ನವದೆಹಲಿ:ಕೋವಿಡ್ 19 ಭೀತಿಯಿಂದ ರಾಷ್ಟ್ರೀ ಕ್ರೀಡಾದಿನವಾದ ಆಗಸ್ಟ್ 29ರಂದು ರಾಷ್ಟ್ರಪತಿ ಭವನದಲ್ಲಿ ಪ್ರತಿ ವರ್ಷ ಕ್ರೀಡಾಪಟುಗಳಿಗೆ ನೀಡಲಾಗುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ಒಂದು ಅಥವಾ ಎರಡು ತಿಂಗಳು ವಿಳಂಭವಾಗುವ ಸಾಧ್ಯತೆ ಇದೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.
" ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2020 ಅನ್ನು ಆಯೋಜಿಸಲು ಅನುಮೋದನೆ ಕೋರಿ ಜುಲೈ ಮಧ್ಯದಲ್ಲಿ ಕ್ರೀಡಾ ಸಚಿವಾಲಯವು ಭಾರತದ ರಾಷ್ಟ್ರಪತಿ ಕಚೇರಿಗೆ ಪತ್ರ ಬರೆದಿದೆ. ಆದರೆ ರಾಷ್ಟ್ರಪತಿ ಕಚೇರಿಯಿಂದ ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವರ್ಷ ಪ್ರಶಸ್ತಿಗಳನ್ನು ಖಂಡಿತ ನೀಡಲಾಗುವುದು ಆದರೆ ಪ್ರಶಸ್ತಿ ಕಾರ್ಯಕ್ರಮ ವಿಳಂಭವಾಗುವುದು ಎಂದು ಸುದ್ದಿ ಮೂಲ ಮಾಹಿತಿ ನೀಡಿದೆ ಎಂದು ಎಎಎನ್ಐ ವರದಿ ಮಾಡಿದೆ.