ನವದೆಹಲಿ:ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ 109 + ಕೆಜಿ ಫೈನಲ್‌ನಲ್ಲಿ ಭಾರತದ ಗುರುದೀಪ್ ಸಿಂಗ್ ಕಂಚಿನ ಪದಕ ಜಯಿಸಿದರು. ಫೈನಲ್‌ನಲ್ಲಿ ಗುರುದೀಪ್ ಸಿಂಗ್ ಸ್ನ್ಯಾಚ್ನಲ್ಲಿ 167, ಕ್ಲೀನ್ ಅಂಡ್ ಜರ್ಕ್ನಲ್ಲಿ 223 ಕೆಜಿ ಭಾರ ಎತ್ತಿದರು. ಒಟ್ಟು 390 ಕೆಜಿ ತೂಕವನ್ನು ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.
ಸ್ನ್ಯಾಚ್ನಲ್ಲಿ ಮೊದಲ ಪ್ರಯತ್ನದಲ್ಲಿ 167 ಕೆಜಿ ಎತ್ತುವಲ್ಲಿ ವಿಫಲರಾದ ಗುರುದೀಪ್, ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಮೂರನೇ ಮತ್ತು ಅಂತಿಮ ಪ್ರಯತ್ನದಲ್ಲಿ ಇನ್ನೂ 6 ಕೆಜಿ ಹೆಚ್ಚಿಸಿಕೊಂಡರು ಆದರೆ, ಪೂರ್ಣಗೊಳಿಸುವಲ್ಲಿ ವಿಫಲವಾದರು. ಕ್ಲೀನ್ ಮತ್ತು ಜರ್ಕ್ನಲ್ಲಿ ಮೊದಲ ಯತ್ನದಲ್ಲಿ 207 ಕೆಜಿ ಎತ್ತಿದರು. ಎರಡನೇ ಪ್ರಯತ್ನ ವಿಫಲವಾದರೆ, ಮೂರನೇ ಮತ್ತು ಅಂತಿಮ ಪ್ರಯತ್ನದಲ್ಲಿ 223 ಕೆಜಿಯನ್ನು ಯಶಸ್ವಿಯಾಗಿ ಮುಗಿಸಿದರು. ಸಿಂಗ್ ಒಟ್ಟು 390 ಕೆಜಿ ಭಾರ ಎತ್ತಿದರು.
ಇನ್ನೊಂದೆಡೆ ಭಾರತದ ಮಹಿಳಾ ವೇಟ್‌ಲಿಫ್ಟರ್ ಪೂರ್ಣಿಮಾ ಪಾಂಡೆ 87 + ಕೆಜಿ ಫೈನಲ್‌ನಲ್ಲಿ ಆರನೇ ಸ್ಥಾನ ಗಳಿಸಿದರು. ಸ್ನ್ಯಾಚ್ನಲ್ಲಿ 103 ಕೆಜಿ, ಕ್ಲೀನ್ ಅಂಡ್ ಜರ್ಕ್ನಲ್ಲಿ 125 ಕೆಜಿ ಸೇರಿ 228 ಕೆಜಿ ಮಾತ್ರ ಎತ್ತಿದರು. ಇದರಿಂದ 6ನೇ ಸ್ಥಾನಕ್ಕೆ ಕುಸಿದು ಪದಕದಾಸೆ ಬಿಟ್ಟರು.