ನವದೆಹಲಿ:ಕಳೆದ ಜು. 10ರಂದು ನಾಪೋಲಿಯಲ್ಲಿ ನಡೆದ ವರ್ಲ್ಡ್ ಯೂನಿವರ್ಸಿಟಿ ಕೂಟದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದ ದ್ಯುತಿ ಚಾಂದ್ ಜತೆ ಈಟಿವಿ ಭಾರತ ವಿಶೇಷ ಸಂದರ್ಶನ ನಡೆಸಿದೆ.
23 ವರ್ಷದ ದ್ಯುತಿ ಚಾಂದ್ ಕೇವಲ 11.32 ಸೆಕೆಂಡ್ಗಳಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನದ ಪದಕಕ್ಕೆ ಕೊರಳು ಒಡಿದ್ದರು. ಜತೆಗೆ ಈ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು.
ಈಟಿವಿ ಭಾರತನೊಂದಿಗೆ ಮಾತನಾಡಿರುವ ದ್ಯುತಿ ಚಾಂದ್, ಇಂತಹ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆಲ್ಲುವುದು ಅಷ್ಟೊಂದು ಸುಲಭವಲ್ಲ. ಫೈನಲ್ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಾನು ಒತ್ತಡಕ್ಕೊಳಗಾಗಿದ್ದೆ. ಆದರೆ ನನ್ನ ಕೈಯಿಂದ ಆದಷ್ಟು ಉತ್ತಮ ಪ್ರದರ್ಶನ ನೀಡಬೇಕು ಎಂಬ ಗುರಿಯೊಂದಿಗೆ ರನ್ನಿಂಗ್ ರೇಸ್ಗೆ ಇಳಿದು ಚಿನ್ನ ಗೆದ್ದಿರುವೆ ಎಂದಿದ್ದಾರೆ.
ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್ ತಮ್ಮ ಚಿನ್ನದ ಪದಕ ಒಡಿಶಾ ಸರ್ಕಾರಕ್ಕೆ ಅರ್ಪಣೆ ಮಾಡುವುದಾಗಿ ಹೇಳಿರುವ ಚಾಂದ್, ನನ್ನ ಪ್ರಾಯೋಜಕರು, ವಿಶ್ ಮಾಡಿದವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ನಾನು ನನ್ನ ವೃತ್ತಿ ಜೀವನ ಆರಂಭ ಮಾಡಿದ ವೇಳೆ ನನ್ನ ಸಹೋದರಿ ಮಾತ್ರ ಸಪೋರ್ಟ್ ಮಾಡಿದ್ದರು. ಆದರೆ ಇದೀಗ ರಾಜ್ಯ, ಕೇಂದ್ರ ಸರ್ಕಾರ ನನಗೆ ಸಪೋರ್ಟ್ ಮಾಡುತ್ತಿವೆ. 2020ರ ಟೋಕಿಯೋ ಒಲಂಪಿಕ್ಸ್ನಲ್ಲಿ ಭಾಗಿಯಾಗಿ ಪದಕ ಗೆಲ್ಲಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ಚಾಂದ್ ಇದೇ ವೇಳೆ ಹೇಳಿದ್ದಾರೆ.
ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್ ಕಳೆದ ಕೆಲ ತಿಂಗಳ ಹಿಂದೆ ದ್ಯುತಿ ಚಾಂದ್, ತಾವು ಸಲಿಂಗಿ ಎಂದು ಘೋಷಿಸಿಕೊಂಡಿದ್ದರು. ಈ ವಿಷಯ ಬಹಿರಂಗಪಡಿಸುತ್ತಿದ್ದಂತೆ ದ್ಯುತಿಗೆ ಕುಟುಂಬ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿತ್ತು.