ನವದೆಹಲಿ: ಶ್ರೀಲಂಕಾ ಪ್ರವಾಸದ ವೇಳೆ ಕೃನಾಲ್ ಪಾಂಡ್ಯ ಅವರಿಗೆ ಕೊರೊನಾ ವಕ್ಕರಿಸಿತ್ತು. ಆದರೆ, ಈ ಪ್ರಕರಣದಲ್ಲಿ ಬಿಸಿಸಿಐನ ವೈದ್ಯಾಧಿಕಾರಿಯು ಆರ್ಟಿಪಿಸಿಆರ್ ಪರೀಕ್ಷೆಯನ್ನು ಒಂದು ದಿನ ವಿಳಂಬ ಮಾಡಿರುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಿನ್ನೆಲೆ ಎಂಟು ಆಟಗಾರರು ಎರಡು T-20I ಪಂದ್ಯಗಳನ್ನು ಕಳೆದುಕೊಂಡಿದ್ದಾರೆ.
ಕೃನಾಲ್ಗೆ ಗಂಟಲು ನೋವಿನಂತಹ ಲಕ್ಷಣಗಳು ಕಂಡುಬಂದ ನಂತರ, ಜುಲೈ 26 ರಂದು ತಂಡದ ಜೊತೆಗಿದ್ದ ವೈದ್ಯ ಅಭಿಜಿತ್ ಸಾಲ್ವಿ ತಕ್ಷಣವೇ ಅವರನ್ನು ಪರೀಕ್ಷಿಸಿದ್ದರು. ಆದರೆ ಕ್ಷಿಪ್ರ ಪ್ರತಿಜನಕ ಪರೀಕ್ಷೆ (RAT) ತಕ್ಷಣವೇ ಮಾಡಲಾಗಿಲ್ಲ ಹಾಗೂ ಆಟಗಾರನನ್ನು ತಕ್ಷಣವೇ ಪ್ರತ್ಯೇಕಿಸರಲಿಲ್ಲ.
ಗಂಟಲು ನೋವಿನ ಹೊರತಾಗಿಯೂ, ತಂಡದ ವೈದ್ಯರು ಆಟಗಾರನಿಗೆ ತಂಡಕ್ಕೆ ಹಾಜರಾಗಲು ಅವಕಾಶ ನೀಡಿದರು ಮತ್ತು ಜುಲೈ 27ರ ಬೆಳಗ್ಗೆ ಅವರ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಲಾಯಿತು. ವರದಿಗಳು ಮಧ್ಯಾಹ್ನದ ನಂತರ ಬಂದವು. ಇದಾದ ನಂತರ ಬಿಸಿಸಿಐ ಮತ್ತು ಎಸ್‌ಎಲ್‌ಸಿ ಜಂಟಿಯಾಗಿ ಒಂದು ದಿನ ಆಟವನ್ನು ಮುಂದೂಡಲು ನಿರ್ಧರಿಸಿದವು. ಕಾರಣ ಅವರ ಜೊತೆ ಇದ್ದ ಎಂಟು ನಿಕಟ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಲಾಯಿತು.
ಇದನ್ನೂ ಓದಿ: ಕೃನಾಲ್ ಬೆನ್ನಲ್ಲೇ ಚಹಾಲ್, ಗೌತಮ್ಗೂ ವಕ್ಕರಿಸಿರುವ ಕೋವಿಡ್... ಲಂಕಾದಲ್ಲಿಯೇ ಆಟಗಾರರ ಐಸೋಲೇಷನ್