ಕರ್ನಾಟಕ

karnataka

ETV Bharat / sports

Sexual Harassment Case: ಅಪ್ರಾಪ್ತ ಕುಸ್ತಿಪಟು ಮತ್ತು ಅವರ ತಂದೆಯ ಹೇಳಿಕೆ ಸಂಗ್ರಹಣೆಗೆ ಆದೇಶಿಸಿ ನೋಟಿಸ್, ಆಗಸ್ಟ್ 1ಕ್ಕೆ ವಿಚಾರಣೆ ಮುಂದೂಡಿಕೆ - ಭಾರತೀಯ ಕುಸ್ತಿ ಒಕ್ಕೂಟ

ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ, ನ್ಯಾಯಾಲಯವು ಅಪ್ರಾಪ್ತ ಕುಸ್ತಿಪಟು ಮತ್ತು ಆಕೆಯ ತಂದೆಗೆ ನೋಟಿಸ್ ಜಾರಿಗೊಳಿಸಿ ಹೇಳಿಕೆ ನೀಡುವಂತೆ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 1ಕ್ಕೆ ಮುಂದೂಡಿದೆ.

Brij Bhushan Sharan Singh
ಬ್ರಿಜ್ ಭೂಷಣ್ ಸಿಂಗ್

By

Published : Jul 4, 2023, 6:35 PM IST

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪೋಕ್ಸೊ (POCSO) ಪ್ರಕರಣದ ವಿಚಾರಣೆ ಮಂಗಳವಾರ ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನ್ಯಾಯಾಲಯವು ಅಪ್ರಾಪ್ತ ಕುಸ್ತಿಪಟು ಹಾಗೂ ಆಕೆಯ ತಂದೆಗೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 1 ರಂದು ನಡೆಯಲಿದೆ.

ಜೂನ್ 15 ರಂದು ದೆಹಲಿ ಪೊಲೀಸರು ಸಲ್ಲಿಸಿದ ರದ್ದತಿ ವರದಿಯನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು. ನಂತರ ದೂರುದಾರ ಅಪ್ರಾಪ್ತ ಕುಸ್ತಿಪಟು ಮತ್ತು ಆಕೆಯ ತಂದೆಯಿಂದ ಪ್ರತಿಕ್ರಿಯೆ ಕೇಳಿತು. ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಆರಂಭದಲ್ಲಿ ಅಪ್ರಾಪ್ತ ಕುಸ್ತಿಪಟು ಲೈಂಗಿಕ ಶೋಷಣೆ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ನಂತರ, ದೆಹಲಿ ಪೊಲೀಸರು ಪಟಿಯಾಲ ಹೌಸ್ ಕೋರ್ಟ್‌ಗೆ ರದ್ದತಿ ವರದಿಯನ್ನು ಸಲ್ಲಿಸಿದರು ಮತ್ತು ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖಲಿಸಲಾದ ಪ್ರಕರಣದಲ್ಲಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದರು. ಇದರೊಂದಿಗೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಜುಲೈ 7 ರಂದು ವಯಸ್ಕ ಕುಸ್ತಿಪಟುಗಳ ಪ್ರಕರಣದ ವಿಚಾರಣೆ: ವಯಸ್ಕ ಕುಸ್ತಿಪಟುಗಳ ಲೈಂಗಿಕ ಶೋಷಣೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಅವೆನ್ಯೂ ಕೋರ್ಟ್​ಗೆ ಸಲ್ಲಿಸಿದ ಚಾರ್ಜ್‌ಶೀಟ್‌ ವಿಚಾರಣೆ ಜುಲೈ 1 ರಿಂದ ಜುಲೈ 7 ಕ್ಕೆ ಮುಂದೂಡಲಾಗಿದೆ. ಜೂನ್ 15 ರಂದು ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದರ ನಂತರ, ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮಹಿಮಾ ರೈ ಸಿಂಗ್, ಜೂನ್ 22 ರಂದು ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಚಾರ್ಜ್ ಶೀಟ್‌ನ್ನು ಸಂಸದ-ಶಾಸಕ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

ಜನವರಿಯಿಂದ ಕುಸ್ತಿಪಟುಗಳ ಹೋರಾಟ:ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಜನವರಿಯಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಆರಂಭದಲ್ಲಿ ದೆಹಲಿಯ ಜಂತರ್ ಮಂತರ್​ನಲ್ಲಿ ಕುಳಿತು ಆರೋಪ ಮಾಡಿದರು. ಈ ವೇಳೆ ಕ್ರೀಡಾ ಸಚಿವಾಲಯ ಆತಂಕರಿಕ ಸಮಿತಿಯೊಂದನ್ನು ಮಾಡಿ ವಿಚಾರಣೆ ನಡೆಸಿ ವರದಿ ಸ್ವೀಕರಿಸಿತ್ತು. ಈ ಸಮಿತಿಯ ಅಧ್ಯಕ್ಷತೆಯನ್ನು ಪಿಟಿ ಉಷಾ ಅವರಿಗೆ ನೀಡಲಾಗಿತ್ತು.

ಈ ವರದಿಯ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಏಪ್ರಿಲ್​ ತಿಂಗಳ ಕೊನೆಯ ವಾರದಲ್ಲಿ ಮತ್ತೆ ಜಂತರ್​ ಮಂತರ್​ನಲ್ಲಿ ಧರಣಿ ಮಾಡಿದ್ದರು. ಆದರೆ ದೂರ ದಾಖಲಾಗದ ಕಾರಣ ಸುಪ್ರೀಂ ಕೋರ್ಟ್​ಗೆ ದಾವೆ ಹೂಡಿದ್ದರು. ಕೊರ್ಟ್​ ಆದೇಶದಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಆ ವರದಿಯನ್ನು ಜೂನ್​ 15 ರಂದು ಎರಡು ನ್ಯಾಯಾಲಯಗಳಿಗೆ ಪೊಲೀಸರು ಸಲ್ಲಿಸಿದ್ದರು. ಇದರಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದಿದೆ.

ಇದನ್ನೂ ಓದಿ:'WFI ಮುಖ್ಯಸ್ಥರ ವಿರುದ್ಧ ರಸ್ತೆಗಳಲ್ಲಿ ಅಲ್ಲ, ನ್ಯಾಯಾಲಯದಲ್ಲಿ ಹೋರಾಡುತ್ತೇವೆ': ಕುಸ್ತಿಪಟುಗಳ ಸ್ಪಷ್ಟನೆ

ABOUT THE AUTHOR

...view details