ಕರ್ನಾಟಕ

karnataka

By

Published : Jul 30, 2022, 6:28 PM IST

Updated : Jul 30, 2022, 6:38 PM IST

ETV Bharat / sports

CWG-2022: ವೇಟ್ ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ.. ಕಂಚು ಗೆದ್ದ ಕನ್ನಡಿಗ ​

ವೇಟ್​ ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಎರಡನೇ ಪದಕ- ಕಂಚಿನ ಪದಕಕ್ಕೆ ಮುತ್ತಿಕ್ಕಿದ ಕನ್ನಡಿಗ ಗುರುರಾಜ್​​- 61 ಕೆಜಿ ವಿಭಾಗದಲ್ಲಿ ಮಹತ್ವದ ಸಾಧನೆ

Gururaj Poojary wins a bronze medal
Gururaj Poojary wins a bronze medal

ಬರ್ಮಿಂಗ್​ಹ್ಯಾಮ್​​(ಯುಕೆ): ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ವೇಟ್​ ಲಿಫ್ಟಿಂಗ್​​ನಲ್ಲಿ ಕನ್ನಡಿಗರಾದ ಪಿ. ಗುರುರಾಜ್​​ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ.

61 ಕೆಜಿ ವಿಭಾಗದಲ್ಲಿ ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಗುರುರಾಜ್​ ಪೂಜಾರಿ ಈ ಸಾಧನೆ ಮಾಡಿದ್ದಾರೆ. 118+151 ಕೆಜಿ ಭಾರ ಎತ್ತುವ ಮೂಲಕ ಗುರುರಾಜ್ ಈ ಸಾಧನೆ ಮಾಡಿದ್ದಾರೆ. ಮೂಲತಃ ಕುಂದಾಪುರದವರಾಗಿರುವ ಗುರುರಾಜ್​ ಪೂಜಾರಿ, ಫೈನಲ್​​ನಲ್ಲಿ ಕೆನಡಾದ ಯೂರಿ ಸಿಮರ್ಡ್ ವಿರುದ್ಧ ಸೆಣಸಾಡಿದರು. ಈ ಹಿಂದೆ 2018ರಲ್ಲಿ ಗೋಲ್ಡ್​ ಕೋಸ್ಟ್ ಗೇಮ್ಸ್​​ನಲ್ಲಿ ಪದಕ ಗೆದ್ದಿದ್ದರು.

ಗುರುರಾಜ್​​ ಅವರು ತಮ್ಮ ಮೊದಲ ಸ್ನ್ಯಾಚ್ ಪ್ರಯತ್ನದಲ್ಲಿ 114 ಕೆಜಿ ಮತ್ತು ಎರಡನೇ ಸುತ್ತಿನಲ್ಲಿ 118 ಕೆಜಿ ಎತ್ತಿದರು. ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ, ಭಾರತೀಯ ವೇಟ್‌ಲಿಫ್ಟರ್ ಗುರುರಾಜ್ ಪೂಜಾರಿ ತಮ್ಮ ಮೂರನೇ ಪ್ರಯತ್ನದಲ್ಲಿ 151 ಕೆಜಿ ಎತ್ತುವ ಮೂಲಕ ಕಂಚಿನ ಪದಕವನ್ನು ಗೆದ್ದಿದ್ದಾರೆ. ಮಲೇಷ್ಯಾದ ಅಜ್ನಿಲ್ ಬಿನ್ ಬಿಡೀನ್ ಮುಹಮ್ಮದ್ 61 ಕೆಜಿಯ ವೇಟ್ ಲಿಫ್ಟಿಂಗ್​ನಲ್ಲಿ ಚಿನ್ನದ ಪದಕ ಜಯಿಸಿದರು. ಪಪುವಾ ನ್ಯೂಗಿನಿಯಾದ ಮೋರಿಯಾ ಬಾರು ಬೆಳ್ಳಿಗೆ ಮುತ್ತಿಕ್ಕಿದರು. ಆದರೆ, ಕಂಚಿಗಾಗಿ ಕೆನಡಾದ ಯೂರಿ ಸಿಮರ್ಡ್ ವಿರುದ್ಧ ಗುರುರಾಜ್ ಹಣಾಹಣಿ ನಡೆಸಿದರು. ಕೊನೆಗೂ ಹೆಮ್ಮೆಯ ಕನ್ನಡಿಗ ಕುಂದಾಪುರದ ಗುರುರಾಜ ಪೂಜಾರಿ ಕಂಚಿನ ಪದಕಕ್ಕೆ ಕೊರಳೊಡಿದ್ದರು.

ವೇಟ್ ಲಿಫ್ಟಿಂಗ್​ನಲ್ಲಿ ಈಗಾಗಲೇ ಭಾರತದ ಸಂಕೇತ್​ ಸರ್ಗರ್​ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದು, ಈ ಮೂಲಕ ಭಾರತದ ಪದಕಗಳ ಪಟ್ಟಿ ತೆರೆದಿದ್ದಾರೆ. ಇದೀಗ ಗುರುರಾಜ್ ಎರಡನೇ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Last Updated : Jul 30, 2022, 6:38 PM IST

ABOUT THE AUTHOR

...view details