ಕರ್ನಾಟಕ

karnataka

ETV Bharat / sports

ಶೂಟಿಂಗ್ ಚಾಂಪಿಯನ್‌ಶಿಪ್‌: ಏರ್ ಪಿಸ್ತೂಲ್​ನಲ್ಲಿ ಕರ್ನಾಟಕದ ದಿವ್ಯಾಗೆ ಚಿನ್ನ - National Shooting Championship

ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌: ಮಹಿಳಾ ವಿಭಾಗದ 10 ಮೀಟರ್ ಏರ್ ಪಿಸ್ತೂಲ್​ ಸ್ಪರ್ಧೆಯಲ್ಲಿ ಕರ್ನಾಟಕದ ದಿವ್ಯಾ ಟಿ ಎಸ್ ಚಿನ್ನ ಗೆದ್ದರು.

ದಿವ್ಯಾ
ದಿವ್ಯಾ

By

Published : Dec 12, 2022, 8:30 PM IST

ಭೋಪಾಲ್:ಮಧ್ಯಪ್ರದೇಶದಲ್ಲಿ ನಡೆದ 65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ದಿವ್ಯಾ ಟಿ ಎಸ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮಹಿಳಾ 10 ಮೀಟರ್ ಏರ್ ಪಿಸ್ತೂಲ್​ ಸ್ಪರ್ಧೆಯಲ್ಲಿ ಉತ್ತರ ಪ್ರದೇಶದ ಸಂಸ್ಕೃತಿ ಬನಾ ಅವರನ್ನು ಸೋಲಿಸಿ ಈ ಸಾಧನೆ ತೋರಿದರು. ಚಿನ್ನದ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ದಿವ್ಯಾ 16-14 ಸೆಟ್​ ಅಂತರದಲ್ಲಿ ಸಂಸ್ಕೃತಿ ಬನಾರನ್ನು ಮಣಿಸಿದ್ದಾರೆ. ಹರಿಯಾಣದ ರಿದಮ್ ಸಾಂಗ್ವಾನ್ ಕಂಚು ಗೆದ್ದರು.

ಇನ್ನೊಂದೆಡೆ, ಒಲಿಂಪಿಯನ್ ಮನು ಭಾಕರ್ ಅವರು ತೆಲಂಗಾಣದ ಇಶಾ ಸಿಂಗ್ ವಿರುದ್ಧ 17-13 ಅಂತರದಲ್ಲಿ ಜಯಗಳಿಸುವ ಮೂಲಕ ಮಹಿಳೆಯರ ಜೂನಿಯರ್ ಏರ್ ಪಿಸ್ತೂಲ್​ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದರು. ರಿದಮ್ ಮತ್ತೆ ಕಂಚು ಪಡೆದರು.

ಇದನ್ನೂ ಓದಿ:ಬಿಸಿಸಿಐ ವಾರ್ಷಿಕ ಒಪ್ಪಂದ: ಸೂರ್ಯಕುಮಾರ್​​, ಹಾರ್ದಿಕ್​ಗೆ ಬಂಪರ್​ : ರಹಾನೆ, ಇಶಾಂತ್ ಔಟ್​?

ABOUT THE AUTHOR

...view details