ಕರ್ನಾಟಕ

karnataka

ETV Bharat / sports

ದೀಪಕ್ ಕಬ್ರಾ: ಒಲಿಂಪಿಕ್ಸ್​ನಲ್ಲಿ ಕಾರ್ಯನಿರ್ವಹಿಸಲಿರುವ ಭಾರತದ ಮೊಟ್ಟ ಮೊದಲ ಜಿಮ್ನಾಸ್ಟಿಕ್​ ತೀರ್ಪುಗಾರ - ಟೋಕಿಯೋ ಒಲಿಂಪಿಕ್ಸ್ 2021

ಜಿಮ್ನಾಸ್ಟಿಕ್​ನಲ್ಲಿ ಒಬ್ಬ ಅಥ್ಲೀಟ್​ ಆಗಿ ಸ್ಪರ್ಧಿಸಲು ಹೆಚ್ಚು ಮೂಲಸೌಕರ್ಯ ಹೊಂದಿಲ್ಲದಿರುವುದರಿಂದ ತೀರ್ಪುಗಾರನಾಗಿ ತಮ್ಮ ಒಲಿಂಪಿಕ್ಸ್​ ಕನಸನ್ನು ಕಬ್ರಾ ಪೂರೈಸಿಕೊಂಡಿದ್ದಾರೆ.

ದೀಪಕ್ ಕಬ್ರಾ
ದೀಪಕ್ ಕಬ್ರಾ

By

Published : Jul 13, 2021, 8:29 PM IST

ನವದೆಹಲಿ: ದೀಪಕ್​ ಕಬ್ರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ತೀರ್ಪುಗಾರನಾಗಿ ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಜಿಮ್ನಾಸ್ಟಿಕ್​ನಲ್ಲಿ ಒಬ್ಬ ಅಥ್ಲೀಟ್​ ಆಗಿ ಸ್ಪರ್ಧಿಸಲು ಹೆಚ್ಚು ಮೂಲಸೌಕರ್ಯ ಹೊಂದಿಲ್ಲದಿರುವುದರಿಂದ ತೀರ್ಪುಗಾರನಾಗಿ ತಮ್ಮ ಒಲಿಂಪಿಕ್ಸ್​ ಕನಸನ್ನು ಕಬ್ರಾ ಪೂರೈಸಿಕೊಂಡಿದ್ದಾರೆ. ಈ ಮೂಲಕ ಒಲಂಪಿಕ್ಸ್​ನಲ್ಲಿ ಜಿಮ್ನಾಸ್ಟಿಕ್​ ಸ್ಪರ್ಧೆಯಲ್ಲಿ ಕಾರ್ಯನಿರ್ವಹಿಸಲಿರುವ ಮೊದಲ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಜುಲೈ 13ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪುರುಷರ ವಿಭಾಗದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್​ನಲ್ಲಿ ತೀರ್ಪುಗಾರರಾಗಿ ಇವರು ಕಾರ್ಯನಿರ್ವಹಿಸಲಿದ್ದಾರೆ.

"ನನಗೆ ಕಳೆದ ವರ್ಷ ಮಾರ್ಚ್​ನಲ್ಲಿ ತೀರ್ಪುಗಾರನಾಗಿ ಕಾರ್ಯನಿರ್ವಹಿಸಲು ಆಹ್ವಾನ ಬಂದಿತ್ತು. ಆದರೆ ಕೋವಿಡ್​ನಿಂದ ಒಲಿಂಪಿಕ್ಸ್ ಮುಂದೂಡಲ್ಪಟ್ಟಿತು. ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯುವಂತಾಯಿತು. ಈ ವರ್ಷ ಏಪ್ರಿಲ್​ನಲ್ಲಿ ದೃಢೀಕರಣ ಸಿಕ್ಕಿತು. ಆದರೆ ಕೋವಿಡ್​ 19 ಬಿಕ್ಕಟ್ಟಿದ್ದಿದ್ದರಿಂದ ಒಲಿಂಪಿಕ್ಸ್ ನಡೆಯುವುದೇ ಅಥವಾ ಇಲ್ಲವೇ ಎನ್ನುವ ಗೊಂದಲವಿತ್ತು. ಈಗ ನನಗೆ ಸಂತೋಷವಾಗಿದೆ, ನನ್ನ ಒಲಿಂಪಿಕ್ಸ್ ಕನಸನ್ನು ಈ ರೀತಿ ಬದುಕಿಸಿಕೊಳ್ಳಲಿದ್ದೇನೆ" ಎಂದು ಪಿಟಿಐಗೆ ಕಬ್ರಾ ತಿಳಿಸಿದ್ದಾರೆ.

