ಕರ್ನಾಟಕ

karnataka

ETV Bharat / sports

ಕಂಚಿನ ಪದಕ ಕಳೆದುಕೊಂಡ ಭಾರತದ ಡಿಸ್ಕಸ್ ಥ್ರೋವರ್​ ವಿನೋದ್​ ಕುಮಾರ್ - ಪ್ಯಾರಾಲಿಂಪಿಕ್ಸ್​ ಕಂಚು

41 ವರ್ಷದ ವಿನೋದ್ ಕುಮಾರ್ ಟೋಕಿಯೊ ಪ್ಯಾರಾಲಿಂಪಿಕ್ಸ್ 2020ರ ಡಿಸ್ಕಸ್ ಥ್ರೋನಲ್ಲಿ 19.91 ಮೀಟರ್​ ಎಸೆದು ಭಾನುವಾರ ಕಂಚಿನ ಪದಕ ಪಡೆದಿದ್ದರು. ಪೋಲ್ಯಾಂಡ್​ನ ಪಿಯೋಟರ್ ಕೊಸೆವಿಕ್ ಚಿನ್ನ ಮತ್ತು ಕ್ರೊವೇಷ್ಯಾದ ವೇಲಿಮಿರ್ ಸಂದೋರ್​ ಬೆಳ್ಳಿ ಗೆದ್ದಿದ್ದರು.

Discus thrower Vinod loses Paralympics bronze
ವಿನೋದ್ ಕುಮಾರ್

By

Published : Aug 30, 2021, 5:24 PM IST

ಟೋಕಿಯೋ: ಭಾನುವಾರ ಡಿಸ್ಕಸ್​ ಥ್ರೋನಲ್ಲಿ ಸ್ಪರ್ಧಿಸಿ ಕಂಚು ಗೆದ್ದಿದ್ದ ವಿನೋದ್ ಕುಮಾರ್​ ತಮ್ಮ ಪದಕವನ್ನು ಕಳೆದುಕೊಂಡಿದ್ದಾರೆ. ಅವರು ಎಫ್52ವಿಭಾಗದಲ್ಲಿ ಸ್ಪರ್ಧಿಸಲು ಅರ್ಹರಲ್ಲ ಎಂದು ಸಾಬೀತಾದ ನಂತರ ಸಂಘಟಕರು ವಿನೋದ್ ಕುಮಾರ್ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿದ್ದಾರೆ.

41 ವರ್ಷದ ವಿನೋದ್ ಕುಮಾರ್ ಟೋಕಿಯೊ ಪ್ಯಾರಾಲಿಂಪಿಕ್ಸ್ 2020ರ ಡಿಸ್ಕಸ್ ಥ್ರೋನಲ್ಲಿ 19.91 ಮೀಟರ್​ ಎಸೆದು ಭಾನುವಾರ ಕಂಚಿನ ಪದಕ ಪಡೆದಿದ್ದರು. ಪೋಲ್ಯಾಂಡ್​ನ ಪಿಯೋಟರ್ ಕೊಸೆವಿಕ್ ಚಿನ್ನ ಮತ್ತು ಕ್ರೊವೇಷ್ಯಾದ ವೇಲಿಮಿರ್ ಸಂದೋರ್​ ಬೆಳ್ಳಿ ಗೆದ್ದಿದ್ದರು. ಆದರೆ ಇತರ ಸ್ಪರ್ಧಿಗಳು ಈ ವರ್ಗದಲ್ಲಿ ವಿನೋದ್​ ಕುಮಾರ್​ ಸೇರ್ಪಡೆ ಕುರಿತು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಸ್ಪರ್ಧೆಯ ನಂತರ ಫಲಿತಾಂಶವನ್ನು ತಡೆಹಿಡಿಯಲಾಯಿತು. ಅಲ್ಲದೆ ಪದಕ ಸಮಾರಂಭವನ್ನು ಆಗಸ್ಟ್ 30 ರ ಸಂಜೆಯವರೆಗೆ ಮುಂದೂಡಲಾಗಿತ್ತು.

ಇದೀಗ ನಿಯಮದ ಪ್ರಕಾರ ವಿನೋದ್ ಎಫ್52ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಹೀಗಾಗಿ ಸಂಘಟಕರು ವಿನೋದ್ ಕುಮಾರ್ ಅವರನ್ನು ಅನರ್ಹಗೊಳಿಸಿದ್ದಾರೆ ಮತ್ತು ಅವರ ಫಲಿತಾಂಶವನ್ನು ರದ್ದುಗೊಳಿಸಲಾಗಿದೆ.

ಮಾಜಿ ಬಿಎಸ್​ಎಫ್​ ಯೋಧರಾಗಿದ್ದ ವಿನೋದ್ ಕುಮಾರ್ ದುರಾದೃಷ್ಟಕರ ಅಪಘಾತಕ್ಕೆ ಒಳಗಾಗಿದ್ದರು. ದೇಹದ ಕೆಲವು ಅಂಗ ಸ್ವಾಧೀನ ಕಳೆದುಕೊಂಡಿದ್ದರಿಂದ ದಶಕದ ಕಾಲ ಹಾಸಿಗೆಯಲ್ಲೇ ಕಾಲಕಳೆದಿದ್ದರು. ನಂತರ ಹಲವು ಸವಾಲುಗಳನ್ನು ಎದುರಿಸಿ ಪ್ಯಾರಾ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರು.

ಭಾರತದ ಕ್ರೀಡಾಪಟು ವಿನೋದ್​ ಕುಮಾರ್​ ಅವರನ್ನು ಈ ಸ್ಪರ್ಧೆಯ ಕ್ರೀಡಾ ವರ್ಗದೊಂದಿಗೆ ನಿಯೋಜಿಸಲು ಪ್ಯಾನಲ್​ಗೆ ಸಾಧ್ಯವಾಗಿಲ್ಲ. ಏಕೆಂದರೆ ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯಿಂದ ಕ್ರೀಡಾಪಟುವಿನ ವರ್ಗೀಕರಣ(ಸಿಎನ್​ಸಿ) ಪೂರ್ಣಗೊಂಡಿಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ ಅವರು ಪುರುಷರ F52 ಡಿಸ್ಕಸ್​ ಥ್ರೋ ಪದಕ ಸ್ಪರ್ಧೆಗೆ ಅರ್ಹರಾಗಿಲ್ಲ. ಹಾಗಾಗಿ ಅವರ ಫಲಿತಾಂಶವನ್ನು ರದ್ದುಗೊಳಿಸಲಾಗಿದೆ ಎಂದು ಸಂಘಟಕರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ABOUT THE AUTHOR

...view details