ಟೋಕಿಯೋ: ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದ ದೀಪಿಕಾ ಕುಮಾರಿ ಟೋಕಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊರಿಯಾ ಆರ್ಚರ್ ಅನ್ ಸನ್ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದಾರೆ. ಈ ಮೂಲಕ ಅವರು ವೈಯಕ್ತಿಕ ಆಟದಿಂದ ಹೊರ ಬಿದ್ದಿದ್ದಾರೆ.
ಕೊರಿಯಾ ಬಿಲ್ಲುಗಾರ್ತಿ ಎದುರು ದೀಪಿಕಾಗೆ ಹೀನಾಯ ಸೋಲು.. ಕಮರಿದ ಕನಸು! - ದೀಪಿಕಾ ಕುಮಾರಿ ಸುದ್ದಿ
ಟೋಕಿಯೋ ಒಲಿಂಪಿಕ್ಸ್‌ನ ಕೊರಿಯಾ ಬಿಲ್ಲುಗಾರ್ತಿ ಮುಂದು ದೀಪಿಕಾ ಹೀನಾಯ ಸೋಲು ಅನುಭವಿಸಿ ಕ್ವಾರ್ಟರ್ ಫೈನಲ್ನಿಂದ ಹೊರ ಬಿದ್ದಿದ್ದಾರೆ.
![ಕೊರಿಯಾ ಬಿಲ್ಲುಗಾರ್ತಿ ಎದುರು ದೀಪಿಕಾಗೆ ಹೀನಾಯ ಸೋಲು.. ಕಮರಿದ ಕನಸು! Deepika Kumari goes down, Deepika Kumari goes down in QF, Deepika Kumari news, Deepika Kumari latest news, ದೀಪಿಕಾ ಕುಮಾರಿಗೆ ಸೋಲು, ಕ್ವಾರ್ಟರ್ ಫೈನಲ್ನಲ್ಲಿ ದೀಪಿಕಾ ಕುಮಾರಿಗೆ ಸೋಲು, ದೀಪಿಕಾ ಕುಮಾರಿ, ದೀಪಿಕಾ ಕುಮಾರಿ ಸುದ್ದಿ,](https://etvbharatimages.akamaized.net/etvbharat/prod-images/768-512-12618523-510-12618523-1627626334843.jpg)
ಕಮರಿದ ಭಾರತದ ಆಸೆ
ದೀಪಿಕಾ ಕುಮಾರಿ ರಷ್ಯಾದ ಕೆ.ಪೆರೋವ್ ಎದುರು ಆಕರ್ಷಕ ಪ್ರದರ್ಶನ ತೋರುವ ಮೂಲಕ ಪ್ರಿ ಕ್ವಾರ್ಟರ್ ಫೈನಲ್ನಿಂದ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದರು. ಆದರೆ ಕೊರಿಯಾ ಆಟಗಾರ್ತಿ ಮುಂದು ದೀಪಿಕಾ ಮಂಕಾದರು.
ಆಟದ ಮೊದಲನೇ ಸುತ್ತಿನಿಂದಲೂ ಅನ್ ಸನ್ ಉತ್ತಮ ಪ್ರದರ್ಶನ ತೋರಿದ್ದು, 6-0 ಮೂಲಕ ಭಾರತದ ದೀಪಿಕಾ ಅವರನ್ನು ಸುಲಭವಾಗಿ ಮಣಿಸಿದರು. ಹೀಗಾಗಿ ಪದಕದ ಕನಸು ಕಂಡಿದ್ದ ದೀಪಿಕಾಗೆ ನಿರಾಸೆಯಾಗಿದೆ.