ಕರ್ನಾಟಕ

karnataka

ETV Bharat / sports

ಎಕ್ಸ್​ಕ್ಲೂಸಿವ್​: ರಾಷ್ಟ್ರೀಯ ಬಾಕ್ಸಿಂಗ್​ ತರಬೇತಿ ಶಿಬಿರ ತೊರೆಯುವ ಬೆದರಿಕೆ ಹಾಕಿದ ಅಮಿತ್ ಪಂಘಲ್​ - ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ

ಏಷ್ಯನ್​ ಗೇಮ್ಸ್​ನ ಚಾಂಪಿಯನ್​ ಆಗಿರುವ ಪಂಘಲ್ ತಮ್ಮ ವಿರುದ್ಧ ಕೊಳಕು ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದು, ಒಂದು ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಷ್ಟ್ರೀಯ ಶಿಬಿರದಿಂದ ಹೊರ ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ.

By

Published : Nov 4, 2020, 4:50 PM IST

ಹೈದರಾಬಾದ್​: ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ಮತ್ತು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಯಲ್ಲಿ ಕೋಚ್ ಮತ್ತು ಸ್ಪೇರಿಂಗ್ ಪಾರ್ಟ್ನರ್ಸ್​ ಒದಗಿಸದ ಕಾರಣದಿಂದ ಟೋಕಿಯೊ ಒಲಿಂಪಿಕ್ಸ್‌ನ ತರಬೇತಿಗೆ ಅಡ್ಡಿಯಾಗಿದೆ. ಒಂದು ವೇಳೆ ತಮ್ಮ ಬೇಡಿಕೆ ಈಡೇರಿಸದಿದ್ದರೆ ತಾವೂ ರಾಷ್ಟ್ರೀಯ ಶಿಬಿರದಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿಯಾಗಿದ್ದಾರೆ.

ಪ್ರತಿಭಾನ್ವಿತ ಬಾಕ್ಸರ್​ ಅಮಿತ್ ಪಂಘಲ್ ಇತ್ತೀಚೆಗೆ ಫ್ರೆಂಚ್ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇವರು ಮುಂದಿನ ವರ್ಷ ಜಪಾನ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ತಂದು ಕೊಡುವ ಭರವಸೆ ನೀಡಿದ್ದಾರೆ. ಆದರೆ, ತಮ್ಮ ತರಬೇತಿಗಾಗಿ ಕೋಚ್​ ನೇಮಿಸುವಂತೆ ಕಳೆದ ಡಿಸೆಂಬರ್​ನಲ್ಲಿ ಬಿಎಫ್​ಐ ಮತ್ತು ಎಸ್​ಎಐಗೆ ಮನವಿ ಮಾಡಿದ್ದರೂ, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪಂಘಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

" ನಾನು ಈ ಕುರಿತು ಬಿಎಫ್​ಐ ಮತ್ತು ಎಸ್​ಎಐಗೆ ಪತ್ರ ಬರೆದಿದ್ದೇನೆ, ಆದರೆ ಇಲ್ಲಿಯವರೆಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಡಿಸೆಂಬರ್​ನಲ್ಲಿ ನಾನು ಅರ್ಜಿ ಸಲ್ಲಿಸಿದ್ದರೂ ಯಾರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ನಾನು ಹಲವಾರು ಬಾರಿ ವಿನಂತಿಸಿಕೊಂಡಿದ್ದೇನೆ. ಆದರೆ, ನನಗೆ ಕೋಚ್​ ಸೌಲಭ್ಯವನ್ನು ಒದಗಿಸುತ್ತಿಲ್ಲ. ಇದಕ್ಕೆ ಸೂಕ್ತ ಕಾರಣವನ್ನು ಅವರು ನೀಡಿಲ್ಲ" ಎಂದು 52 ಕೆಜಿ ಬಾಕ್ಸಿಂಗ್​ ವಿಭಾಗದಲ್ಲಿ ನಂಬರ್​ 1 ಆಗಿರುವ ಪಂಘಲ್ ಈಟಿವಿ ಭಾರತಕ್ಕೆ ನೀಡಿದ ದೂರವಾಣಿ ಸಂದರ್ಶನದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಏಷ್ಯನ್​ ಗೇಮ್ಸ್​ನ ಚಾಂಪಿಯನ್​ ಆಗಿರುವ ಪಂಘಲ್ ತಮ್ಮ ವಿರುದ್ಧ ಕೊಳಕು ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದು, ಒಂದು ವೇಳೆ, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಷ್ಟ್ರೀಯ ಶಿಬಿರದಿಂದ ಹೊರ ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ.

" ಇದು ಟೋಕಿಯೋ ಒಲಿಂಪಿಕ್ಸ್​ಗಾಗಿ ನನ್ನ ತರಬೇತಿಗೆ ಅಡ್ಡಿಯಾಗಿದೆ. ನಾನು ಕ್ರೀಡಾಪಟುವಾಗಿ ಹಲವು ಸಾಧನೆಗಳನ್ನು ಮಾಡಿದ್ದೇನೆ. ಆದರೆ, ಅವರು ನನ್ನೊಂದಿಗೆ ಕೊಳಕು ರಾಜಕೀಯ ಮಾಡುತ್ತಿದ್ದಾರೆ. ಇದೊಂದು ಕಾಂಟ್ಯಾಕ್ಟ್​ ಗೇಮ್ ಆಗಿದ್ದು, ತರಬೇತಿಗಾಗಿ ಮೂರರಿಂದ ನಾಲ್ಕು ಪಾರ್ಟ್ನರ್ಸ್​ ಅಗತ್ಯವಾಗಿ ಬೇಕಾಗಿದೆ. ಇವೆಲ್ಲ ಇಲ್ಲದಿದ್ದರೆ ನಾನು ಫಿಟ್​ನೆಸ್​ ಸೆಸೆನ್​ ಮಾಡುವುದಾದರೂ ಹೇಗೆ?. ನಾನು ಬಿಎಫ್​ಐಗೆ ಹಲವಾರು ಬಾರಿ ಮನವಿ ಮಾಡಿದ್ದೇನೆ. ಪ್ಯಾರೀಸ್​ನಿಂದ ಬಂದ ನಂತರವೂ ಮನವಿ ಮಾಡಿದ್ದೇನೆ. ಒಂದು ವೇಳೆ ನನ್ನ ಬೇಡಿಕೆಯನ್ನು ಪೂರೈಸದಿದ್ದರೆ ನಾನು ರಾಷ್ಟ್ರೀಯ ಶಿಬಿರದಿಂದ ಹೊರಬರುತ್ತೇನೆ" ಎಂದು 25 ವರ್ಷದ ಬಾಕ್ಸರ್ ಹೇಳಿದ್ದಾರೆ.

ABOUT THE AUTHOR

...view details