ಬರ್ಮಿಂಗ್ಹ್ಯಾಮ್(ಯುಕೆ):ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ನಿನ್ನೆ ಒಂದೇ ದಿನ ಟೆನಿಸ್, ಸ್ಕ್ವ್ಯಾಶ್, ಹೈಜಂಪ್, ಜುಡೋ, ವೇಟ್ ಲಿಫ್ಟಿಂಗ್ನಲ್ಲಿ ಪದಕ ಸಿಕ್ಕಿದೆ.
ಜುಡೋದಲ್ಲಿ ಮೂರನೇ ಪದಕ:ಮಹಿಳೆಯರ ಜುಡೋ ಸ್ಪರ್ಧೆಯ 78+ ಕೆಜಿ ವಿಭಾಗದಲ್ಲಿ ಭಾರತದ ತುಲಿಕಾ ಮಾನ್ ಬೆಳ್ಳಿ ಪದಕ ಜಯಿಸಿದರು. ಫೈನಲ್ ಪ್ರವೇಶಿಸಿದ್ದ ದೆಹಲಿ ಮೂಲದ ಜುಡೋ ಪಟು, ಕಾಮನ್ವೆಲ್ತ್ನಲ್ಲಿ ವಿಶ್ವ ನಂ 5 ಶ್ರೇಯಾಂಕಿತೆ ಸ್ಕಾಟ್ಲೆಂಡ್ನ ಸಾರಾ ಆ್ಯಡ್ಲಿಂಗ್ಟನ್ ವಿರುದ್ಧ ಸೋಲನುಭವಿಸಿದರು. ಈ ಕೂಟದಲ್ಲಿ ಜುಡೋಗೆ ಭಾರತಕ್ಕೆ ಸಿಕ್ಕ ಮೂರನೇ ಪದಕ ಇದಾಗಿದೆ.
"ಲವ್"ಗೆ ಒಲಿದ ಕಂಚು:ವೇಟ್ ಲಿಫ್ಟಿಂಗ್ನ 109 ಕೆಜಿ ವಿಭಾಗದಲ್ಲಿ ಲವ್ಪ್ರೀತ್ಸಿಂಗ್ ಕಂಚಿನ ಪದಕಕ್ಕೆ ಮುತ್ತಿಟ್ಟರು. ಪಂಜಾಬ್ನ ಲವ್‌ಪ್ರೀತ್ ಒಟ್ಟು 355 ಕೆಜಿ ತೂಕ ಎತ್ತಿ 3ನೇ ಸ್ಥಾನ ಪಡೆದರು. ಸ್ನ್ಯಾಚ್ನಲ್ಲಿ 163, ಕ್ಲೀನ್ಅಂಡ್ ಜರ್ಕ್ನಲ್ಲಿ 192 ಕೆಜಿ ಎತ್ತಿದರು. ವೇಟ್ ಲಿಫ್ಟಿಂಗ್ನಲ್ಲಿ ಭಾರತಕ್ಕೆ ಸಿಕ್ಕ 8ನೇ ಪದಕವಾಗಿದೆ. ಲವ್ಪ್ರೀತ್ಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇದು ಚೊಚ್ಚಲ ಪದಕ ಸಂಭ್ರಮವಾಗಿದೆ.
ಸೌರವ್ಗೆ ಸ್ಕ್ವ್ಯಾಶ್ ಕಂಚು:ಭಾರತದ ತಾರಾ ಸ್ಕ್ವ್ಯಾಶ್ ಆಟಗಾರ ಸೌರವ್ ಘೋಷಾಲ್ ಪುರುಷರ ಸಿಂಗಲ್ಸ್ನಲ್ಲಿ ಐತಿಹಾಸಿಕ ಕಂಚಿನ ಪದಕ ಸಾಧನೆ ಮಾಡಿದರು. ಇಂಗ್ಲೆಂಡ್ನ ಜೇಮ್ಸ್ ವಿಲ್ಸ್ಟ್ರೊಪ್ ವಿರುದ್ಧ 11-6, 11-1,11-4 ಅಂತರದಲ್ಲಿ ಜಯ ಸಾಧಿಸಿದರು. ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿಯೇ ಭಾರತಕ್ಕೆ ಸ್ಕ್ವ್ಯಾಶ್ಗೆ ಸಿಕ್ಕ ಮೊದಲ ಪದಕ ಇದಾಗಿದೆ.