ದುಬೈ:ದುಬೈನ ಎಮಿರೇಟ್ಸ್ ಗಾಲ್ಫ್ ಕ್ಲಬ್ ಫಾಲ್ಡೋ ಕೋರ್ಸ್‌ನಲ್ಲಿ ನಡೆಯುತ್ತಿರುವ ಯೂನಿಕ್ ಒಮೆಗಾ ದುಬೈ ಮೂನ್ಲೈಟ್ ಕ್ಲಾಸಿಕ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಮಹಿಳಾ ಯುರೋಪಿಯನ್ ಟೂರ್ನಿ ಮೂರು ಬಾರಿ ವಿಜೇತರಾಗಿರುವ ಗಾಲ್ಫ್ ಆಟಗಾರ್ತಿಯರಾದ ಅದಿತಿ ಅಶೋಕ್ ಮತ್ತು ಆಸ್ತಾ ಮದನ್ ತಲಾ 75 ಅಂಕಗಳನ್ನು ಪಡೆದು ಟಾಪ್ 10ರಲ್ಲಿ ಅರ್ಹತೆ ಪಡೆದಿದ್ದಾರೆ.
ಅದಿತಿ ಅಶೋಕ್ ಅವರು ಕತಾರ್ ಮತ್ತು ಅಬುದಾಬಿಯಲ್ಲಿ ನಡೆದ ಹೀರೋ ವುಮೆನ್ಸ್ ಇಂಡಿಯನ್ ಓಪೆನರ್ ಟೂರ್ನಿ ವಿಜೇತೆ ಕೂಡಾ ಆಗಿದ್ದಾರೆ. ದೀಕ್ಷಾ ದಾಗರ್ ಅವರು ದಕ್ಷಿಣ ಆಫ್ರಿಕಾ ಓಪೆನ್ ಟೂರ್ನಿ ಗೆದ್ದ ಸಾಧನೆಯನ್ನೂ ಮಾಡಿದ್ದಾರೆ. ಈ ಇಬ್ಬರು ಮೊದಲಿಗೆ ಸ್ಥಾನ ಪಡೆದಿದ್ದರೆ, ತ್ವೆಸಾ ಮಲ್ಲಿಕ್ ಮತ್ತು ಆಸ್ತಾ ಮದನ್ ಅವರು ತಡವಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.