ಕರ್ನಾಟಕ

karnataka

ETV Bharat / sports

'ಚಿನ್ನದ ಹುಡುಗ' ನೀರಜ್ ಚೋಪ್ರಾಗೆ ವಿಶೇಷ ಜೆರ್ಸಿ ಜೊತೆ ಒಂದು ಕೋಟಿ ರೂ. ನೀಡಿದ CSK - ನೀರಜ್ ಚೋಪ್ರಾಗೆ 1 ಕೋಟಿ ನೀಡಿದ ಸಿಎಸ್‌ಕೆ

ನೀರಜ್‌ ಚೋಪ್ರಾಗೆ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ ಪರವಾಗಿ ಒಂದು ಕೋಟಿ ರೂಪಾಯಿ ಚೆಕ್ ಮತ್ತು 8758 ಸಂಖ್ಯೆಯ ವಿಶೇಷ ಜೆರ್ಸಿಯನ್ನು ನೀಡಲಾಯಿತು. ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಅಂತರಕ್ಕೆ ಜಾವೆಲಿನ್ ಎಸೆದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ನೀರಜ್ ಚೋಪ್ರಾಗೆ ವಿಶೇಷ ಜೆರ್ಸಿ ಜೊತೆ ಒಂದು ಕೋಟಿ ನೀಡಿದ ಸಿಎಸ್‌ಕೆ
ನೀರಜ್ ಚೋಪ್ರಾಗೆ ವಿಶೇಷ ಜೆರ್ಸಿ ಜೊತೆ ಒಂದು ಕೋಟಿ ನೀಡಿದ ಸಿಎಸ್‌ಕೆ

By

Published : Oct 31, 2021, 5:53 PM IST

ನವದೆಹಲಿ: ಮೂರು ಬಾರಿಯ ಐಪಿಎಲ್​​ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌(CSK) ತಂಡವು ಒಲಿಂಪಿಕ್‌ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ಅವರಿಗೆ ಟೋಕಿಯೊ ಗೇಮ್ಸ್‌ನಲ್ಲಿ ಐತಿಹಾಸಿಕ ಸಾಧನೆಯನ್ನು ಗುರುತಿಸಿ ಒಂದು ಕೋಟಿ ರೂಪಾಯಿ ನೀಡಿ ಗೌರವಿಸಿದೆ.

ನೀರಜ್‌ ಚೋಪ್ರಾಗೆ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ ಪರವಾಗಿ ಒಂದು ಕೋಟಿ ರೂಪಾಯಿ ಚೆಕ್ ಮತ್ತು 8758 ಸಂಖ್ಯೆಯ ವಿಶೇಷ ಜೆರ್ಸಿಯನ್ನು ನೀಡಲಾಯಿತು. ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಅಂತರಕ್ಕೆ ಜಾವೆಲಿನ್ ಎಸೆದಿದ್ದರು. ಈ ಕಾರಣದಿಂದ ಚೆನ್ನೈ ಸೂಪರ್ ಕಿಂಗ್ಸ್ 8758 ಸಂಖ್ಯೆಯನ್ನು ನೀರಜ್ ಚೋಪ್ರಾಗಾಗಿ ವಿಶೇಷವಾಗಿ ರಚಿಸಿರುವ ಜೆರ್ಸಿಯನ್ನು ನೀಡಿತು.

"ನೀರಜ್ ಅವರ ಅದ್ಭುತ ಸಾಧನೆಗಾಗಿ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ. ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಪದಕ (ಚಿನ್ನ) ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು ಮುಂದಿನ ಪೀಳಿಗೆಗೆ ಒಂದು ಮಾನದಂಡವನ್ನು ಸ್ಥಾಪಿಸಿದ್ದಾರೆ. 87.58 ಭಾರತೀಯ ಕ್ರೀಡಾ ಇತಿಹಾಸದಲ್ಲಿ ಶಾಶ್ವತವಾಗಿ ಅಚ್ಚಳಿಯದ ಸಂಖ್ಯೆಯಾಗಿದೆ ಮತ್ತು ನೀರಜ್ ಅವರಿಗೆ ಈ ವಿಶೇಷ ಜೆರ್ಸಿಯನ್ನು ಉಡುಗೊರೆಯಾಗಿ ನೀಡುವುದು ನಮಗೆ ಗೌರವವಾಗಿದೆ. ಅವರು ರಾಷ್ಟ್ರಕ್ಕೆ ಇನ್ನಷ್ಟು ಕೀರ್ತಿ ತರಲಿ ಎಂದು ಹಾರೈಸುತ್ತೇವೆ" ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕೆ.ಎಸ್ ವಿಶ್ವನಾಥನ್ ಹೇಳಿದರು.

ಪ್ರಶಸ್ತಿ ಮತ್ತು ವಿಶೇಷ ಜೆರ್ಸಿಯನ್ನು ಸ್ವೀಕರಿಸಿದ ನಂತರ ಮಾತನಾಡಿದ ನೀರಜ್​​ ಚೋಪ್ರಾ, ಕಳೆದ ಎರಡು ತಿಂಗಳುಗಳಿಂದ ಹೊಸ ವಿಷಯಗಳನ್ನು ಅನುಭವಿಸಲು ನನಗೆ ಅವಕಾಶ ಸಿಕ್ಕಿದೆ. ನನ್ನನ್ನು ಈ ರಿತಿ ಬೆಂಬಲಿಸಿದ್ದಕ್ಕಾಗಿ CSK ಆಡಳಿತಕ್ಕೆ ಧನ್ಯವಾದ ಎಂದು ಹೇಳಿದರು.

ನಿಮ್ಮ ಬೆಂಬಲಕ್ಕಾಗಿ ಮತ್ತು ಬಹುಮಾನಕ್ಕಾಗಿ ತುಂಬಾ ಧನ್ಯವಾದಗಳು. ತುಂಬಾ ಖುಷಿಯಾಗುತ್ತಿದೆ. ಚಿನ್ನ ಗೆದ್ದ ನಂತರ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಇದು ಸಂಪೂರ್ಣವಾಗಿ ಅನಿರೀಕ್ಷಿತವಾಗಿದೆ ಮತ್ತು ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಲು ನಾನು ಶ್ರಮಿಸುತ್ತೇನೆ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details