾಂಪಿಯನ್‌ಶಿಪ್ ಅರ್ಹತಾ ಸಮಯ 23.50 ಸೆಕೆಂಡುಗಳು): ಜ್ಯೋತಿ ಯರ್ರಾಜಿ (ಆಂಧ್ರ ಪ್ರದೇಶ) 23.42 ಸೆಕೆಂಡ್, ಅರ್ಚನಾ ಎಸ್ ಸುಸೀಂದ್ರನ್ (ತಮಿಳುನಾಡು) 23.61 ಸೆಕೆಂಡ್, ಹಿಮಾನಿ ಚಾಂಡೆಲ್ (ಮಧ್ಯಪ್ರದೇಶ) 24.23.
  • 5000 ಮೀ (ಏಷ್ಯನ್ ಅರ್ಹತಾ ಸಮಯ 15:49 ಸೆಕೆಂಡ್‌ಗಳು): ಅಂಕಿತಾ (ಉತ್ತರಾಖಂಡ) 15:49.49 ಸೆಕೆಂಡ್‌ಗಳು, ಸಂಜೀವನಿ ಜಾಧವ್ (ಮಹಾರಾಷ್ಟ್ರ) 15:51.16 ಸೆಕೆಂಡುಗಳು, ಸೀಮಾ (ಹಿಮಾಚಲ ಪ್ರದೇಶ) 16:11.72
  • ಪೋಲ್ ವಾಲ್ಟ್ (ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಅರ್ಹತಾ ಅಂಕ 4.10 ಮೀ): ರೋಸಿ ಮೀನಾ ಪೌಲ್‌ರಾಜ್ (ತಮಿಳುನಾಡು) 4 ಮೀ, ಪವಿತ್ರಾ ವೆಂಕಟೇಶ್ (ತಮಿಳುನಾಡು) 4 ಮೀ, ಬಾರಾನಿಕಾ ಇಳಂಗೋವನ್ (ತಮಿಳುನಾಡು) 3.60 ಮೀ.
  • ಎತ್ತರ ಜಿಗಿತ(ಏಷ್ಯನ್ ಚಾಂಪಿಯನ್‌ಶಿಪ್ ಅರ್ಹತಾ ಅಂಕ 1.80 ಮೀ): ರುಬಿನಾ ಯಾದವ್ (ಹರಿಯಾಣ) 1.80 ಮೀ, ಏಂಜಲ್ ಪಿ ದೇವಾಸಿಯಾ (ಕೇರಳ) 1.76 ಮೀ, ಖ್ಯಾತಿ ಮಾಥುರ್ (ಯುಪಿ) 1.76 ಮೀ.
  • ಲಾಂಗ್ ಜಂಪ್(ಏಷ್ಯನ್ ಚಾಂಪಿಯನ್‌ಶಿಪ್ ಅರ್ಹತಾ ಅಂಕ 6.45 ಮೀ) ಆನ್ಸಿ ಸೋಜನ್ (ಕೇರಳ) 6.56 ಮೀ, ಕಾರ್ತಿಕಾ ಗೋತಂಡಪಾಣಿ (ಎಪಿ) 6.31 ಮೀ, ನಯನಾ ಜೇಮ್ಸ್ (ಕೇರಳ), 6.30 ಮೀ.

ಇದನ್ನೂ ಓದಿ:ಫೆಡರೇಷನ್​ ಕಪ್​: 100 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದ ಜ್ಯೋತಿ

ABOUT THE AUTHOR

...view details