‘33 ವರ್ಷದ ಮಹರಾಷ್ಟ್ರದ ಕಬ್ರಾ ಈ ಕ್ರೀಡೆಯನ್ನು ತುಂಬಾ ತಡವಾಗಿ ಆಯ್ಕೆ ಮಾಡಿಕೊಂಡರು. ಆದರೆ ಅಥ್ಲೀಟ್ ಆಗಲು ತಮ್ಮ ಮೂಲ ಸೌಲಭ್ಯಗಳ ಬಲಿಷ್ಠವಾಗಿಲ್ಲ ಎಂಬುದನ್ನು ಆದಷ್ಟು ಬೇಗ ಅವರು ಅರಿತುಕೊಂಡಿದ್ದು ರಾಷ್ಟೀಯ ಮಟ್ಟದಲ್ಲಿ ಸ್ಪರ್ಧಿಸಿದರು. ನಂತರ ಅವರ ಕೋಚ್​ ಕೌಶಿಕ್​ ಅವರಿಂದ ಪ್ರೇರಣೆ ಪಡೆದು ತೀರ್ಪುಗಾರನಾಗಲು ಕೋರ್ಸ್​ ಮುಗಿಸಿ ಅದರಲ್ಲಿ ಟಾಪರ್ ಆದರು.

ಭಾರತದಲ್ಲಿ ನಡೆದ ಕಾಮನ್​ವೆಲ್ತ್​ ಗೇಮ್ಸ್​ 2010ರಲ್ಲಿ ಮೊದಲ ಬಾರಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ನಂತರ 2014ರ ಏಷ್ಯನ್​ ಗೇಮ್ಸ್​ ಮತ್ತು ಯೂತ್ ಗೇಮ್ಸ್​ನಲ್ಲಿ ತೀರ್ಪುಗಾರರಾಗಿ ಆಯ್ಕೆಯಾದ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರರಾದರು. ನಂತರ 2018 ಏಷ್ಯನ್ ಗೇಮ್ಸ್, ಕಾಮನ್​ವೆಲ್ತ್​ ಗೇಮ್ಸ್ , ಯೂತ್ ಗೇಮ್ಸ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಇದೀಗ ಒಲಿಂಪಿಕ್ಸ್​ನಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುವ ಮೂಲಕ ಭಾರತಕ್ಕೆ ಮತ್ತೊಂದು ಗೌರವ ತಂದುಕೊಟ್ಟಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಪ್ರಣತಿ ನಾಯಕ್ ಜಿಮ್ನಾಸ್ಟಿಕ್​ನಲ್ಲಿ ಸ್ಪರ್ಧಿಸಲಿರುವ ಏಕೈಕ ಭಾರತೀಯರಾಗಿದ್ದಾರೆ. ಅವರು 2019ರ ಏಷ್ಯನ್ ಗೇಮ್ಸ್​ನಲ್ಲಿ ಕಂಚಿನ ಪದಕ ಪಡೆದಿದ್ದರು.

ಇದನ್ನೂ ಓದಿ:Tokyo Olympics: ಜಾವಲಿನ್​ ಪಟು ನೀರಜ್​ ಚೋಪ್ರಾ ಮೇಲೆ ಭಾರತದ ಭರವಸೆ

ABOUT THE AUTHOR

...view details