ಮೆಲ್ಬರ್ನ್:ಆಸ್ಟ್ರೇಲಿಯನ್ ಓಪನ್ನ ಸಿಂಗಲ್ಸ್ನ ಫೈನಲ್ 22ನೇ ಗ್ರಾನ್ಸ್ಲಾಂನ್ನು ಜೋಕೊವಿಚ್ ತಮ್ಮದಾಗಿಸಿಕೊಂಡಿದ್ದಾರೆ. 4ನೇ ಶ್ರೇಯಾಂಕದ ನೊವಾಕ್ ಜೋಕೊವಿಚ್ ಮತ್ತು ಮೂರನೇ ಶ್ರೇಯಾಂಕದ ಸ್ಟೆಫಾನೊಸ್ ಸಿಟ್ಸಿಪಾಸ್ ನಡುವೆ ನಡೆದ ಫೈನಲ್ ಹಣಾಹಣಿಯಲ್ಲಿ 6-3, 7-6, 7-6ರ ನೇರ ಸೆಟ್‌ಗಳಿಂದ 10ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದರು. ಈ ಮೂಲಕ ಶ್ರೇಯಾಂಕದಲ್ಲಿ ಮೊದಲ ಪಟ್ಟಕ್ಕೇರಿದರು.
ಈ ಗ್ರಾನ್ಸ್ಲಾಂ ಗೆಲ್ಲುವ ಮೂಲಕ ರಾಫೆಲ್ ನಡಾಲ್ ದಾಖಲೆ ಸರಿಗಟ್ಟಿದ್ದಾರೆ. ಈವರೆಗೆ 21 ಗ್ರಾನ್ಸ್ಲಾಂಗಳ ಒಡೆಯ ಜೋಕೊವಿಚ್ ಇಂದು 10ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡು ಒಟ್ಟು 22 ಪ್ರಶಸ್ತಿ ಗೆದ್ದು ರಾಫೆಲ್ ನಡಾಲ್ ರಷ್ಟೇ ಪ್ರಶಸ್ತಿ ಗೆಲ್ಲುವ ಮೂಲಕ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸಿಟ್ಸಿಪಾಸ್ ಮೊದಲ ಸೆಟ್‌ನಲ್ಲಿ 1-1 ರಿಂದ 15/40 ರಿಂದ ಎರಡು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿದರು, ಜೊಕೊವಿಕ್ ಅವರ ಸಾಂಪ್ರದಾಯಿಕವಾಗಿ ವಿಶ್ವಾಸಾರ್ಹ ಮತ್ತು ನಿಖರವಾದ ಗ್ರೌಂಡ್‌ಸ್ಟ್ರೋಕ್‌ಗಳ ಮೂಲಕ ಆರಂಭದಲ್ಲಿ ಪ್ರಾಬಲ್ಯ ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು 6-3 ರಿಂದ ಮಣಿಸಿದರು. ನಂತರದ ಸೆಟ್‌ನಲ್ಲಿ ಮೂರನೇ ಶ್ರೇಯಾಂಕದ ಎದುರಾಳಿ ಸ್ಟೆಫಾನೊಸ್ ಸಿಟ್ಸಿಪಾಸ್ ಉತ್ತಮ ಕಮ್ ಬ್ಯಾಕ್ ಮಾಡಿದರು. ಸಮಾನ ಹೋರಾಟ ತೋರಿದ ಅವರು ಒಂದು ಅಂಕದ (7-6) ಅಂತರದಲ್ಲಿ ಸೋಲನುಭವಿಸಿದರು. ಮೂರನೇ ಸೆಟ್ನಲ್ಲೂ 7-6 ರಿಂದಲೇ ಜೋಕೊವಿಚ್ ಗೆಲುವು ಪಡೆದರು.
"ಇದು ನನ್ನ ಜೀವನದಲ್ಲಿ ನಾನು ಆಡಿದ ಅತ್ಯಂತ ಸವಾಲಿನ ಪಂದ್ಯವಾಗಿದೆ. ಕಳೆದ ವರ್ಷ ಆಡಲಿಲ್ಲ, ಈ ವರ್ಷ ಅವಕಾಶ ದೊರೆತಿದ್ದು ನನ್ನ ಭಾಗ್ಯ. ಇದು ಬಹುಶಃ ನನ್ನ ಜೀವನದಲ್ಲಿ ಸಂದರ್ಭಗಳನ್ನು ಪರಿಗಣಿಸಿ ದೊಡ್ಡ ಗೆಲುವು ಎಂದು ನಾನು ಹೇಳಲೇಬೇಕು" ಎಂದು ಜೊಕೊವಿಕ್ ಹೇಳಿದರು.