ಸೋನೆಪತ್ (ಹರಿಯಾಣ):ಕುಸ್ತಿಪಟುಗಳಾದ ನರಸಿಂಗ್ ಯಾದವ್, ಗುರ್‌ಪ್ರೀತ್ ಸಿಂಗ್ ಹಾಗೂ ಫಿಸಿಯೋಥೆರಪಿಸ್ಟ್ ವಿಶಾಲ್ ರೈ ಅವರಿಗೆ ಕೊರೊನಾ ವಕ್ಕರಿಸಿದೆ. ಯಾವುದೇ ರೋಗ ಲಕ್ಷಣವಿಲ್ಲದಿದ್ದರು, ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೂವರನ್ನು ಸೋನೆಪತ್‌ನ ಭಗವಾನ್ ಮಹಾವೀರ್ ದಾಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ದೀಪಾವಳಿ ವಿರಾಮದ ನಂತರ ಕುಸ್ತಿಪಟುಗಳು ಸೋನೆಪತ್‌ನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಪ್ರಾದೇಶಿಕ ಕೇಂದ್ರದಲ್ಲಿನ ರಾಷ್ಟ್ರೀಯ ಶಿಬಿರಕ್ಕೆ ಸೇರಿದ್ದರು. ಎಸ್‌ಎಐ ಬಿಡುಗಡೆಯ ಪ್ರಕಾರ ಕ್ವಾರಂಟೈನ್ನಲ್ಲಿದ್ದರು. ಕ್ವಾರಂಟೈನ್ ಆದ 6 ನೇ ದಿನ ಶುಕ್ರವಾರ ಇವರನ್ನ ಪರೀಕ್ಷಿಸಲಾಗಿದ್ದು, ಶನಿವಾರ ಇದರ ವರದಿ ಬಂದಿತ್ತು.
ಹಿಂದಿನ ದಿನ, ಯುಎಸ್ನಲ್ಲಿ ಕುಸ್ತಿಪಟು ಭಜರಂಗ್ ಪುನಿಯಾ ಅವರಿಗೆ ಒಂದು ತಿಂಗಳ ತರಬೇತಿ ಶಿಬಿರವನ್ನು ಮಂಜೂರು ಮಾಡಲಾಗಿದೆ ಎಂದು ಎಸ್ಎಐ ತಿಳಿಸಿದೆ. ನವೆಂಬರ್ 26 ರಂದು ನಡೆದ 50 ನೇ ಮಿಷನ್ ಒಲಿಂಪಿಕ್ ಸೆಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಶಿಬಿರವು ಡಿಸೆಂಬರ್ 4 ರಿಂದ ಜನವರಿ 3 ರವರೆಗೆ ಅಮೆರಿಕದ ಮಿಚಿಗನ್‌ನ ಕ್ಲಿಫ್ ಕೀನ್ ವ್ರೆಸ್ಲಿಂಗ್ ಕ್ಲಬ್‌ನಲ್ಲಿ ನಡೆಯಲಿದೆ.
ಲಾಕ್‌ಡೌನ್ ನಂತರ ತರಬೇತಿ ಶಿಬಿರಗಳನ್ನು ಪುನಾರಂಭಿಸಿದ ನಂತರ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಸೋನೆಪತ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಭಜರಂಗ್, ತರಬೇತುದಾರ ಎಂಜಾರಿಯೊಸ್ ಬೆಂಟಿನಿಡಿಸ್ ಮತ್ತು ಫಿಸಿಯೋಥೆರಪಿಸ್ಟ್ ಧನಂಜಯ್ ಅವರೊಂದಿಗೆ ಯುಎಸ್‌ಎಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಎಸ್‌ಎಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.