ದುಬೈ: ವಿಶ್ವದ ನಂಬರ್ 1 ಟೆನಿಸ್ ಪ್ಲೇಯರ್ ನೊವಾಕ್ ಜೊಕೊವಿಕ್ ದುಬೈ ಡ್ಯುಟಿ ಫ್ರೀ ಟೆನಿಸ್ ಚಾಂಪಿಯನ್ಶಿಪ್ ಶುಭಾರಂಭ ಮಾಡಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ 58ನೇ ಶ್ರೇಯಾಂಕದ ಇಟಲಿಯ ಲೊರೆಂಜೊ ಮುಸೆಟಿ ವಿರುದ್ಧ ಜಯ ಸಾಧಿಸಿದರು.
ಕೋವಿಡ್ 19 ಲಸಿಕೆಯ ಸ್ಟೇಟಸ್ ಬಹಿರಂಗಗೊಳಿಸದ ಕಾರಣಕ್ಕೆ ಆಸ್ಟ್ರೇಲಿಯನ್ ಓಪನ್ನಿಂದ ಹೊರಬಂದಿದ್ದ ಅವರು ವೃತ್ತಿಪರ ಟೆನಿಸ್ಗೆ ಮರಳಿದ್ದು, ಮೊದಲ ಪಂದ್ಯದಲ್ಲಿ ಮುಸೆಟಿ ವಿರುದ್ಧ 6-3,6-3ರ ನೇರ ಸೆಟ್ಗಳ ಗೆಲುವು ಸಾಧಿಸಿದ್ದಾರೆ.
ಕಳೆದ ವರ್ಷ ಫ್ರೆಂಚ್ ಓಪನ್ನಲ್ಲಿ 4ನೇ ಸುತ್ತಿನಲ್ಲಿ ಜೊಕೊವಿಕ್ ಕಠಿಣ ಪೈಪೋಟಿ ನೀಡಿದ್ದ ಮುಸೆಟಿ ಇಂದು ಸರ್ಬಿಯನ್ ಸ್ಟಾರ್ ವಿರುದ್ಧ ಮಂಕಾದರು.
2022ರ ಮೊದಲ ಪಂದ್ಯವನ್ನು 74 ನಿಮಿಷಗಳಲ್ಲಿ ಗೆದ್ದುಕೊಂಡಿರುವ ಜೊಕೊವಿಕ್ ಈ ವಾರ ಅತ್ಯತ್ತಮ ಪ್ರದರ್ಶನ ತೋರಿವ ತಮ್ಮ ನಂಬರ್ 1 ಪಟ್ಟವನ್ನು ಬಲಿಷ್ಠಗೊಳಿಸುವತ್ತ ಗಮನಹರಿಸಿದ್ದಾರೆ. ರಷ್ಯಾದ ಸ್ಟಾರ್ ಡೇನಿಯಲ್ ಮೆಡ್ವೆಡೆವ್ ನೊವಾಕ್ಗೆ ದಿನದಂದ ಹತ್ತಿರ ಬರುತ್ತಿದ್ದಾರೆ. 2ನೇ ಸ್ಥಾನದಲ್ಲಿರುವ ಮೆಡ್ವೆಡೆವ್ ಕೇವಲ 400 ಅಂಕಗಳು ಮಾತ್ರ ಹಿಂದುಳಿದಿದ್ದಾರೆ.
ಇದನ್ನೂ ಓದಿ:Strandja Memorial Boxing : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ ನೀತು,ಅನಾಮಿಕ