ಕರ್ನಾಟಕ

karnataka

ETV Bharat / sports

Deodhar Trophy: ಶಿವ ದುಬೆ ಅಮೋಘ ಪ್ರದರ್ಶನ; ಉತ್ತರದ ವಿರುದ್ಧ ಗೆದ್ದು ಬೀಗಿದ ಪಶ್ಚಿಮ ವಲಯ - ಉತ್ತರ ವಲಯ

Deodhar trophy cricket: ಭಾನುವಾರ ನಡೆದ ರೌಂಡ್​ ರಾಬಿನ್​ ದೇವಧರ್ ಟ್ರೋಫಿ ಪಂದ್ಯದಲ್ಲಿ ಉತ್ತರ ವಲಯದ ವಿರುದ್ಧ ಪಶ್ಚಿಮ ವಲಯ ಭರ್ಜರಿ ಗೆಲುವು ಸಾಧಿಸಿದೆ.

six-hitting-dube-powers-west-zone-to-six-wicket-win-over-north-zone
ರೌಂಡ್​ ರೋಬಿನ್​ ದೇವಧರ್ ಟ್ರೋಫಿ : ಉತ್ತರ ವಲಯದ ವಿರುದ್ಧ ಗೆಲುವು ದಾಖಲಿಸಿದ ಪಶ್ಚಿಮ ವಲಯ

By

Published : Jul 31, 2023, 9:29 AM IST

ಪುದುಚೇರಿ: ಆಲ್​ರೌಂಡರ್​ ಶಿವಂ ದುಬೆ ಅವರ ಉತ್ತಮ ಬ್ಯಾಟಿಂಗ್​ ಪ್ರದರ್ಶನದಿಂದ ಪಶ್ಚಿಮ ವಲಯ ತಂಡವು ಉತ್ತರ ವಲಯದ ವಿರುದ್ಧ ಗೆದ್ದು ಬೀಗಿತು. ಭಾನುವಾರ ಇಲ್ಲಿನ ಸಿಯೆಚೆಮ್​ ಮೈದಾನದಲ್ಲಿ ನಡೆದ ರೌಂಡ್​ ರಾಬಿನ್​ ದೇವಧರ್ ಟ್ರೋಫಿ ಪಂದ್ಯದಲ್ಲಿ ಪಶ್ಚಿಮ ವಲಯ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

ಐಪಿಎಲ್​ನಲ್ಲಿ ಚೆನ್ನೈ ಪರ ಭರ್ಜರಿ ಬ್ಯಾಟಿಂಗ್​ ನಡೆಸಿದ್ದ ಶಿವಂ ದುಬೆ ಅಮೋಘ ಬ್ಯಾಟಿಂಗ್​ ಪ್ರದರ್ಶನ ಮುಂದುವರೆಸಿ 5 ಸಿಕ್ಸರ್​ ಮತ್ತು 3 ಬೌಂಡರಿ ಮೂಲಕ 83 ರನ್​ ಗಳಿಸಿದರು. ಕಥನ್​ ಡಿ ಪಟೇಲ್​ ಆರು ಬೌಂಡರಿಗಳೊಂದಿಗೆ 63 ರನ್ ಪೇರಿಸಿ ಪಶ್ಚಿಮ ವಲಯದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಹೀಗಿತ್ತು ಪಂದ್ಯ: ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಉತ್ತರ ವಲಯ, 50 ಓವರ್​ಗಳಲ್ಲಿ 6 ವಿಕೆಟ್​​ ನಷ್ಟಕ್ಕೆ 259 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ 29 ರನ್​ ಗಳಿಸಿದರೆ, ಪ್ರಭು​​ಸಿಮ್ರಾನ್​ ಸಿಂಗ್​ 26 ರನ್​ ಗಳಿಸಿ ಔಟಾದರು. ಬಳಿಕ ಉತ್ತಮ ಜೊತೆಯಾಟವಾಡಿದ ಹಿಮಾಂಶು ರಾಣಾ ಮತ್ತು ನಿತೀಶ್​ ರಾಣಾ ತಲಾ 54 ರನ್​ ಗಳಿಸಿ ವಿಕೆಟ್‌ ಒಪ್ಪಿಸಿದರು. ಹಿಮಾಂಶು ರಾಣಾ ಮತ್ತು ನಿತೀಶ್​ ರಾಣಾ 49 ರನ್​ಗಳ ಜೊತೆಯಾಟ ಆಡಿದರು. ಬಳಿಕ ಆಗಮಿಸಿದ ಮಂದೀಪ್​ ಸಿಂಗ್​ 13 ರನ್​ ಗಳಿಸಿ ಔಟಾದರೆ, 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಶುಭಂ ರೋಹಿಲ್ಲಾ 56 ರನ್​ ಗಳಿಸಿ ನೆರವಾದರು. ನಿಶಾಂತ್​ ಸಿಂಧು 11 ರನ್​, ಆರ್.ಆರ್.ಧವನ್​ 12 ರನ್​ ಗಳಿಸಿ ಔಟಾದರು. ಈ ಮೂಲಕ ಉತ್ತರ ವಲಯ 50 ಓವರ್​ ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 259 ರನ್​ ಗಳಿಸಿತು. ಪಶ್ಚಿಮ ವಲಯದ ಪರ, ಶಾಮ್ಸ್​ ಮುಲಾನಿ 3 ವಿಕೆಟ್​ ಪಡೆದು ಮಿಂಚಿದರೆ, ಆರ್.ಎಸ್.ಹಂಗರ್ಕರ್​, ಸರ್ಫರಾಜ್​​ ಖಾನ್​ ಹಾಗು ರಾಹುಲ್​ ತ್ರಿಪಾಠಿ ತಲಾ ಒಂದೊಂದು ವಿಕೆಟ್​ ಪಡೆದರು.

