ಕರ್ನಾಟಕ

karnataka

ETV Bharat / sports

ಎಂಎಂಎ ಕ್ರೀಡೆಯನ್ನೂ ಬೆಂಬಲಿಸಿ, ಕ್ರೀಡಾ ಪುರಸ್ಕಾರ ನೀಡಿ: ರಿತು ಪೋಗಟ್ ಮನವಿ - ಎಂಎಂಎ ಆಟಗಾರ್ತಿ ರಿತು ಪೋಗಟ್

ಎಂಎಂಎ ಆಟದಲ್ಲಿ ತೊಡಗಿಸಿಕೊಂಡಿರುವ ಹೊಸ ಆಟಗಾರರಿಗಾಗಿ ಎಂಎಂಎ ಅನ್ನು ದೇಶದಲ್ಲಿ ಮತ್ತಷ್ಟು ಬೆಳೆಸಲು ಸಹಕಾರ ನೀಡಬೇಕು ಎಂದು ರಿತು ಪೋಗಟ್​​ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Consider MMA fighters also for national sports awards, urges Ritu Phogat
ಎಂಎಂಎ ಕ್ರೀಡೆಯನ್ನೂ ಬೆಂಬಲಿಸಿ, ಕ್ರೀಡಾ ಪುರಸ್ಕಾರ ನೀಡಿ: ರಿತು ಪೋಗಟ್

By

Published : Sep 8, 2021, 9:23 AM IST

ನವದೆಹಲಿ:ಮೊದಲುಕುಸ್ತಿಪಟುವಾಗಿ ಈಗ ಎಂಎಂಎ (MMA- Mixed Marshal Arts) ಫೈಟರ್​ ಆಗಿರುವ ರಿತು ಪೋಗಟ್ ಅವರು ಎಂಎಂಎ ಅನ್ನು ದೇಶದಲ್ಲಿ ಮತ್ತಷ್ಟು ಬೆಳೆಸಲು ಸಹಕಾರ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಐಎಎನ್​ಎಸ್​ನೊಂದಿಗೆ ಮಾತನಾಡಿದ ರಿತು ಪೋಗಟ್​ ಎಂಎಂಎ ಆಟದಲ್ಲಿ ಸಾಧನೆ ಮಾಡುವ ಸ್ಪರ್ಧಿಗಳಿಗೆ ಅರ್ಜುನ ಪ್ರಶಸ್ತಿಯಂತಹ ರಾಷ್ಟ್ರೀಯ ಕ್ರೀಡಾ ಪುರಸ್ಕಾರಗಳನ್ನೂ ನೀಡಬೇಕೆಂದು ಆಗ್ರಹಿಸಿದ್ದಾರೆ.

ನಾನು ನನಗಾಗಿ ಏನನ್ನೂ ಕೇಳುತ್ತಿಲ್ಲ. ಈ ಆಟದಲ್ಲಿ ತೊಡಗಿಸಿಕೊಂಡಿರುವ ಹೊಸ ಆಟಗಾರರಿಗಾಗಿ ನಾನು ಈ ರೀತಿಯಾಗಿ ಆಗ್ರಹಿಸುತ್ತಿದ್ದೇನೆ. ನಾವೂ ಕೂಡ ಈ ದೇಶವನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ರಿತು ಪೋಗಟ್ ಹೇಳಿದ್ದಾರೆ.

ಎಂಎಂಎ ಸ್ಪರ್ಧೆ ಈಗ ಜನಪ್ರಿಯತೆ ಗಳಿಸುತ್ತಿದೆ. ಸರ್ಕಾರ ಈ ಸ್ಪರ್ಧೆಯನ್ನು ಉತ್ತೇಜಿಸಬೇಕು. ಅರ್ಜುನ ಪ್ರಶಸ್ತಿಯಂತಹ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳನ್ನು ಕೂಡ ಈ ಕ್ರೀಡೆಗೆ ನೀಡಬೇಕು. ಭಾರತದ ಇತರ ಕ್ರೀಡೆಗಳಂತೆ, ಈ ಕ್ರೀಡೆಯನ್ನೂ ಗುರ್ತಿಸಬೇಕು. ಭಾರತದಲ್ಲಿ ನಾವು ಸಾಕಷ್ಟು ಪ್ರತಿಭೆಗಳನ್ನು ಹೊಂದಿದ್ದೇವೆ, ಅವರು ಆಟಕ್ಕೆ ಸೇರಲು ಸಿದ್ಧರಿದ್ದಾರೆ. ಜನರು ನೋಡುವಂತೆ ಎಂಎಂಎ ಪಂದ್ಯಗಳ ಪ್ರಸಾರವೂ ಸರಿಯಾಗಿರಬೇಕು ಎಂದು ರಿತು ಪೋಗಟ್ ಅಭಿಪ್ರಾಯಪಟ್ಟಿದ್ದಾರೆ.

ಈಗ ಸದ್ಯಕ್ಕೆ ರಿತು ಸಿಂಗಾಪುರದಲ್ಲಿ ನಡೆದ ಅಟೊಮಿಕ್ ವೇಟ್ ಗ್ರ್ಯಾಂಡ್ ಪ್ರಿಕ್ಸ್‌ ಚಾಂಪಿಯನ್​ಶಿಪ್​ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಚೀನಾದ ಮೆಂಗ್ ಬೊ ಅವರನ್ನು ರಿತು ಸೋಲಿಸಿದ್ದು, ಸೆಮಿಫೈನಲ್​​​ನಲ್ಲೂ ಉತ್ತಮ ಆಟವಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ:ಮಹಾರಾಷ್ಟ್ರದ ಔರಂಗಾಬಾದ್​​ನಲ್ಲಿ ಮಳೆಯ ಆರ್ಭಟ: ಜನಜೀವನ ಅಸ್ತವ್ಯಸ್ತ

ABOUT THE AUTHOR

...view details