ಹೈದರಾಬಾದ್: ಭಾರತದ ಒಲಿಂಪಿಕ್ ಬೌಂಡ್ ಪ್ಯಾಡ್ಲರ್ ಜಿ ಸತಿಯಾನ್ ಅವರು ಮಾರ್ಚ್ನಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನಂತರ ವೈಯಕ್ತಿಕ ತರಬೇತಿಗೆ ಸೀಮಿತರಾಗಿದ್ದಾರೆ, ಆದರೆ, ವಿದೇಶಿ ಪಂದ್ಯಾವಳಿಗಳಲ್ಲಿ ಭಾಗವಹಿಸದಿದ್ದರೂ ಸಹಾ ಟೋಕಿಯೊದಲ್ಲಿ ತಮ್ಮ ಆಟವನ್ನು ಹೊರತರಬಲ್ಲೇ ಎಂದು ಈ ಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಒಲಿಂಪಿಕ್ಸ್‌ಗೆ ಕೇವಲ ಒಂದು ತಿಂಗಳ ಸಮಯವಿದೆ, ಸ್ಪರ್ಧೆಯಾರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ತಮ್ಮ ತಯಾರಿಗೆ ಎರಡನೇ ಕೋವಿಡ್ 19 ಅಲೆ ಭಾರಿ ಹೊಡೆತ ನೀಡಿದೆ, ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸುವಿಕೆಯ ಅವಕಾಶಕ್ಕೆ ತಣ್ಣೀರೆರಚಿದೆ, ತರಬೇತಿಗೆ ವಿದೇಶಿ ಆಟಗಾರರನ್ನು ಕರೆತರಲೂ ಅಥವಾ ವಿದೇಶಕ್ಕೆ ಹೋಗಿ ತರಬೇತಿ ಪಡೆಯವುದು ಕೂಡ ಅಸಾಧ್ಯವಾಗಿದೆ ಎಂಬುದನ್ನು ಸತಿಯಾನ್ ಒಪ್ಪಿಕೊಂಡಿದ್ದಾರೆ. ಆದರೂ ಈ ಹಿಂದಿನ ಟೂರ್ನಿಗಳ ಫಲಿತಾಂಶಗಳ ಬಲದಿಂದ ನೇರವಾಗಿ ಚೆನ್ನೈನಿಂದ ಜಪಾನ್ನಲ್ಲಿ ನಡೆಯುವ ಟೂರ್ನಿಗೆ ಭಾಗವಹಿಸುತ್ತೇನೆಂದು 28 ವರ್ಷದ ಪ್ಯಾಡ್ಲರ್ ಹೇಳಿದ್ದಾರೆ.
ನಾನು ಮನೆಯಲ್ಲಿ ತಯಾರಿ ನಡೆಸುತ್ತಿದ್ದು ತಯಾರಿಗೆ ಅನುಕೂಲಕ್ಕಾಗಿ ಜಪಾನ್ನ ಸ್ಯಾನ್ ಇ ನಿಂದ ಟೇಬಲ್ ಆರ್ಡರ್ ಮಾಡಿದ್ದೇನೆ. ಇದರ ಬಗ್ಗೆ ಟಾಪ್ಸ್ (ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್) ವಿನಂತಿ ಮಾಡಿದ್ದೇನೆ. ಇದಕ್ಕೆ ಇನ್ನು ಅನುಮೋದನೆ ಸಿಕ್ಕಿಲ್ಲ, ಮುಂದಿನ ಸಭೆಯಲ್ಲಿ ಒಂದೆರಡು ದಾಖಲೆಯನ್ನು ಕೇಳುತ್ತಾರೆ, ಅದನ್ನು ಟಾಪ್ಸ್ ಅನುಮೋದಿಸಿದರೆ, ಜೂನ್ ಅಂತ್ಯದ ವೇಳೆಗೆ ನನ್ನ ಕೈಗೆ ಸಿಗಲಿದೆ. ಒಂದೆರಡು ವಾರ ಅದರಲ್ಲಿ ಅಭ್ಯಾಸ ಮಾಡಬೇಕಾಗುತ್ತದೆ, ಜಪಾನ್ನಲ್ಲಿ ಆ ಟೇಬಲ್ ಅನ್ನು ಹೆಚ್ಚು ಉಪಯೋಗಿಸುತ್ತಾರೆ ಎಂದು ತಿಳಿಸಿದ್ದಾರೆ.
ಡಿಹೆಚ್ಎಸ್ಗಿಂತ ವಿಭಿನ್ನ
ನಾನು ಜಪಾನ್ನಲ್ಲಿ ಸ್ಯಾನ್ ಇ ಟೇಬಲ್ನಲ್ಲಿ ಆಡಿದ್ದೇನೆ, ಅದವು ಡಿಹೆಚ್ಎಸ್ಗಿಂತ ವಿಭಿನ್ನವಾಗಿದೆ. ಅದು ಮಧ್ಯಮ ವೇಗವಾಗಿದ್ದು, ಬೌನ್ಸ್ ಸಾಮಾನ್ಯವಾಗಿರುತ್ತದೆ. ಸಮಯದ ಅಭಾವವಿರುವುದಿಂದ ನಾನು ದಿನಕ್ಕೆ 6-7 ಗಂಟೆಗಳ ಕಾಲ ಆಡಲು ಸಾಧ್ಯವಾಗುತ್ತದೆ, ವಾರದಲ್ಲಿ ಕೋಚ್ ಜೊತೆ 100 ಗಂಟೆಗಳ ಕಾಲ ತರಬೇತಿ ನಡೆಸಬೇಕಿದೆ. ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಸತಿಯಾನ್ ತಮ್ಮ ತರಬೇತಿಯ ಬಗ್ಗೆ ಹೇಳಿಕೊಂಡಿದ್ದಾರೆ.