ಬಳಿಕ ಗುರಿ ಬೆನ್ನತ್ತಿದ್ದ ಪಶ್ಚಿಮ ವಲಯದ ಆರಂಭಿಕ ಆಟಗಾರರಾದ ಹೆಚ್.ದೇಸಾಯಿ 56 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ಆರಂಭಿಕ ಆಟಗಾರ ಪಿ.ಕೆ.ಪಾಂಚಾಲ್ 14 ರನ್​ ಗಳಿಸಿದ್ದಾಗ ಆರ್​.ಆರ್.ಧವನ್​ ಬೌಲಿಂಗ್​ನಲ್ಲಿ ಅಭಿಷೇಕ್​ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದರು. ಬಳಿಕ ಕ್ರೀಸಿಗೆ ಬಂದ ರಾಹುಲ್​ ತ್ರಿಪಾಠಿ 3 ರನ್​, ಸಮರ್ಥ ವ್ಯಾಸ್​​ 25 ರನ್​ ಗಳಿಸಿ ಔಟಾದರು. ಈ ವೇಳೆ ಜೊತೆಯಾದ ಕಥನ್ ಪಟೇಲ್​ ಮತ್ತು ಶಿವಂ ದುಬೆ​​​ 138 ರನ್​ಗಳ ಜೊತೆಯಾಟ ಆಡಿದರು. ಈ ಮೂಲಕ ಪಶ್ಚಿಮ ವಲಯವು 48.5 ಓವರ್​ಗಳಲ್ಲಿ 260 ಗಳಿಸಿ ಗೆಲುವಿನ ನಗೆ ಬೀರಿತು. ಉತ್ತರ ವಲಯ ಪರ, ರಿಷಿ ಧವನ್, ಮಾಯಾಂಕ್​ ಯಾದವ್​, ನಿತೀಶ್​ ರಾಣಾ ತಲಾ 1 ವಿಕೆಟ್​ ಪಡೆದರು.

ಪಶ್ಚಿಮ ವಲಯವು ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಉತ್ತರ ವಲಯವು ನಾಲ್ಕು ಪಂದ್ಯದಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಐದನೇ ಸ್ಥಾನದಲ್ಲಿದೆ.

ಸಂಕ್ಷಿಪ್ತ ಸ್ಕೋರ್‌ ಕಾರ್ಡ್: ಉತ್ತರ ವಲಯ: 50 ಓವರ್‌ಗಳಲ್ಲಿ ಆರು ವಿಕೆಟ್‌ಗೆ 259 (ಎಸ್ ರೋಹಿಲ್ಲಾ 56, ನಿತೀಶ್ ರಾಣಾ 54, ಎಚ್ ರಾಣಾ 54; ಶಮ್ಸ್ ಮುವಾನಿ 3/29)

ಪಶ್ಚಿಮ ವಲಯ: 48.5 ಓವರ್‌ಗಳಲ್ಲಿ 4 ವಿಕೆಟ್‌ಗೆ 260 (ಶಿವಂ ದುಬೆ 83, ಕಥನ್ ಪಟೇಲ್ 63; ರಿಷಿ ಧವನ್ 1/30).

ಇದನ್ನೂ ಓದಿ :ಧೋನಿ ಮಲಗಿದ್ದಾಗ ವಿಡಿಯೋ ರೆಕಾರ್ಡ್ ಮಾಡಿದ ಗಗನಸಖಿ.. ಖಾಸಗಿತನಕ್ಕೆ ಅವಕಾಶ ಕೊಡಿ ಎಂದು ನೆಟ್ಟಿಗರಿಂದ ಆಕ್ರೋಶ

ABOUT THE AUTHOR

...view details