ಕರ್ನಾಟಕ

karnataka

ETV Bharat / sports

ಶೂಟರ್​​ಗಳಿಗೆ ಅಗತ್ಯ ಮದ್ದುಗುಂಡುಗಳನ್ನು ಮನೆಬಾಗಿಲಿಗೆ ತಲುಪಿಸಲಾಗುತ್ತೆ : ಕಿರಣ್​ ರಿಜುಜು

ಈಗಾಗಲೇ ಅಭ್ಯಾಸ ಶುರು ಮಾಡಿರುವ ಉನ್ನತ ಶೂಟರ್​ಗಳಿಗೆ ಅಗತ್ಯ ಮದ್ದುಗುಂಡುಗಳನ್ನು ಅವರುಗಳ ಮನೆಬಾಗಿಲಿಗೆ ತಲುಪಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಎಲ್ಲಾ ಉಪಕರಣಗಳನ್ನು ಒಲಿಂಪಿಕ್ ಕೋರ್ ಗ್ರೂಪ್, ಟಾಪ್ಸ್ ಡೆವಲಪ್ಮೆಂಟಲ್ ಗ್ರೂಪ್, ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ನೀಡಲಾಗುವುದು..

ಕಿರಣ್​ ರಿಜುಜು
ಕಿರಣ್​ ರಿಜುಜು

By

Published : Sep 9, 2020, 9:57 PM IST

ನವದೆಹಲಿ :ಭಾರತದ ಶೂಟರ್​ಗಳು ತಮ್ಮ ಮನೆಯ ವ್ಯಾಪ್ತಿಯಿಂದ ದೂರದ ಪ್ರಯಾಣಿಸದೇ ತಮ್ಮ ಮನೆಯ ವ್ಯಾಪ್ತಿಯಲ್ಲಿ ದೊರೆಯುವ ರೇಂಜ್​ಗಳಲ್ಲಿ ತರಬೇತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಕ್ರೀಡಾ ಸಚಿವ ಕಿರಣ್​ ರಿಜಿಜು ಬುಧವಾರ ಹೇಳಿದ್ದಾರೆ.

ದೆಹಲಿಯ ಸುತ್ತಮುತ್ತ ವಾಸಿಸುತ್ತಿರುವ ಒಲಿಂಪಿಕ್ಸ್ ಕೋರ್​ ಗ್ರೂಪ್​ ಶೂಟರ್​ಗಳು ಜುಲೈ ಮತ್ತು ಆಗಸ್ಟ್​ನಲ್ಲಿ ತಮ್ಮದೇ ಆದ ತರಬೇತಿ ಪುನರಾರಂಭಿಸಿದ ನಂತರ ಭಾರತದ ಕ್ರೀಡಾ ಪ್ರಾಧಿಕಾರ ಡಾ. ಕರ್ಣಿಸಿಂಗ್​ ರೇಂಜ್‌ನ ತೆರೆಯಲು ನಿರ್ಧರಿಸಿದೆ. ಆದರೆ, ಬೇರೆಡೆ ಇರುವ ಶೂಟರ್​ಗಳು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದೆಹಲಿಗೆ ಪ್ರಯಾಣಸುವುದು ಅಪಾಯವಾಗಿರುವುದರಿಂದ ಅವರ ಸ್ವಂತ ಸ್ಥಳದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಬುಧವಾರ ರೇಂಜ್​ಗೆ ಭೇಟಿ ನೀಡಿದ ರಿಜಿಜು, ಶೂಟರ್‌ಗಳೊಂದಿಗೆ ಸ್ವತಃ ಮಾತನಾಡಿದ್ದರಿಂದ ಆ ತರಬೇತಿ ಕುರಿತು ಅವರಲ್ಲಿದ್ದ ಕಳವಳವನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಾ.ಕರ್ಣಿ ಸಿಂಗ್​ ಶೂಟಿಂಗ್​ ಶ್ರೇಣಿ(ರೇಂಜ್​)ಯಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಲಾಗಿದೆ. ತರಬೇತಿ ಪುನಾರಾರಂಭಗೊಂಡಿದೆ. ಮತ್ತು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆ.

ಈಗಾಗಲೇ ಅಭ್ಯಾಸ ಶುರು ಮಾಡಿರುವ ನಮ್ಮ ಉನ್ನತ ಶೂಟರ್​ಗಳಿಗೆ ಅಗತ್ಯ ಮದ್ದುಗುಂಡುಗಳನ್ನು ಅವರುಗಳ ಮನೆಬಾಗಿಲಿಗೆ ತಲುಪಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಿಜಿಜು ಟ್ವೀಟ್​ ಮೂಲಕ ತಿಳಿಸಿದ್ದಾರೆ. ಜೊತೆಗೆ ಎಲ್ಲಾ ಉಪಕರಣಗಳನ್ನು ಒಲಿಂಪಿಕ್ ಕೋರ್ ಗ್ರೂಪ್, ಟಾಪ್ಸ್ ಡೆವಲಪ್ಮೆಂಟಲ್ ಗ್ರೂಪ್, ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ನೀಡಲಾಗುವುದು ಎಂದು ಘೋಷಿಸಿದರು. ಇದರಿಂದಾಗಿ ಶೂಟರ್​ಗಳು ಪ್ರಯಾಣಿಸದೆ ಕೋವಿಡ್​-19ರ ಸಮಯದಲ್ಲಿ ತಮ್ಮ ಮನೆಯ ವ್ಯಾಪ್ತಿಯಲ್ಲಿ ತರಬೇತಿ ಪಡೆಯಬಹುದು ಎಂದು ಮತ್ತೊಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ನ್ಯಾಷನಲ್ ರೈಫಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಎನ್‌ಆರ್‌ಎಐ) ಆರಂಭದಲ್ಲಿ ತನ್ನ ಒಲಿಂಪಿಕ್ ಕೋರ್ ಗುಂಪಿಗೆ ಆಗಸ್ಟ್ 1ರಿಂದ ತರಬೇತಿ ಶಿಬಿರವನ್ನು ಆಯೋಜಿಸಲು ನಿರ್ಧರಿಸಿತ್ತು. ಆದರೆ, ದೇಶಾದ್ಯಂತ ಕೋವಿಡ್​ ಪ್ರಕರಣ ಹೆಚ್ಚಾದ ಕಾರಣ ಅದನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು.

ABOUT THE AUTHOR

...view details