ಬರ್ಮಿಂಗ್ಹ್ಯಾಮ್:ಕಾಮನ್ವೆಲ್ತ್ ಗೇಮ್ಸ್ನ ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಪಿ.ವಿ.ಸಿಂಧು ಚೊಚ್ಚಲ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೆ ಜಿಗಿದಿದೆ. ಫೈನಲ್ ಪಂದ್ಯದಲ್ಲಿ ಕೆನಡಾ ಸ್ಪರ್ಧಾಳು ವಿರುದ್ಧ 21-15 21-13 ಅಂತರದಿಂದ ಸಿಂಧು ಗೆಲುವು ದಾಖಲಿಸಿದರು.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಸೆಮಿಫೈನಲ್ನಲ್ಲಿ ಸಿಂಗಾಪುರದ ಜಿಯಾ ಮಿನ್ ವಿರುದ್ಧ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆ ಹಾಕಿದ್ದರು. ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ಈ ಹಿಂದೆ 2014ರಲ್ಲಿ ಕಾಮನ್ವೆಲ್ತ್ನಲ್ಲಿ ಕಂಚು ಹಾಗೂ 2018ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಇಲ್ಲಿಯವರೆಗೆ 19 ಚಿನ್ನ, 15 ಬೆಳ್ಳಿ, 22 ಕಂಚಿನೊಂದಿಗೆ ಒಟ್ಟು 56 ಪದಕ ಸಂಪಾದಿಸಿದೆ. ಈ ಮೂಲಕ ಪದಕಗಳ ಸಾಲಿನಲ್ಲಿ 4ನೇ ಸ್ಥಾನದಲ್ಲಿದೆ.