ಬರ್ಮಿಂಗ್ಹ್ಯಾಮ್(ಯುಕೆ):ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತದ ಕುಸ್ತಿಪಟುಗಳ ಪಟ್ಟುಗಳಿಗೆ ಚಿನ್ನ ಕೊರಳೇರುತ್ತಿದೆ. ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಬಳಿಕ ದೀಪಕ್ ಪೂನಿಯಾ ಅವರು ಕೂಡ ಪಾಕಿಸ್ತಾನದ ಜಟ್ಟಿಯನ್ನು ಬಗ್ಗುಬಡಿದು ಸ್ವರ್ಣ ಸಾಧನೆ ಮಾಡಿದರು.
ಕಾಮನ್‌ವೆಲ್ತ್ ಗೇಮ್ಸ್: ಪಾಕಿಸ್ತಾನ ಜಟ್ಟಿಯ ಎತ್ತೆಸೆದು ಚಿನ್ನ ಗೆದ್ದ ಭಾರತದ ದೀಪಕ್ ಪೂನಿಯಾ - ಕಾಮನ್‌ವೆಲ್ತ್ ಗೇಮ್ಸ್
ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತ ಕುಸ್ತಿಗಳ ಪರಾಕ್ರಮಕ್ಕೆ 5 ಪದಕಗಳು ಒಲಿದಿವೆ. ಇದರಲ್ಲಿ ದೀಪಕ್ ಪೂನಿಯಾ ಅವರು ಪಾಕಿಸ್ತಾನದ ಆಟಗಾರನಿಗೆ ಮಣ್ಣು ಮುಕ್ಕಿಸಿ ಚಿನ್ನ ಜಯಿಸಿದರು.
ಭಾರತದ ದೀಪಕ್ ಪೂನಿಯಾ
ಫ್ರೀಸ್ಟೈಲ್ 86 ಕೆಜಿ ವಿಭಾಗದಲ್ಲಿ ಪಾಕಿಸ್ತಾನದ ಮೊಹಮ್ಮದ್ ಇನಾಮ್ಗೆ ಭಾರತದ ಕುಸ್ತಿ ಕಲಿ ದೀಪಕ್ ಪೂನಿಯಾ ಸೋಲಿನ ರುಚಿ ತೋರಿಸಿದರು. ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ದೀಪಕ್ ಪಾಕಿ ಆಟಗಾರನಿಗೆ ಒಂದೇ ಒಂದು ಅವಕಾಶ ನೀಡದೇ 3-0 ಅಂತರದಲ್ಲಿ ಪಂದ್ಯ ಗೆದ್ದರು. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದೀಪಕ್ ಪೂನಿಯಾಗೆ ಇದು ಮೊದಲ ಪದಕವಾಗಿದೆ.
ಓದಿ:ಕಾಮನ್‌ವೆಲ್ತ್ ಗೇಮ್ಸ್: 26 ಸೆಕೆಂಡಲ್ಲಿ ಕಂಚು ಗೆದ್ದ ದಿವ್ಯಾ, ಪ್ಯಾರಾ ಪವರ್ ಲಿಫ್ಟರ್ ಸುಧೀರ್ಗೆ ಸ್ವರ್ಣ