ಕರ್ನಾಟಕ

karnataka

ETV Bharat / sports

ಸೌದಿ ಅರೇಬಿಯಾ ಪಾಲಾದ ಕ್ರಿಶ್ಚಿಯಾನೊ ರೊನಾಲ್ಡೊ.. ದಾಖಲೆಯ ₹4400 ಕೋಟಿ ನೀಡಿದ ಕ್ಲಬ್​ - ಸೌದಿ ಕ್ಲಬ್ ಸೇರಿದ ಕ್ರಿಶ್ಚಿಯಾನೊ ರೊನಾಲ್ಡೊ

ವಿಶ್ವಶ್ರೇಷ್ಠ ಫುಟ್ಬಾಲಿಗ ಕ್ರಿಶ್ಚಿಯಾನೊ ರೊನಾಲ್ಡೊ - ಸೌದಿ ಅರೇಬಿಯಾ ತಂಡ ಸೇರಿದ ಕ್ರಿಶ್ಚಿಯಾನೊ ರೊನಾಲ್ಡೊ - ಅರಬ್​ ಫುಟ್ಬಾಲ್​ ಕ್ಲಬ್​ಗೆ ರೊನಾಲ್ಡೊ- ದುಬಾರಿ ಬೆಲೆಗೆ ಅಲ್​ ನಸ್ರ್ ತಂಡ ಸೇರ್ಪಡೆ

saudi-arabia-club
ಸೌದಿ ಅರೇಬಿಯಾ ಪಾಲಾದ ಕ್ರಿಶ್ಚಿಯಾನೊ ರೊನಾಲ್ಡೊ

By

Published : Dec 31, 2022, 11:34 AM IST

ರಿಯಾದ್ (ಸೌದಿ ಅರೇಬಿಯಾ):ವಿಶ್ವಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರಾದ ಕ್ರಿಶ್ಚಿಯಾನೊ ರೊನಾಲ್ಡೊ ಇಂಗ್ಲೆಂಡ್​ನ ಮ್ಯಾಂಚೆಸ್ಟರ್ ಯುನೈಟೆಡ್​ ಫುಟ್ಬಾಲ್​ ಕ್ಲಬ್​ನಿಂದ ಹೊರಬಿದ್ದಿದ್ದು, ಸೌದಿ ಅರೇಬಿಯಾ ಕ್ಲಬ್​ಗೆ ಪಾಲಾಗಿದ್ದಾರೆ. ಫುಟ್ಬಾಲ್​ ಇತಿಹಾಸದಲ್ಲೇ ಕಂಡು ಕೇಳರಿಯದ ಮೊತ್ತಕ್ಕೆ ಅವರನ್ನು ಸೇರಿಸಿಕೊಂಡಿದೆ. ದಾಖಲೆಗಳ ಸರದಾರ ರೊನಾಲ್ಡೊಗೆ ಕ್ಲಬ್​ ಬರೋಬ್ಬರಿ 4,400 ಕೋಟಿ ರೂಪಾಯಿಗೆ 2 ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

ಕತಾರ್​ನಲ್ಲಿ ನಡೆದ ಫಿಫಾ ವಿಶ್ವಕಪ್​ ವೇಳೆ ರೊನಾಲ್ಡೊ ಮ್ಯಾಂಚೆಸ್ಟರ್​ ಯುನೈಟೆಡ್​​ ತಂಡದಿಂದ ಹೊರಬಿದ್ದಿದ್ದರು. ಕ್ಲಬ್​ ಮತ್ತು ಆಟಗಾರನ ಮಧ್ಯೆ ಅಸಮಾಧಾನದ ಕಾರಣಕ್ಕಾಗಿ ರೊನಾಲ್ಡೊರನ್ನು ಅದರ ಮ್ಯಾನೇಜರ್​ ಕೈಬಿಟ್ಟಿದ್ದರು. ಅಲ್ಲದೇ, ಇಬ್ಬರೂ ಪರಸ್ಪರ ಆರೋಪ, ಟೀಕೆ ಮಾಡಿಕೊಂಡಿದ್ದರು.

ಬಳಿಕ ಕ್ರಿಶ್ಚಿಯಾನೊ ರೊನಾಲ್ಡೊ ಅವರನ್ನು ಫಿಫಾ ವಿಶ್ವಕಪ್​ ವೇಳೆಯೇ ಸೌದಿ ಅರೇಬಿಯಾ ತನ್ನ ಕ್ಲಬ್​ಗೆ ಸೇರಿಸಿಕೊಳ್ಳುವ ಬಗ್ಗೆ ಸುಳಿವು ನೀಡಿತ್ತು. ಇದೀಗ ಮಾತುಕತೆಗಳು ಪೂರ್ಣಗೊಂಡ ಕಾರಣ 2 ವರ್ಷಕ್ಕೆ ಒಪ್ಪಂದವಾಗಿದ್ದು, 4,400 ಕೋಟಿ ರೂಪಾಯಿ ಸಂಭಾವನೆಯನ್ನು ರೊನಾಲ್ಡೊ ಜೇಬಿಗಿಳಿಸಲಿದ್ದಾರೆ.

