ಮಸ್ಕಾಟ್: ಎಫ್ಐಹೆಚ್ ಫ್ರೋ ಲೀಗ್ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ 7-1ರ ರಲ್ಲಿ ಚೀನಾ ವಿರುದ್ಧ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಪಂದ್ಯ ಆರಂಭವಾದ 5 ನೇ ನಿಮಿಷದಲ್ಲಿ ನವನೀತ್ ಕೌರ್ ಫೀಲ್ಡ್ ಗೋಲು ಬಾರಿಸಿ ಅದ್ಭುತ ಆರಂಭ ಒದಗಿಸಿಕೊಟ್ಟರು. ನಂತರ 12 ನೇ ನಿಮಿಷದಲ್ಲಿ ನೇಹಾ ಫೀಲ್ಡ್ ಗೋಲು ಬಾರಿಸಿ ಮುನ್ನಡೆಯನ್ನು ದ್ವಿಗುಣ ಬಾರಿಸಿದರು. 2ನೇ ಕ್ವಾರ್ಟರ್ನಲ್ಲಿ ಭಾರತ ಹಲವು ಅವಕಾಶಗಳನ್ನು ಪಡೆದರೂ ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು.
ಆದರೆ 3ನೇ ಕ್ವಾರ್ಟರ್ನ 40ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಫೀಲ್ಡ್ ಗೋಲು ಬಾರಿಸಿ ಮುನ್ನಡೆಯನ್ನು 3-0ಗೆ ಹೆಚ್ಚಿಸಿದರೆ, ಚೀನಾ ಪರ 43ನೇ ನಿಮಿಷದಲ್ಲಿ ಡೆಂಗ್ ಕ್ಸೂ ಏಕೈಕ ಗೋಲು ಬಾರಿಸಿ ಮುನ್ನಡೆಯನ್ನು 1-3ಕ್ಕೆ ತಗ್ಗಿಸಿದ್ದರು.