ಕರ್ನಾಟಕ

karnataka

ETV Bharat / sports

FIFA World Cup 2022: ಫೈನಲ್ ಪಂದ್ಯಕ್ಕೂ ಮುನ್ನ ಪ್ರೇಕ್ಷಕರ ರಂಜಿಸಲಿರುವ ಸೆಲೆಬ್ರಿಟಿಗಳು

ಭಾನುವಾರ ರಾತ್ರಿ ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವೆ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಲುಸೇಲ್ ಸ್ಟೇಡಿಯಂನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ.

davido-and-aisha-ozuna-and-gims-nora-fatehi-balqees-rahma-riad-and-mana-perform-fifa-wc
FIFA World Cup 2022: ಫೈನಲ್ ಪಂದ್ಯಕ್ಕೂ ಮುನ್ನ ಪ್ರೇಕ್ಷಕರನ್ನು ರಂಜಿಸಲಿರುವ ಸೆಲೆಬ್ರಿಟಿಗಳು

By

Published : Dec 17, 2022, 3:44 PM IST

ದೋಹಾ (ಕತಾರ್):ಕತಾರ್​ನಲ್ಲಿ ನಡೆಯುತ್ತಿರುವ 22ನೇ ಫಿಫಾ ವಿಶ್ವಕಪ್ 2022 (FIFA World Cup 2022) ಟೂರ್ನಿ ಭಾನುವಾರ ಮುಕ್ತಾಯಗೊಳ್ಳಲಿದ್ದು, ಫೈನಲ್ ಪಂದ್ಯಕ್ಕೂ ಮುನ್ನ ಹಲವು ಸೆಲೆಬ್ರಿಟಿಗಳು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ವಿಶ್ವಕಪ್​ ಟೂರ್ನಿಯಲ್ಲಿ ಎರಡು ಪಂದ್ಯಗಳು ಉಳಿದಿವೆ. ಅದರಲ್ಲಿ ಕ್ರೊಯೇಷಿಯಾ ಮತ್ತು ಮೊರಾಕ್ಕೊ (Croatia vs Morocco) ನಡುವೆ ಇಂದು ರಾತ್ರಿ ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ಭಾನುವಾರ ರಾತ್ರಿ 8:30ಕ್ಕೆ ಲುಸೇಲ್ ಸ್ಟೇಡಿಯಂನಲ್ಲಿ ಫ್ರಾನ್ಸ್ ಮತ್ತು ಅರ್ಜೆಂಟೀನಾ (France vs Argentina) ನಡುವೆ ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ಮೊರಾಕ್ಕೊ ಮೊದಲ ಫೈನಲ್​ ಆಸೆಗೆ ತಣ್ಣೀರೆರಚಿದ ಫ್ರಾನ್ಸ್​... 2-0 ಗೋಲುಗಳಿಂದ ಗೆದ್ದು ಫೈನಲ್​ಗೆ ಎಂಟ್ರಿ

ಹಾಲಿ ಚಾಂಪಿಯನ್ ಫ್ರಾನ್ಸ್ ನಾಲ್ಕನೇ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಅರ್ಜೆಂಟೀನಾವನ್ನು ಸೋಲಿಸುವ ಮೂಲಕ ಫ್ರಾನ್ಸ್ ಸತತ ಎರಡನೇ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದೆ. ಫೈನಲ್ ಪಂದ್ಯಕ್ಕೂ ಮುನ್ನ ಲುಸೇಲ್ ಸ್ಟೇಡಿಯಂನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಸೌಂಡ್‌ಟ್ರ್ಯಾಕ್ ತಾರೆಗಳಾದ ಡೇವಿಡೋ ಮತ್ತು ಆಯೇಶಾ, ಓಝುನಾ ಮತ್ತು ಗಿಮ್ಮಸ್, ನೋರಾ ಫತೇಹಿ, ಬಾಲ್ಕಿಸ್, ರಹ್ಮಾ ರಿಯಾಡ್ ಮತ್ತು ಮನಲ್ ಲೈವ್ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಎರಡು ಬಾರಿ ವಿಶ್ವಕಪ್ ಗೆದ್ದಿರುವ ಉಭಯ ತಂಡಗಳು: ಫೈನಲ್​ ಪ್ರವೇಶಿಸಿರುವ ಫ್ರಾನ್ಸ್ ಮತ್ತು ಅರ್ಜೆಂಟೀನಾ ಉಭಯ ತಂಡಗಳು ಎರಡು ಬಾರಿ ವಿಶ್ವಕಪ್​ ಗೆದ್ದಿವೆ. ಫ್ರಾನ್ಸ್ ಗೆದ್ದರೆ ಸತತ ಎರಡನೇ ಬಾರಿ ಚಾಂಪಿಯನ್ ಆಗಲಿದೆ. 2018ರ ವಿಶ್ವಕಪ್ ಫೈನಲ್‌ನಲ್ಲಿ ಕ್ರೊಯೇಷಿಯಾವನ್ನು ಸೋಲಿಸುವ ಮೂಲಕ ಫ್ರಾನ್ಸ್ ಪ್ರಶಸ್ತಿ ಗೆದ್ದುಕೊಂಡಿತ್ತು.