ಫುಟ್ಬಾಲ್​ ಇತಿಹಾಸದಲ್ಲೇ ಅತಿ ದುಬಾರಿ:ಫಿಫಾ ವಿಶ್ವಕಪ್​ ಆಯೋಜಿಸಿದ ಅರಬ್​ ರಾಷ್ಟ್ರ ಸೌದಿ ಅರೇಬಿಯಾ ಫುಟ್ಬಾಲ್​ ಇತಿಹಾಸದಲ್ಲೇ ಕಂಡು ಕೇಳರಿಯದ ಮೊತ್ತಕ್ಕೆ ರೊನಾಲ್ಡೊ ಅವರನ್ನು ಸೇರಿಸಿಕೊಂಡಿದೆ. ಇಷ್ಟು ಮೊತ್ತಕ್ಕೆ ಈವರೆಗೂ ಯಾವುದೇ ಆಟಗಾರ ಯಾವುದೇ ಕ್ಲಬ್​ಗೆ ಸೇರ್ಪಡೆಯಾಗಿಲ್ಲ. ವಿಶ್ವಮಟ್ಟದಲ್ಲಿ ಅಷ್ಟೇನೂ ಸದ್ದು ಮಾಡದ ಸೌದಿ ಅರೇಬಿಯಾ ಕ್ಲಬ್​ ಅಲ್​ ನಸ್ರ್ ವಿಶ್ವಶ್ರೇಷ್ಠ ಆಟಗಾರನನ್ನು ಸೇರಿಸಿಕೊಂಡು ತಂಡವನ್ನು ಬಲಿಷ್ಠವಾಗಿ ಕಟ್ಟಲು ಯೋಜನೆ ರೂಪಿಸಿದೆ.

ಕ್ರಿಶ್ಚಿಯಾನೊ ರೊನಾಲ್ಡೊ ಪ್ರತಿಕ್ರಿಯೆ:ತಾನು ಸೌದಿ ಕ್ಲಬ್​ ಸೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ರೊನಾಲ್ಡೊ, ಹೊಸ ಫುಟ್ಬಾಲ್ ತಂಡ, ಲೀಗ್ ಅನ್ನು ಆಡಲು ನಾನು ಉತ್ಸುಕನಾಗಿದ್ದೇನೆ. ವಿಶ್ವಕಪ್‌ನಲ್ಲಿನ ಸೌದಿ ಅರೇಬಿಯಾ ತಂಡದ ಇತ್ತೀಚಿನ ಪ್ರದರ್ಶನ ಜಗತ್ತೇ ಅಚ್ಚರಿಯಿಂದ ನೋಡಿದೆ. ಅದರ ಮಹತ್ವಾಕಾಂಕ್ಷೆ ಹೊಂದಿರುವ ತಂಡದ ಭಾಗವಾಗಲಿದ್ದೇನೆ ಎಂದು ಹೇಳಿದ್ದಾರೆ.

ಯುರೋಪಿಯನ್ ಫುಟ್‌ಬಾಲ್‌ನಲ್ಲಿ ನಾನು ಮಾಡಬೇಕೆಂದಿದ್ದೆಲ್ಲವನ್ನೂ ಗೆದ್ದಿದ್ದೇನೆ. ಅರಬ್​ ದೇಶದಲ್ಲಿ ನನ್ನ ಅನುಭವವನ್ನು ಹಂಚಿಕೊಳ್ಳಲು ಇದು ಸರಿಯಾದ ಕ್ಷಣ ಎಂದು ನಾನು ಭಾವಿಸುತ್ತೇನೆ. ಹೊಸ ತಂಡದ ಸಹ ಆಟಗಾರರನ್ನು ಸೇರಲು ಮತ್ತು ಅವರೊಂದಿಗೆ ಕ್ಲಬ್‌ಗೆ ಸಹಾಯ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಯಶಸ್ಸನ್ನು ಸಾಧಿಸೋಣ ಎಂದು ಬರೆದುಕೊಂಡಿದ್ದಾರೆ.

ಓದಿ:ನಿದ್ರೆಯ ಮಂಪರು, ಅತಿವೇಗದಿಂದ ಅಪಘಾತ: ರಿಷಭ್​​ ಪಂತ್​ ದೆಹಲಿಗೆ ಏರ್​ಲಿಫ್ಟ್​ ಸಾಧ್ಯತೆ

ABOUT THE AUTHOR

...view details