ಬರ್ಮಿಂಗ್ ಹ್ಯಾಮ್ (ಯು.ಕೆ): ಭಾರತದ ಆಟಗಾರ್ತಿ ಬಹ್ವಿನಾ ಪಟೇಲ್ ಅವರು ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಟೇಬಲ್ ಟೆನ್ನಿಸ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನೈಜೀರಿಯಾದ ಇಫೆಚುಕ್ವುಡೆ ಕ್ರಿಸ್ಟಿಯಾನಾ ಇಕ್ಪಿಯೋಯಿ ಅವರನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅತ್ಯುತ್ತಮ ಆಟ ಪ್ರದರ್ಶಿಸಿದ ಪಟೇಲ್, 12-10, 11-2, 11-9 ರಲ್ಲಿ ಇಕ್ಪಿಯೊಯಿ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಮೂರು ಸುತ್ತುಗಳಲ್ಲಿಯೂ ಅಮೋಘ ಪ್ರದರ್ಶನ ತೋರಿದ ಬಹ್ವಿನಾ ಪಟೇಲ್, ಅಂತಿಮವಾಗಿ ಐತಿಹಾಸಿಕ ಸಾಧನೆ ತೋರಿದ್ದಾರೆ.
CWG 2022: ಪ್ಯಾರಾ ಟೇಬಲ್ ಟೆನ್ನಿಸ್‌ನಲ್ಲಿ ಬಹ್ವಿನಾ ಪಟೇಲ್‌ಗೆ ಚಿನ್ನ - Commonwealth Games
ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಟೇಬಲ್ ಟೆನ್ನಿಸ್ ಮಹಿಳೆಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಆಟಗಾರ್ತಿ ಬಹ್ವಿನಾ ಪಟೇಲ್ ಚಿನ್ನ ಗೆದ್ದರು.
CWG 2022: ಪ್ಯಾರಾ ಟೇಬಲ್ ಟೆನ್ನಿಸ್ ಮಹಿಳೆಯರ ಸಿಂಗಲ್ಸ್ನಲ್ಲಿ ಬಹ್ವಿನಾ ಪಟೇಲ್ ಗೆ ಚಿನ್ನ
ಇದಕ್ಕೂ ಮೊದಲು, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಮತ್ತೋರ್ವ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಸೋನಾಲ್ಬೆನ್ ಮನುಭಾಯ್ ಪಟೇಲ್ ಅವರು ಇಂಗ್ಲೆಂಡ್‌ನ ಸ್ಯೂ ಬೈಲಿಯನ್ನು ಸೋಲಿಸಿ ಕಂಚಿನ ಪದಕ ಸಂಪಾದಿಸಿದರು. ಇವರು ಸ್ಯೂ ಬೈಲಿ ಅವರನ್ನು 11-5, 11-2, 11-3 ಅಂಕಗಳಿಂದ ಸೋಲಿಸಿದರು.
ಇದನ್ನೂ ಓದಿ:CWG 2022: ಇತಿಹಾಸ ಸೃಷ್ಟಿಸಿದ ವಿನೇಶ್ ಫೋಗಟ್... ಹ್ಯಾಟ್ರಿಕ್ ಚಿನ್ನಕ್ಕೆ ಮುತ್ತಿಕ್ಕಿದ ಕುಸ್ತಿಪಟು
TAGGED:
Bahvina Patel won gold medal