ನವದೆಹಲಿ:ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಿನ್ನೆ ಭಾರತಕ್ಕೆ ಲಕ್ಕಿ ಡೇ. 6 ಚಿನ್ನ, 2 ಬೆಳ್ಳಿ, 1 ಕಂಚು ಸೇರಿ 9 ಪದಕಗಳನ್ನು ಕೊಳ್ಳೆ ಹೊಡೆಯಿತು. ಇದರಲ್ಲಿ ಕುಸ್ತಿಪಟುಗಳು 5 ಪದಕ ಬಾಚಿದರು. ಭಜರಂಗ ಪೂನಿಯಾ, ದೀಪಕ್ ಪೂನಿಯಾ, ಸಾಕ್ಷಿ ಮಲಿಕ್ ಚಿನ್ನ ಗೆದ್ದರೆ, , ಅನ್ಯು ಮಲಿಕ್ ಬೆಳ್ಳಿ, ದಿವ್ಯಾ ಕಾಕ್ರ್ಯನ್ ಕಂಚು ಗೆದ್ದರು. ಇನ್ನೊಂದೆಡೆ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಭಾರತ ಸುಧೀರ್ ಚಿನ್ನ ಗೆದ್ದರು.
26 ಸೆಕೆಂಡಲ್ಲಿ ದಿವ್ಯಾಗೆ ಕಂಚು:ಮಹಿಳೆಯರ ಫ್ರೀಸ್ಟೈಲ್ 68 ಕೆಜಿ ವಿಭಾಗದ ಕುಸ್ತಿಯಲ್ಲಿ ದಿವ್ಯಾ ಕಾಕ್ರನ್ ಅವರು ಟಾಂಗಾದ ಟೈಗರ್ ಲಿಲಿ ವಿರುದ್ಧ ನಡೆದ ರೋಚಕ ಸೆಣಸಾಟದಲ್ಲಿ ಕಂಚು ಜಯಿಸಿದರು.
ಕಂಚಿನ ಪದಕಕ್ಕಾಗಿ ನಡೆದ ಗುದ್ದಾಟದಲ್ಲಿ ದಿವ್ಯಾ, ಟೈಗರ್ ಲಿಲ್ಲಿಯನ್ನು ಕೇವಲ 26 ಸೆಕೆಂಡುಗಳಲ್ಲಿ 2-0 ಅಂತರದಲ್ಲಿ ಮಣ್ಣು ಮುಕ್ಕಿಸುವ ಮೂಲಕ ಪದಕ ಬಾಚಿದರು. ಇದು ನಿನ್ನೆ ಕುಸ್ತಿಯಲ್ಲಿ ಬಂದ 5 ನೇ ಪದಕವಾಗಿದೆ.
ಚಾಣಾಕ್ಷತನದ ಆಟ ಪ್ರದರ್ಶಿಸಿದ ದಿವ್ಯಾ, ಟಾಂಗಾದ ಟೈಗಲ್ ಲಿಲ್ಲಿ ವಿರುದ್ಧ ಏಕಸ್ವಾಮ್ಯ ಗೆಲುವು ಪಡೆದರು. ಲಿಲ್ಲಿಯನ್ನು 26 ಸೆಕೆಂಡುಗಳಲ್ಲಿ ನೆಲಕ್ಕೆ ಗುದ್ದಿದ್ದು ದಿವ್ಯಾರ ಆಟದ ವೈಖರಿ ತೋರಿಸಿತು.
ಪ್ಯಾರಾ ಪವರ್ಲಿಫ್ಟರ್ ಸುಧೀರ್:ಕ್ರೀಡಾಕೂಟದ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಹರಿಯಾಣದ ಸುಧೀರ್ ತಮ್ಮ ತಾಕತ್ತು ತೋರಿಸಿ ಚಿನ್ನ ಗೆದ್ದರು. 27 ವರ್ಷದ ಸುಧೀರ್ ಹೆವಿವೇಟ್ ಪ್ಯಾರಾಪರ್ ಲಿಫ್ಟಿಂಗ್ನಲ್ಲಿ ಎರಡು ಪ್ರಯತ್ನದಲ್ಲಿ 430 ಕೆಜಿ ಎತ್ತಿದರು. ಈ ಮೂಲಕ 134.5 ಅಂಕ ಗಳಿಸಿ ಕೂಟ ದಾಖಲೆಯೊಂದಿಗೆ ಸ್ವರ್ಣ ಸಾಧನೆ ಮಾಡಿದರು.