ಇದನ್ನೂ ಓದಿ:ಫಿಫಾ ವಿಶ್ವಕಪ್: ವೃತ್ತಿ ಜೀವನದ ಬಗ್ಗೆ ಮೆಸ್ಸಿ ಮಹತ್ವದ ಘೋಷಣೆ

ಈ ಬಾರಿ ಅರ್ಜೆಂಟೀನಾ ತಂಡ ಫ್ರಾನ್ಸ್​ಗೆ ಫೈನಲ್​ನಲ್ಲಿ ಎದುರಾಳಿಯಾಗಿದೆ. ಉಭಯ ತಂಡಗಳು ತಲಾ ಎರಡು ಬಾರಿ ವಿಶ್ವಕಪ್ ಗೆದ್ದಿರುವುದರಿಂದ ಅಂತಿಮ ಪಂದ್ಯದಲ್ಲಿ ಸಮಬಲದ ಹೋರಾಟ ನಡೆಯಲಿದೆ. ಇಲ್ಲಿಯವರೆಗೆ ಅರ್ಜೆಂಟೀನಾ ಮತ್ತು ಫ್ರಾನ್ಸ್ 12 ಬಾರಿ ಫುಟ್ಬಾಲ್ ಮೈದಾನದಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಅರ್ಜೆಂಟೀನಾ 6 ಪಂದ್ಯಗಳನ್ನು ಗೆದ್ದಿದೆ.

ಫ್ರಾನ್ಸ್ ಕೇವಲ ಮೂರು ಪಂದ್ಯಗಳನ್ನು ಗೆದ್ದು ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 1930ರ ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಅರ್ಜೆಂಟೀನಾ 1-0 ಅಂತರದಲ್ಲಿ ಗೆಲುವು ಸಾಧಿಸಿತ್ತು.

ಲಿಯೋನೆಲ್ ಮೆಸ್ಸಿಗೆ ಕೊನೆಯ ವಿಶ್ವಕಪ್:ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರಿಗೆ ಈ ಫಿಫಾ ವಿಶ್ವಕಪ್​ನ ಫೈನಲ್ ಪಂದ್ಯವೇ ಕೊನೆಯ ವಿಶ್ವಕಪ್ ಟೂರ್ನಿಯಾಗಿದೆ. ಈ ಬಗ್ಗೆ 35 ವರ್ಷ ವಯಸ್ಸಿನ ಮೆಸ್ಸಿ ಅವರೇ ಬಹಿರಂಗ ಪಡಿಸಿದ್ದಾರೆ. ನನ್ನ ಕೊನೆಯ ಪಂದ್ಯವನ್ನು ಫೈನಲ್‌ನಲ್ಲಿ ಆಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸುತ್ತೇನೆ ಎಂದು ಮೆಸ್ಸಿ ತಿಳಿಸಿದ್ದಾರೆ.

ಇದನ್ನೂ ಓದಿ:ಫಿಫಾ ವಿಶ್ವಕಪ್​: ಕ್ರೊವೇಷಿಯಾ ಸೋಲಿಸಿ ಫೈನಲ್​ ತಲುಪಿದ ಅರ್ಜೆಂಟೀನಾ, ಅಂತಿಮ ಕದನಕ್ಕೆ ರೆಡಿ

ABOUT THE AUTHOR

...view details