ಬರ್ಮಿಂಗ್ಹ್ಯಾಮ್(ಇಂಗ್ಲೆಂಡ್): ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ವೇಟ್ ಲಿಫ್ಟಿಂಗ್ನ 96 ಕೆಜಿ ವಿಭಾಗದಲ್ಲಿ ವಿಕಾಸ್ ಠಾಕೂರ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರ ಎತ್ತುವಿಕೆಯಲ್ಲಿ ದೇಶಕ್ಕೆ 8ನೇ ಪದಕ ಒದಗಿಬಂದಿದೆ.
ಅಮ್ಮನ ಹುಟ್ಟುಹಬ್ಬದಂದೇ ಸಾಧನೆ:ತಾಯಿಯ ಹುಟ್ಟುಹಬ್ಬದಂದೇ ವಿಕಾಸ್ ಠಾಕೂರ್ ಈ ಮಹತ್ವದ ಸಾಧನೆ ಮಾಡಿದ್ದಾರೆ. ಫೈನಲ್ ಪಂದ್ಯದಲ್ಲಿ ಒಟ್ಟು 346 ಕೆಜಿ ಭಾರ (155+199ಕೆಜಿ) ಎತ್ತಿರುವ ವಿಕಾಸ್ ಬೆಳ್ಳಿ ಗೆದ್ದರು. ಮಗನ ಸಾಧನೆಗೆ ತಂದೆ ಬಿ.ಎಲ್.ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸುತ್ತಾ, "ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪುತ್ರ ಹ್ಯಾಟ್ರಿಕ್ ಪದಕ ಸಾಧನೆ ಮಾಡಿದ್ದಾನೆ. 4 ವರ್ಷಗಳ ಕಠಿಣ ಪರಿಶ್ರಮ ಫಲ ನೀಡಿದೆ" ಎಂದರು.